ಸಂವಿಧಾನದ ಕೃಪೆಯಿಂದಾಗಿ ನಾವು ನೆಮ್ಮದಿಯಿಂದ ಬದುಕಿ ಬಾಳಲು ಅವಕಾಶವಾಗಿದೆ. ಸಂವಿಧಾನದ ಸಾರವನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರೂ ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಾರ್ಥ್ಯಕ್ಯ ಕಾಣಲು ಸಾಧ್ಯವಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು: ಸಂವಿಧಾನದ ಕೃಪೆಯಿಂದಾಗಿ ನಾವು ನೆಮ್ಮದಿಯಿಂದ ಬದುಕಿ ಬಾಳಲು ಅವಕಾಶವಾಗಿದೆ. ಸಂವಿಧಾನದ ಸಾರವನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರೂ ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಾರ್ಥ್ಯಕ್ಯ ಕಾಣಲು ಸಾಧ್ಯವಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಸೋಮವಾರ ತಮ್ಮ ಕಚೇರಿಯಲ್ಲಿ ಸರ್ಕಾರಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಬೇಕಾದ ಸಂವಿಧಾನ ಪೀಠಿಕೆಯ ಫಲಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂವಿಧಾನವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುವುದಕ್ಕಿಂತಲೂ ಸಂವಿಧಾನದ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಪಾಲನೆ ಮಾಡಿಕೊಂಡಿದ್ದಾರೆ ಎಂಬುವುದು ಮುಖ್ಯವಾಗುತ್ತದೆ. ಸರ್ವರಿಗೂ ಸಮಾನ ಅವಕಾಶ ನೀಡಿದ ಸಂವಿಧಾನದ ಆಶಯದಂತೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಬಡವರ ಸೇವೆ ಮಾಡುವ ವಾತಾವರಣ ಸೃಷ್ಟಿಸುವುದು ಈ ಫಲಕ ಅಳವಡಿಕೆಯ ಮುಖ್ಯ ಉದ್ದೇಶವಾಗಿದೆ. ಅಧಿಕಾರಿ ವರ್ಗದಲ್ಲಿ ಕರ್ತವ್ಯದ ಅರಿವು, ಮನಸ್ಸು ಪರಿವರ್ತನೆ ಮತ್ತು ಬಡವರ ಕಣ್ಣೀರು ಒರೆಸುವ ಕೆಲಸ ನಡೆಯಬೇಕು ಎಂದು ಹೇಳಿದರು.ಪಂಚಾಯತ್‌ರಾಜ್‌ನ ರಾಜ್ಯ ಮಟ್ಟದ ತರಬೇತುದಾರರಾದ ಮಹಮ್ಮದ್ ಬಡಗನ್ನೂರು ಮಾತನಾಡಿ, ಸಂವಿಧಾನ ಪೀಠಿಕೆಯನ್ನು ಸರ್ಕಾರ ಎಲ್ಲ ಸರ್ಕಾರಿ, ಸಹಕಾರಿ ಸಂಘಗಳು ಅಳವಡಿಸುವಂತೆ ಸುತ್ತೋಲೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆಗಳಲ್ಲಿ ಅಳವಡಿಸಲಾಗುತ್ತಿದೆ ಎಂದರು.

ಪಂಚಾಯತ್‌ರಾಜ್ ತರಬೇತುದಾರರಾದ ಉಮಾನಾಥ ಶೆಟ್ಟಿ ಪೆರ್ನೆ, ಮೇಘಾ ಪಾಲೆತ್ತಾಡಿ, ಸಂಶುದ್ದೀನ್ ಸಂಪ್ಯ, ನಾರಾಯಣ ಕಿಲಂಗೋಡಿ, ಪ್ರತಿಮಾ ರೈ, ಸುಹಾಸ್ ಮತ್ತಿತರರು ಇದ್ದರು.