ಅಬಕಾರಿ ಅಧಿಕಾರಿಗಳ ದಾಳಿ: 25 ಸಾವಿರು ರು. ಮೌಲ್ಯದ ಮದ್ಯ ವಶ
KannadaprabhaNewsNetwork | Published : Oct 28 2023, 01:15 AM IST
ಅಬಕಾರಿ ಅಧಿಕಾರಿಗಳ ದಾಳಿ: 25 ಸಾವಿರು ರು. ಮೌಲ್ಯದ ಮದ್ಯ ವಶ
ಸಾರಾಂಶ
ಅಬಕಾರಿ ಅಧಿಕಾರಿಗಳ ದಾಳಿ: 25 ಸಾವಿರು ರು. ಮೌಲ್ಯದ ಮದ್ಯ ವಶ
ಚಳ್ಳಕೆರೆ: ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಡಬ್ಬಾ ಅಂಗಡಿಗಳೂ ಸೇರಿದಂತೆ ಎಲ್ಲೆಡೆ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂಬ ಸಾರ್ವಜನಿಕರ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳ ತಂಡ ತಾಲೂಕಿನ ಗೋಪನಹಳ್ಳಿ, ಯಾದಲಗಟ್ಟೆ, ರೆಡ್ಡಿಹಳ್ಳಿ, ಯಲಗಟ್ಟೆಗಳಲ್ಲಿ ದಿಢೀರ್‌ದಾಳಿ ನಡೆಸಿ ಸುಮಾರು ೩೫ ಸಾವಿರ ರು. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು 5 ವಿರುದ್ಧ ಪ್ರಕರಣ ದಾಖಲು ಮಾಡಿದ್ಧಾರೆ. ಚಳ್ಳಕೆರೆ ವಲಯ ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜು ಈ ಬಗ್ಗೆ ಮಾಹಿತಿ ನೀಡಿ, ಚಿತ್ರದುರ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರು, ಚಳ್ಳಕೆರೆ ವಲಯ ಅಬಕಾರಿ ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ, ಹಿರಿಯೂರು ವಲಯ ಭಾರತಮ್ಮ, ಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕಿ ಎ.ವನಿತಾ ಮೊಳಕಾಲ್ಮೂರು ಅಬಕಾರಿ ನಿರೀಕ್ಷಕ ಸಾಧತ್‌ವುಲ್ಲಾ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ಧಾರೆ. ಒಟ್ಟು ೨೩.೦೪೦ ಲೀಟರ್ ಅಕ್ರಮ ಮದ್ಯ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದು, ಅಕ್ರಮ ಮದ್ಯದ ಮೌಲ್ಯ ಸುಮಾರು ೩೫ ಸಾವಿರ ರು. ಎನ್ನಲಾಗಿದೆ. ಅಬಕಾರಿ ನಿರೀಕ್ಷಕ ಟಿ.ರಂಗಸ್ವಾಮಿ, ಡಿ.ಟಿ.ತಿಪ್ಪಯ್ಯ, ಬಿ.ವೀರಣ್ಣ, ಸಿದ್ದೇಶ್‌ನಾಯ್ಕ, ಎನ್.ನಾಗರಾಜು ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು. ------ ೨೭ಸಿಎಲ್‌ಕೆ೨ ಚಳ್ಳಕೆರೆ ನಗರದ ಅಬಕಾರಿ ಇಲಾಖೆಯ ಅಕ್ರಮ ಮದ್ಯ ಮತ್ತು ಆರೋಪಿಯನ್ನು ವಶಕ್ಕೆ ಪಡೆದಿರುವ ಇಲಾಖೆ ಅಧಿಕಾರಿಗಳು.