ಸಾರಾಂಶ
ಗಂಗಾವತಿ ನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆ. 10ರಿಂದ ಆ. 12ರ ವರಿಗೆ ಶ್ರೀ ರಾಘವೇಂದ್ರ ಸ್ಪಾಮಿಗಳ 354ನೇ ಆರಾಧನಾ ಮಹೋತ್ಸವ ಜರುಗಲಿದೆ.
ಗಂಗಾವತಿ:
ನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆ. 10ರಿಂದ ಆ. 12ರ ವರಿಗೆ ಶ್ರೀ ರಾಘವೇಂದ್ರ ಸ್ಪಾಮಿಗಳ 354ನೇ ಆರಾಧನಾ ಮಹೋತ್ಸವ ಜರುಗಲಿದೆ ಎಂದು ಮಠದ ವ್ಯವಸ್ಥಾಪಕರಾದ ಸಾಮಾವೇದ ಗುರುರಾಜ್ ಆಚಾರ ಹಾಗೂ ವಿಚಾರಣಕರ್ತ ರಾಮಕೃಷ್ಣ ಜಾಗೀರದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ. 8ರಂದು ಸಾಯಂಕಾಲ ಗೋ ಪೂಜೆ, ಧ್ವಜಾರೋಹಣ, ಧನ-ಧಾನ್ಯ ಲಕ್ಷ್ಮೀ ಪೂಜೆಯೊಂದಿಗೆ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಆ. 9ರಂದು ಋಗ್ವೇದ ಹಾಗೂ ಯಜುರ್ವೇದವರಿಗೆ ನಿತ್ಯ ನೂತನ ಉಪಾಕರ್ಮ ನಡೆಯಲಿದೆ.ಆ. 10 ಪೂರ್ವಾರಾಧನೆ:ಶ್ರೀ ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ ಆ. 10ರಂದು ಜರುಗಲಿದೆ. ಬೆಳಗ್ಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ಕ್ಷೀರಾಭಿಷೇಕ, ಪಾದಪೂಜೆ. ಕನಕಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ. 11ರಂದು ಮಧ್ಯಾರಾಧನೆ ಜರುಗಲಿದ್ದು, ಬೆಳಗ್ಗೆಯಿಂದಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಭಜನೆ, ಎಂದಿನಂತೆ ಕಾರ್ಯಕ್ರಮಗಳು ಜರುಗಲಿವೆ. ಆ. 12ರಂದು ಉತ್ತರಾರಾಧನೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಮಹಾರಥೋತ್ಸವ ಜರುಗಲಿದ್ದು, ಶ್ರೀಮಠದಿಂದ ಸುಂಕದ ಕಟ್ಟೆ ಪ್ರಾಣದೇವರ ದೇಗುಲದ ವರೆಗೂ ರಥ ಸಾಗಲಿದೆ. ಆರಾಧನೆ ಪ್ರಯುಕ್ತ ಮಠದಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಶ್ರೀ ಗುರುರಾಘವೇಂದ್ರ ಅಷ್ಟೋತ್ತರ ಸಂಘದಿಂದ ಶ್ರೀ ಗುರುರಾಘವೇಂದ್ರ ಅಷ್ಟೋತ್ತರ ಪಾರಾಯಣ ಮತ್ತು ಶ್ರೀ ವಿಜಯ ವಿಠ್ಠಲ ಮಹಿಳಾ ಭಜನಾ ಮಂಡಳಿಯವರಿಂದ ಹರಿಕಥಾಮೃತಸಾರ ಪಾರಾಯಣ ಪ್ರಾರಂಭಗೊಂಡಿದೆ.11ರಂದು ಸತ್ಯನಾರಾಯಣ ದೇವಸ್ಥಾನದಲ್ಲಿ ಆರಾಧನೆ:
ಇಲ್ಲಿಯ ಸತ್ಯನಾರಾಯಣ ದೇವಸ್ಥಾನದಲ್ಲಿ ಪೇಜಾವರ ಅಧೋಕ್ಷಜ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಸೂಚನೆ ಮೇರೆಗೆ ಆ. 11ರಂದು ಶ್ರೀ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ ಜರುಗಲಿದೆ ಎಂದು ವ್ಯವಸ್ಥಾಪಕ ವಾದಿರಾಜಚಾರ ಕಲ್ಮಂಗಿ ತಿಳಿಸಿದ್ದಾರೆ. ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಬೆಳಗ್ಗೆ 9 ಗಂಟೆಗೆ ರಥೋತ್ಸವ ಜರುಗಲಿದೆ. ಆ. 6ರಿಂದ ಆರಾಧನೆ ಪ್ರಯುಕ್ತ ವಿದ್ವಾನ್ ಆರ್.ಕೆ. ಪವನಾಚಾರ್ ಅವರಿಂದ ವಿಶೇಷ ಉಪನ್ಯಾಸ ಪ್ರಾರಂಭಗೊಂಡಿದೆ. ಆ. 9ರಂದು ನೂತನ ಉಪಾಕರ್ಮ ಕಾರ್ಯಕ್ರಮ ಜರುಲಿದೆ.