ಸಾರಾಂಶ
ತಾಲೂಕಿನ ಇಡಪನೂರು, ತಲಮಾರಿ, ಎನ್ ಮಲ್ಕಾಪೂರು, ಗ್ರಾಪಂಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಪವಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಯಚೂರು: ತಾಲೂಕಿನ ಇಡಪನೂರು, ತಲಮಾರಿ, ಎನ್ ಮಲ್ಕಾಪೂರು, ಗ್ರಾಪಂಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಪವಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿವಿಧ ಗ್ರಾಪಂಳಿಗೆ ಭೇಟಿ ನೀಡಿದ ಅವರು ಈಗಾಗಲೇ ಸ್ಥಾಪಿಸಿದ "ಕೂಸಿನ ಮನೆ " ಶಿಶುಪಾಲನಾ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಶಿಶುಪಾಲನಾ ಕೇಂದ್ರದಲ್ಲಿರುವ ಮಕ್ಕಳೊಂದಿಗೆ ಬೆರೆತು, ಮಕ್ಕಳು ಪೌಷ್ಟಿಕ ಆಹಾರ ಸೇವಿಸುವುದನ್ನು ವೀಕ್ಷಣೆ ಮಾಡಿದರು.ನಂತರ ಶಿಶು ಅರೈಕೆದಾರರವರೊಂದಿಗೆ ಮಾತನಾಡಿ, ಕೇಂದ್ರವನ್ನು ಸ್ವಚ್ಛವಾಗಿ ಇಟ್ಟುಕೊಳಬೇಕು ಹಾಗೂ ಪೌಷ್ಟಿಕ ಆಹಾರ ಒದಗಿಸುವ ಮುಂಚೆ ತಮ್ಮ ಮತ್ತು ಮಕ್ಕಳ ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಒದಗಿಸುವ ಅಭ್ಯಾಸ ರೂಢಿಸಿಕೊಳ್ಳಲು ತಿಳಿಸಿದರು.
ಕೇಂದ್ರಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಹನುಮಂತ, ಪಿಡಿಒ ಹನುಮಂತಪ್ಪ, ರೇಖಾ ಬಿ, ಉಮಾ, ಐಇಸಿ ಸಂಯೋಜಕ ಧನರಾಜ, ತಾಂತ್ರಿಕ ಸಹಾಯಕರಾದ ಗುಡೆದಪ್ಪ, ಪವನ ಕುಮಾರ್, ಬಿ.ಎಪ್.ಟಿ ಗಿರಿಧರ ಮತ್ತು ಗ್ರಾ.ಪಂ ಸಿಬ್ಬಂಧಿಯವರು ಉಪಸ್ಥಿತರಿದ್ದರು.