ಸಾರಾಂಶ
ಮಳೆಯ ನೀರನ್ನು ವ್ಯರ್ಥವಾಗಿ ಹರಿದುಬಿಡದೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿಗಳಲ್ಲಿ ಸಂಗ್ರಹ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಅಂತರ್ಜಲಮಟ್ಟ ಹೆಚ್ಚಲು ಸಾಧ್ಯ.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಮಳೆಯ ನೀರನ್ನು ವ್ಯರ್ಥವಾಗಿ ಹರಿದುಬಿಡದೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿಗಳಲ್ಲಿ ಸಂಗ್ರಹ ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಅಂತರ್ಜಲಮಟ್ಟ ಹೆಚ್ಚಲು ಸಾಧ್ಯ ಎಂದು ತಾಲೂಕಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಹನುಮಂತಪ್ಪ ಹಣಗಿ ಹೇಳಿದರು.ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಶನಿವಾರ ತಾಲೂಕಾ ಮೀನುಗಾರರ ಸಹಕಾರಿ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದ ಅವರು, ಹಿಂಗಾರಿನ ಮಳೆ ಉತ್ತಮವಾಗಿ ಆಗಿರುವುದರಿಂದ ಈ ಸಾರಿ ಮಲಕಸಮುದ್ರ ಕೆರೆ ತುಂಬಿಕೊಂಡು ರೈತರಲ್ಲಿ ಹರ್ಷ ಮೂಡಿಸಿದೆ ಎಂದರು.
ಎಲ್ಲ ಸಂಪತ್ತಿಗಿಂತಲೂ ಜಲ ಸಂಪತ್ತು ಅಮೂಲ್ಯವಾದದ್ದು, ಕೆರೆಗೆ ಕಲುಷಿತ ನೀರು ಸೇರದಂತೆ ಗ್ರಾಮಸ್ಥರು ಹೆಚ್ಚಿನ ಜಾಗೃತಿ ವಹಿಸುವತ್ತ ಗಮನಹರಿಸಬೇಕು. ಈ ಸಾರಿ ಕೃಷ್ಣ ನದಿಯಿಂದ ಕೆರೆಗಳಿಗೆ ನೀರು ಬಿಟ್ಟಿರುವುದರಿಂದ ಎರಡು ನೀರು ಸೇರಿಕೊಂಡು ಕೆರೆ ಸಂಪೂರ್ಣವಾಗಿ ತುಂಬಿಕೊಂಡಿದೆ. ಇದರಿಂದ ಮೀನು ಸಾಕಾಣಿಕೆ ಮಾಡಲು ಹೆಚ್ಚು ಅನುಕೂಲಕರವಾಗಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮೀನಿನ ಮರಿಗಳನ್ನು ಸಹ ಕೆರೆಯಲ್ಲಿ ಬಿಡಲಾಗಿದೆ ಎಂದು ಹೇಳಿದರು.ಮೀನುಗಾರರ ಸಂಘದ ಸದಸ್ಯರಾದ ಅಮರಪ್ಪ ಕುರುಬರ, ಫಕೀರಗೌಡ ಶಿರಗುಂಪಿ, ಮಳೆಯಪ್ಪ ಲಿಂಗನಬಂಡಿ, ಗುಂಡಪ್ಪ ಬಳೂಟಗಿ, ಷಣ್ಮಖಪ್ಪ ಲಿಂಗನಬಂಡಿ, ಹನುಮಂತ ಬಳೂಟಗಿ, ಶರಣಪ್ಪ ಮಾಟರಂಗಿ, ಈರಪ್ಪ ದಸ್ತನವರ್, ಫಕೀರಪ್ಪ ಮೇಟಿ, ದೇವಪ್ಪ ಇಳಗೇರಿ, ಶಿವಪ್ಪ ಗಡಾದ, ರುದ್ರೇಶ ಇಳಗೇರ್, ಕಾರ್ಯದರ್ಶಿ ರಾಜಪ್ಪ ಹಿರೇಮನಿ ಮತ್ತಿತರರು ಇದ್ದರು.