ಶಿಕ್ಷಣದ ಪದ್ಧತಿ ಗುಣಮಟ್ಟ ನಿರ್ವಹಣೆ ಅತ್ಯಂತ ಮಹತ್ವವಾದದ್ದು: ಮ.ವೆಂಕಟರಾಮು

| Published : May 24 2024, 12:56 AM IST

ಶಿಕ್ಷಣದ ಪದ್ಧತಿ ಗುಣಮಟ್ಟ ನಿರ್ವಹಣೆ ಅತ್ಯಂತ ಮಹತ್ವವಾದದ್ದು: ಮ.ವೆಂಕಟರಾಮು
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 60-70 ವರ್ಷಗಳ ಹಿಂದೆ ಸರ್ಕಾರದ ಹೆಚ್ಚಿನ ಸೌಲಭ್ಯಗಳು, ವ್ಯವಸ್ಥೆಗಳು, ಪರಿಸ್ಥಿತಿಗಳು ಇಲ್ಲದಿರುವಾಗ ವಿದ್ಯಾರ್ಥಿಗಳಿಗೆ ಬದ್ಧತೆಯ ಶಿಕ್ಷಣ ಸಿಗುತ್ತಿತ್ತು, ಆದರೆ ಇಂದು ಶಿಕ್ಷಣವೆಂದರೆ ಬಿಸಿಊಟ, ಮೊಟ್ಟೆ ಹಾಲು ಮಾಧ್ಯಮ ಇದು ಬೇಕೊ, ಬೇಡ ಎಂಬು ಚರ್ಚೆಯಲ್ಲಿಯೇ ಇದ್ದೇವೆ, ಒಂದು ವ್ಯವಸ್ಥೆ ಸರಿ ಇಲ್ಲವೆಂದಾದರೆ ಇನ್ನೊಂದು ವ್ಯವಸ್ಥೆ ಸರಿಯಾಗಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣದ ಪದ್ದತಿ ಗುಣಮಟ್ಟ ನಿರ್ವಹಣೆ ಅತ್ಯಂತ ಮಹತ್ವವಾದದ್ದು ಎಂದು ಆರ್‌.ಎಸ್.ಎಸ್‌. ನ ಹಿರಿಯ ಮುಖಂಡ ಹಾಗೂ ರಾಹುಲ್‌ ನರ್ಸರಿ, ಪ್ರೈಮರಿ ಮತ್ತು ಪ್ರೌಢಶಾಲೆಯ ಅಧ್ಯಕ್ಷ ಮ.ವೆಂಕಟರಾಮು ಹೇಳಿದರು.

ನಗರದ ಮಹದೇವಪುರದಲ್ಲಿರುವ ರಾಹುಲ್‌ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಶೈಕ್ಷಣಿಕ ಸಂಬಂಧವಾಗಿ ಶಿಕ್ಷಕಿಯರಿಗೆ ಮಾರ್ಗದರ್ಶನ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ದೇಶದ ಅಭಿವೃದ್ಧಿ, ಘನತೆ, ಶ್ರೇಷ್ಠತೆ ಆ ದೇಶದ ಶಿಕ್ಷಣ ಪದ್ದತಿಯನ್ನು ಹಾಗೆಯೇ ಸಾಕ್ಷರತೆಯ ಪ್ರಮಾಣವು ನಿರ್ಧರಿಸುತ್ತದೆ ಹೇಳಿದರು.

ಸುಮಾರು 60-70 ವರ್ಷಗಳ ಹಿಂದೆ ಸರ್ಕಾರದ ಹೆಚ್ಚಿನ ಸೌಲಭ್ಯಗಳು, ವ್ಯವಸ್ಥೆಗಳು, ಪರಿಸ್ಥಿತಿಗಳು ಇಲ್ಲದಿರುವಾಗ ವಿದ್ಯಾರ್ಥಿಗಳಿಗೆ ಬದ್ಧತೆಯ ಶಿಕ್ಷಣ ಸಿಗುತ್ತಿತ್ತು, ಆದರೆ ಇಂದು ಶಿಕ್ಷಣವೆಂದರೆ ಬಿಸಿಊಟ, ಮೊಟ್ಟೆ ಹಾಲು ಮಾಧ್ಯಮ ಇದು ಬೇಕೊ, ಬೇಡ ಎಂಬು ಚರ್ಚೆಯಲ್ಲಿಯೇ ಇದ್ದೇವೆ, ಒಂದು ವ್ಯವಸ್ಥೆ ಸರಿ ಇಲ್ಲವೆಂದಾದರೆ ಇನ್ನೊಂದು ವ್ಯವಸ್ಥೆ ಸರಿಯಾಗಿರಬೇಕು, ಅದು ಜನಸಾಮಾನ್ಯರ ಒಳಿತಿಗಾಗಿ ಇಂದಿನ ಶಿಕ್ಷಣ ಪದ್ದತಿಗಳು ಬಹುಪಾಲು ಜೀವನೋಪಾಯಕ್ಕಾಗಿ ಮಾರ್ಪಾಡಾಗುತ್ತಿರುವುದು ದುರ್ದೈವ ಸಂಗತಿ. ಶಿಕ್ಷಣ ಪಡೆದ ನಂತರ ಸಮಾಜಕ್ಕೆ ಏನು ಒಳ್ಳೆಯದನ್ನು ಮಾಡಬೇಕೆಂಬ ಬದ್ಧತೆಯು ವಿದ್ಯಾರ್ಥಿಗಳಲ್ಲಿ ಉಂಟುಮಾಡುವಂತದ್ದು ಬಹಳ ಮುಖ್ಯ ಇದನ್ನು ಶಿಕ್ಷಕರು ತುಂಬಬೇಕು, ಆಗ ಮಾತ್ರ ಶಿಕ್ಷಕರ ಪವಿತ್ರ ಸ್ಥಾನಕ್ಕೆ ಸಾರ್ಥಕತೆ ತರುವಂತದ್ದು ಎಂದು ಅವರು ತಿಳಿಸಿದರು.

ವಿದ್ಯಾಭಾರತಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಪತಿ ಮಾತನಾಡಿ, ಒತ್ತಡದ ಜೀವನ ಕೇವಲ ವಯಸ್ಕರಿಗೆ ಮಾತ್ರವಲ್ಲ, ಬದಲಾಗಿ ವಿದ್ಯಾರ್ಥಿಗಳಲ್ಲೂ ಇಂದಿನ ಶಿಕ್ಷಣ ಪದ್ದತಿ, ಜೀವನ ಶೈಲಿಯಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಮೊಬೈಲ್‌ ನಿಂದ ಅವರಲ್ಲಿರುವ ಆಲೋಚನೆ ದೃಷ್ಟಿಯನ್ನು ಹಾಳು ಮಾಡುತ್ತಿದೆ. ಆದ್ದರಿಂದ ಇದಕ್ಕೆ ಸಂಬಂಧವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಹಾಗೆಯೇ ವಿದ್ಯಾರ್ಥಿಗಳಲ್ಲಿ ಮಾನಸಿಕವಾಗಿ ಸೀಮಿತವನ್ನು ಕಾಯ್ದುಕೊಳ್ಳುವಂತಹ ವಾತಾವರಣ ಹಾಗೂ ಕ್ರಮಗಳನ್ನು ಸೃಷ್ಟಿಸಬೇಕೆಂದು ತಿಳಿಸಿದರು.

ಸಿಪಿಸಿ ಪಾಲಿಟೆಕ್ನಿಕ್‌ ನ ನಿವೃತ್ತಿ ಪ್ರಾಧ್ಯಾಪಕ ಸಿದ್ದಾರ್ಥ, ಶಾಲೆಯ ಮುಖ್ಯಶಿಕ್ಷಕಿ ಕೆ.ಸಿ. ಸುಮಾ ಸ್ವಾಗತಿಸಿದರು. ಸಹಶಿಕ್ಷಕಿ ಶ್ವೇತಾ ವಂದಿಸಿದರು.