ಬಸ್‌ ನಿಲ್ದಾಣ ನಿರ್ವಹಣೆ ತಿಳಿಯಲು ಕ್ಯೂಆರ್‌ ಕೋಡ್‌ ಬಿಡುಗಡೆ

| Published : May 10 2025, 01:04 AM IST

ಬಸ್‌ ನಿಲ್ದಾಣ ನಿರ್ವಹಣೆ ತಿಳಿಯಲು ಕ್ಯೂಆರ್‌ ಕೋಡ್‌ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ನಿಲ್ದಾಣಗಳನ್ನು ಹಾಗೂ ಅಲ್ಲಿನ ಸಿಬ್ಬಂದಿಯನ್ನು ಗುರುತಿಸಿ “ನಮ್ಮ ಬಸ್ ನಿಲ್ದಾಣ, ಸ್ವಚ್ಚ ನಿಲ್ದಾಣ " ಎಂಬ ಶೀರ್ಷಿಕೆಯಡಿಯಲ್ಲಿ ಬಹುಮಾನ, ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರು ಈ ಕ್ಯೂಆರ್‌ ಸ್ಕ್ಯಾನ್‌ ಮಾಡಿ ತಮ್ಮ ಅನಿಸಿಕೆಗಳನ್ನು ತಿಳಿಸಬಹುದಾಗಿದೆ,

ಹುಬ್ಬಳ್ಳಿ: "ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ " ಶೀರ್ಷಿಕೆ ಅಡಿಯಲ್ಲಿ ಸಾರಿಗೆ ಸಂಸ್ಥೆಯು ಬಸ್ ನಿಲ್ದಾಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಕ್ಯೂಆರ್‌ (QR) ಕೋಡ್ ಮುದ್ರಿತ ಭಿತ್ತಿಪತ್ರವನ್ನು ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಅ. ಕಾಗೆ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಬಸ್ ನಿಲ್ದಾಣಗಳ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ಶೌಚಾಲಯದ ದರ ಪಟ್ಟಿ ಅಳವಡಿಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಂಚಾರ ನಿಯಂತ್ರಕರು ಪ್ರಯಾಣಿಕರೊಂದಿಗೆ ಸೌಜನ್ಯದ ನಡವಳಿಕೆ ಇತ್ಯಾದಿ ಅಂಶಗಳ ಕುರಿತಾದ ಮೌಲ್ಯಮಾಪನ ಮಾಡಲಾಗುತ್ತಿದೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ನಿಲ್ದಾಣಗಳನ್ನು ಹಾಗೂ ಅಲ್ಲಿನ ಸಿಬ್ಬಂದಿಯನ್ನು ಗುರುತಿಸಿ “ನಮ್ಮ ಬಸ್ ನಿಲ್ದಾಣ, ಸ್ವಚ್ಚ ನಿಲ್ದಾಣ " ಎಂಬ ಶೀರ್ಷಿಕೆಯಡಿಯಲ್ಲಿ ಬಹುಮಾನ, ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರು ಈ ಕ್ಯೂಆರ್‌ ಸ್ಕ್ಯಾನ್‌ ಮಾಡಿ ತಮ್ಮ ಅನಿಸಿಕೆಗಳನ್ನು ತಿಳಿಸಬಹುದಾಗಿದೆ ಎಂದರು.

ಉಪಾಧ್ಯಕ್ಷ ಪೀರಸಾಬ್ ಕೌತಾಳ್, ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ದಿವಾಕರ ಯರಗೊಪ್ಪ, ಶಶಿಧರ ಕುಂಬಾರ, ಅಧಿಕಾರಿಗಳಾದ ಎನ್.ಟಿ. ಪಾಟೀಲ, ಎಂ.ಬಿ. ಕಪಲಿ, ಕೆ.ಎಲ್. ಗುಡೆನ್ನವರ, ಸುಮನಾ ಯು, ರವಿ ಅಂಚಿಗಾವಿ, ನವೀನಕುಮಾರ ತಿಪ್ಪಾ ಮತ್ತು ಇನ್ನಿತರ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

ಅಧಿಕಾರಿಗಳ ಸಭೆ: ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ, ವಿ‍ವಿಧ ವಿಭಾಗಗಳ ಕಾರ್ಯಪ್ರಗತಿ, ಬೇಡಿಕೆ, ವಾಣಿಜ್ಯ ಮಳಿಗೆಗಳ ಮತ್ತು ವಾಣಿಜ್ಯ ಆದಾಯ, ಚಾಲನಾ ಸಿಬ್ಬಂದಿ ನೇಮಕಾತಿ ಮತ್ತು ಖಾಲಿ ಇರುವ ಹುದ್ದೆಗಳ ನೇಮಕಾತಿ ಸೇರಿ ಇತರ ವಿಷಯಗಳ ಕುರಿತಂತೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಗೆ ಸೇರ್ಪಡೆಯಾದ 5 ಹೊಸ ಬೊಲೆರೋ ವಾಹನಗಳ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಪೀರಸಾಬ್ ಕೌತಾಳ್, ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ದಿವಾಕರ ಯರಗೊಪ್ಪ, ಶಶಿಧರ ಕುಂಬಾರ, ಅಧಿಕಾರಿಗಳಾದ ಎನ್.ಟಿ. ಪಾಟೀಲ, ಎಂ.ಬಿ. ಕಪಲಿ, ಕೆ.ಎಲ್. ಗುಡೆನ್ನವರ, ಸುಮನಾ ಯು, ರವಿ ಅಂಚಿಗಾವಿ, ಪಿ.ಆರ್. ಕಿರಣಗಿ ಮತ್ತು ಕೇಂದ್ರ ಕಚೇರಿಯ ಇನ್ನಿತರ ಅಧಿಕಾರಿ, ಸಿಬ್ಬಂದಿಗಳಿದ್ದರು.