ಗೌರವಯುತ ಬದುಕಿಗಾಗಿ ಮದ್ಯಸೇವನೆ ತೊರೆಯಿರಿ

| Published : Oct 21 2025, 01:00 AM IST

ಗೌರವಯುತ ಬದುಕಿಗಾಗಿ ಮದ್ಯಸೇವನೆ ತೊರೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯವ್ಯಸನಕ್ಕೊಳಗಾದ ಬಹುತೇಕರ ಕುಟುಂಬಗಳ ಮನ - ಮನೆಗಳಲ್ಲಿ ನೆಮ್ಮದಿ ಹಾಳಾಗುತ್ತದೆ. ಸಮಾಜದ ಸದೃಢತೆಗೆ ಉತ್ತಮ ಸಂಸಾರದ ಬದುಕು ಕಟ್ಟಿಕೊಳ್ಳಲು ಕುಡಿತದಂತಹ ಚಟದಿಂದ ದೂರವಾಗಿ ಗೌರವಯುತವಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದು ಹಾಸನ ಅದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು. 8ನೇ ದಿವಸದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರು ಎ. ಮಂಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಪ್ತ ವ್ಯಸನಗಳಲ್ಲಿ ಮದ್ಯವ್ಯಸನ ಬಹಳ ಕೆಟ್ಟದಾಗಿದ್ದು, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಪಣ ತೊಟ್ಟು ದುಶ್ಚಟಗಳನ್ನು ದೂರಮಾಡಬೇಕು ಎಂದರು.

ರಾಮನಾಥಪುರ: ಮದ್ಯವ್ಯಸನಕ್ಕೊಳಗಾದ ಬಹುತೇಕರ ಕುಟುಂಬಗಳ ಮನ - ಮನೆಗಳಲ್ಲಿ ನೆಮ್ಮದಿ ಹಾಳಾಗುತ್ತದೆ. ಸಮಾಜದ ಸದೃಢತೆಗೆ ಉತ್ತಮ ಸಂಸಾರದ ಬದುಕು ಕಟ್ಟಿಕೊಳ್ಳಲು ಕುಡಿತದಂತಹ ಚಟದಿಂದ ದೂರವಾಗಿ ಗೌರವಯುತವಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದು ಹಾಸನ ಅದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು. ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್‌ ವತಿಯಿಂದ 8ನೇ ದಿವಸದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರು ಎ. ಮಂಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಪ್ತ ವ್ಯಸನಗಳಲ್ಲಿ ಮದ್ಯವ್ಯಸನ ಬಹಳ ಕೆಟ್ಟದಾಗಿದ್ದು, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಪಣ ತೊಟ್ಟು ದುಶ್ಚಟಗಳನ್ನು ದೂರಮಾಡಬೇಕು ಎಂದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಲೊಕೇಶ್, ಶಾಂತಮಲ್ಲಪ್ಪ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್‌ .ಕೆ. ಶ್ರೀನಿವಾಸ್, ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿರುಪಾಕ್ಷ, ಯೋಗ, ಶಿಕ್ಷಕರು ಕಾಳಬೋಯಿ ಮುಂತಾದವರು ಇದ್ದರು.