ಪುತ್ತರಿ ಕಪ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಗೆ ಚಾಲನೆ

| Published : Dec 20 2024, 12:45 AM IST

ಪುತ್ತರಿ ಕಪ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತರಿ ಕಪ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಗೆ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಸಮೀಪದ ಮಗ್ಗುಲ ಗ್ರಾಮದ ಶ್ರೀ ಪನ್ನಾಂಗಾಲ ತಮ್ಮೆ ಯುವಕ ಸಂಘದ ವತಿಯಿಂದ ಮೊದಲ ವರ್ಷದ ಪುತ್ತರಿ ಕಪ್‌ ಪ್ರೀಮಿಯರ್‌ಲೀಗ್‌ ಕ್ರಿಕೆಟ್‌ ಟೂರ್ನಿಗೆ ಬುಧವಾರ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಕುವಲೆಕುಟ್ಟಡ ಗಿರೀಶ್‌ ಅವರು ಕೆಂಬಟ್ಟಿ ಜನಾಂಗದ ಅಭಿವೃದ್ಧಿಗೆ ಪ್ರಯತ್ನಗಳು ಸಾಗುತ್ತಿದ್ದರೂ ಕೂಡ ತನ್ನದೆಯಾದ ಸಮಸ್ಯೆಗಳಿಂದ ನಿರೀಕ್ಷಿಸಿದ ಪ್ರಗತಿಕಂಡು ಬರುತ್ತಿಲ್ಲ. ಕ್ರೀಡಾಕೂಟಗಳ ಮೂಲಕ ಜನಾಂಗದವರನ್ನು ಒಂದುಗೂಡಿಸಿ ಆ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ ಎಂದರು.

ವೇದಿಕೆಯಲ್ಲಿ ಚಟ್ಟಕುಟ್ಟಡ ಸುಬ್ಬಕ್ಕಿ ಮುತ್ತಪ್ಪ, ಚವರೆಕುಟ್ಟಡ ಸುಬ್ರಮಣಿ, ಚಿಮ್ಮಿಕುಟ್ಟಡ ವಿಲ್ಮಾ, ಶ್ರೀ ಪನ್ನಾಂಗಾಲತಮ್ಮೆ ಯುವಕ ಸಂಘದ ಅಧ್ಯಕ್ಷ ಕುಪರೆಕುಟ್ಟಡ ಸಾಗರ್ ಪೂವಣ್ಣ, ಚಟ್ಟಕುಟ್ಟಡ ಅಪ್ಪಚು, ಸಂಘದ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಟೂರ್ನಿಯು ಡಿ 19 ರಿಂದ 22 ರವರೆಗೆ ನಡೆಯಲಿದೆ. ಜಿಲ್ಲೆಯ ವಿವಿಧೆಡೆಗಳ 28ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದು, ಡಿ 22ರಂದು ಫೈನಲ್ ಪಂದ್ಯ ನಡೆಯಲಿದೆ.

ಕ್ರೀಡಾಕೂಟದಲ್ಲಿ ಮಹಿಳೆಯರ ಹಗ್ಗಜಗ್ಗಾಟ, ಮಕ್ಕಳಿಗೆ ವಿವಿಧ ಮನರಂಜನಾ ಕಾರ‍್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದ 5 ದಿನಗಳ ಕಾಲವೂ ಪ್ರೇಕ್ಷಕರು ಹಾಗೂ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಟೂರ್ನಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆವ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನುನೀಡಲಾಗುವುದು.