ಅ.೨ರಂದು ಪುತ್ತೂರು ಶಾರದೋತ್ಸವ ಶೋಭಾಯಾತ್ರೆ

| Published : Sep 28 2025, 02:00 AM IST

ಅ.೨ರಂದು ಪುತ್ತೂರು ಶಾರದೋತ್ಸವ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಶಾರದಾ ಭಜನಾ ಮಂದಿರದ ವತಿಯಿಂದ ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ೯೧ನೇ ವರ್ಷದ ಪುತ್ತೂರು ಶಾರದೋತ್ಸವದ ಅದ್ದೂರಿ ಶೋಭಾಯಾತ್ರೆಯು ಅ.೨ರಂದು ಸಂಜೆ ನಡೆಯಲಿದ್ದು, ಭಜನೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಶಾರದಾ ಭಜನಾ ಮಂದಿರದ ವತಿಯಿಂದ ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ೯೧ನೇ ವರ್ಷದ ಪುತ್ತೂರು ಶಾರದೋತ್ಸವದ ಅದ್ದೂರಿ ಶೋಭಾಯಾತ್ರೆಯು ಅ.೨ರಂದು ಸಂಜೆ ನಡೆಯಲಿದ್ದು, ಭಜನೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ತಿಳಿಸಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.೨ರಂದು ಬೆಳಗ್ಗೆ ೯ ಗಂಟೆಯಿಂದ ಅಕ್ಷರಾಭ್ಯಾಸ ನಡೆಯಲಿದೆ. ೫ ಗಂಟೆಗೆ ಶೋಭಾಯಾತ್ರೆ ಆರಂಭವಾಗಲಿದ್ದು, ಪುತ್ತೂರು ಶಾಸಕ ಅಶೋಕ್ ರೈ ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯ ಮುಂಭಾಗದಲ್ಲಿ ಭಗವಧ್ವಜ ವಾಹನ ಬಳಿಕ ೩೫೦ ಮಂದಿ ಕುಣಿತ ಭಜಕರು, ಕೇರಳ ಕಲಾ ತಂಡ, ಸಹಸ್ರ ಬೆಳಕು ತಂಡ, ದೇವನೃತ್ಯಂ, ವೆಲಕ್ಯಾಟಂ, ಫ್ಲವರ್ ಡ್ಯಾನ್ಸ್, ಸಿಂಗಾರಿ ಕಾವಡಿ, ದೇವಿ ಬೋರ್ಡ್, ಆಂಧ್ರ ಪ್ರದೇಶದ ಗರುಡಾಯನನೃತ್ಯಂ, ಚೆಂಡೆ ಮೇಳ, ಸಿಂಗಾರಿ ಮೇಳ, ಕೊನೆಯಲ್ಲಿ ಶಾರದಾ ಮಾತೆಯ ರಥ ಚಲಿಸಲಿದೆ. ಶೋಭಾಯಾತ್ರೆಯಲ್ಲಿ ಪಟಾಕಿ, ಡಿಜೆ, ನಾಸಿಕ್ ಬ್ಯಾಂಡ್‌ಗಳನ್ನು ಮೂರು ವರ್ಷಗಳ ಹಿಂದೆಯೇ ನಿಷೇಧಿಸಲಾಗಿದೆ. ನಗರದ ಬೊಳುವಾರಿನಿಂದ ದರ್ಬೆ ತನಕ ಮುಖ್ಯರಸ್ತೆಗಳಲ್ಲಿ, ದೇವಾಲಯದ ರಾಜ ಗೋಪುರಗಳಲ್ಲಿ ಮೈಸೂರು ಮಾದರಿ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಬೊಳುವಾರಿನಿಂದ ಆರಂಭಗೊಳ್ಳುವ ಶೋಭಾಯಾತ್ರೆಯು ಮುಖ್ಯರಸ್ತೆ ಮೂಲಕ ದರ್ಬೆ ತನಕ ಸಾಗಲಿದೆ. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಹಿಂದಿರುಗಿ ಅಲ್ಲಿನ ಕೆರೆಯಲ್ಲಿ ಲಿಫ್ಟ್ ವ್ಯವಸ್ಥೆಯ ಮೂಲಕ ದೇವಿಯ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಶೋಭಾಯಾತ್ರೆ ಸಂದರ್ಭ ಬೊಳುವಾರು ವೃತ್ತ, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಬಿಲ್ಡಿಂಗ್, ಬಸ್ ನಿಲ್ದಾಣ, ಹೋಟೆಲ್ ಸುಜಾತ ಹಾಗೂ ದರ್ಭೆವೃತ್ತಗಳಲ್ಲಿ ಕಲಾ ತಂಡಗಳ ಪ್ರದರ್ಶನ ನಡೆಯಲಿದ್ದು, ಭಕ್ತರು ಅಲ್ಲಿ ನಿಂತು ವೀಕ್ಷಿಸಲು ಅವಕಾಶವಿದೆ ಎಂದು ಉತ್ಸವ ಸಮಿತಿಯ ನವೀನ್ ಕುಲಾಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉತ್ಸವ ಸಮಿತಿಯ ವ್ಯವಸ್ಥಾಪಕ ಡಾ. ಸುರೇಶ್ ಪುತ್ತೂರಾಯ, ಸಂಯೋಜಕ ಕೃಷ್ಣ ಎಂ. ಅಳಿಕೆ ಉಪಸ್ಥಿತರಿದ್ದರು.