ರಾಜಯೋಗ ಶಿಕ್ಷಣದಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ

| Published : Mar 18 2024, 01:53 AM IST

ರಾಜಯೋಗ ಶಿಕ್ಷಣದಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವನ ಅಂತರಂಗದ ಶಕ್ತಿ ,ವಿಶ್ವಾಸ, ಆತ್ಮಸ್ಥೈರ್ಯ ಹಾಗೂ ಶಾಂತಿ ನೆಮ್ಮದಿ ದೊರಕಲು ಪ್ರತಿಯೊಬ್ಬರು ರಾಜಯೋಗ ಶಿಕ್ಷಣ ಪಡೆದುಕೊಳ್ಳುವುದರಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಮೈಸೂರು ರಾಜಯೋಗ ರಿಟ್ರೀಟ್ ಸೆಂಟರ್ ನ ಪ್ರಾಂಶುಪಾಲರು ಹಾಗೂ ಎಸ್‌ಬಿಎಂನ ನಿವೃತ್ತ ವ್ಯವಸ್ಥಾಪಕ ರಾಜಯೋಗಿ ಬ್ರಹ್ಮಕುಮಾರ ರಂಗನಾಥಶಾಸ್ತ್ರೀಜೀ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಮಾನವನ ಅಂತರಂಗದ ಶಕ್ತಿ ,ವಿಶ್ವಾಸ, ಆತ್ಮಸ್ಥೈರ್ಯ ಹಾಗೂ ಶಾಂತಿ ನೆಮ್ಮದಿ ದೊರಕಲು ಪ್ರತಿಯೊಬ್ಬರು ರಾಜಯೋಗ ಶಿಕ್ಷಣ ಪಡೆದುಕೊಳ್ಳುವುದರಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಮೈಸೂರು ರಾಜಯೋಗ ರಿಟ್ರೀಟ್ ಸೆಂಟರ್ ನ ಪ್ರಾಂಶುಪಾಲರು ಹಾಗೂ ಎಸ್‌ಬಿಎಂನ ನಿವೃತ್ತ ವ್ಯವಸ್ಥಾಪಕ ರಾಜಯೋಗಿ ಬ್ರಹ್ಮಕುಮಾರ ರಂಗನಾಥಶಾಸ್ತ್ರೀಜೀ ಅಭಿಪ್ರಾಯಪಟ್ಟರು.

ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗಡಿಭಾಗವಾದ ಚಾಮರಾಜನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನದ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ರೂಪಿಸಿ ಲಕ್ಷಾಂತರ ಜನ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮಾಡಿ ಪುನೀತರಾಗಿರುವುದು ಬಹಳ ಸಂತೋಷವೆಂದು ತಿಳಿಸಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇಡೀ ವಿಶ್ವದ 157ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 60,000ಕ್ಕೂ ಹೆಚ್ಚು ಸಹೋದರಿಯರ ನೇತೃತ್ವದಲ್ಲಿ ಎಲ್ಲಾ ಕೇಂದ್ರಗಳು ನಿರ್ವಹಣೆಯಾಗುತ್ತಿರುವುದು ಹಾಗೂ ವಿಶ್ವದ ಶಾಂತಿಗಾಗಿ ಪ್ರತಿನಿತ್ಯ ಧ್ಯಾನ ಹಾಗೂ ಮಾನವೀಯ ಮೌಲ್ಯಗಳನ್ನು ವಿಶ್ಕಲ್ಯಾಣಕ್ಕಾಗಿ ಆತ್ಮವಿಶ್ವಾಸದ ಮೂಲಕ, ನಕರಾತ್ಮಕತೆಯನ್ನು ಸಕಾರಾತ್ಮಕತೆಯಲ್ಲಿ ಚಿಂತನೆಗಳನ್ನು ಮೂಡಿಸಿಕೊಂಡು ಜೀವನವನ್ನು ಉನ್ನತಿಗೊಳಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಆತ್ಮಜ್ಞಾನದಿಂದ ಪರಮ ಜ್ಯೋತಿ ಬೆಳಕು ಜ್ಞಾನರೂಪದಲ್ಲಿ ಬೆಳಗಿ ಸತ್ಯದರ್ಶನವನ್ನು ಅನುಭೂತಿ ಮಾಡಲು ಸಕಾಲವಾಗಿದೆ. ಸತ್ಯದರ್ಶನದಿಂದ ಮನಸ್ಸಿನಲ್ಲಿ ಸದಾಕಾಲ ಶಾಂತಿ ಸಮಾಧಾನ ಇರುತ್ತದೆ ಎಂದರು. ಸೇವಾ ಭಾರತೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದ್ವಾದಶ ಲಿಂಗಗಳು ಶಿವನ ಕರ್ತವ್ಯಗಳನ್ನು ದರ್ಶನ ಮಾಡಿಸುವ ಹಾಗೂ ಪರಮ ಪವಿತ್ರವಾದ ಕ್ಷೇತ್ರಗಳು ಭಾರತದ ಎಲ್ಲ ದಿಕ್ಕುಗಳಲ್ಲೂ ಶಿವನ ದರ್ಶನವಾಗುತ್ತದೆ. ಪ್ರತಿ ಗ್ರಾಮಗಳಲ್ಲೂ ಮನೆಮನೆಗಳಲ್ಲೂ ಶಿವನ ಆರಾಧನೆ ನಡೆಯುತ್ತಿದ್ದು ಶಿವ ಧ್ಯಾನದಿಂದ ಮನುಷ್ಯ ಸ್ವರ್ಗ ಸುಖವನ್ನು ಪಡೆಯುತ್ತಾನೆ ದ್ವಾದಶ ಲಿಂಗಗಳ ದರ್ಶನ ಮೊಹಹೋನ್ನತವಾದದ್ದು ಸೋಮನಾಥ, ಶ್ರೀಶೈಲ ಕೇದಾರನಾಥ, ವಾರಣಾಸಿ, ಉಜ್ಜಯಿನಿ ಕ್ಷೇತ್ರಗಳು ಭಾರತೀಯರ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ . ಚಾಮರಾಜನಗರದಲ್ಲಿ ಮೊಟ್ಟ ಮೊದಲ ಬಾರಿಗೆ ದರ್ಶನದ ವ್ಯವಸ್ಥೆ ಮಾಡಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಜನತೆಯ ಪರವಾಗಿ ಹೃದಯಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸಿದರು.ಸಂಸ್ಥೆಯ ಮುಖ್ಯ ಸಂಚಾಲಕರು ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉಪ ತಹಸೀಲ್ದಾರ್‌ ಗಿರಿಜಾ, ನಗರಸಭಾ ಸದಸ್ಯೆ ಮಮತಾ, ಬರಹಗಾರ ಲಕ್ಷ್ಮೀನರಸಿಂಹ, ಬಿ.ಕೆ ಆರಾಧ್ಯ, ನಂಜುಂಡಸ್ವಾಮಿ,ನಾರಾಯಣ ಶೆಟ್ಟಿ, ಸುರೇಶ್ ಎನ್ ಋಗ್ವೇದಿ, ನಟರಾಜ, ಗಡಿನಾಡ ಜನಪದ ಕೋಗಿಲೆಗಳ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಸುರೇಶ್ ನಾಗ್ ರವರು ಭಕ್ತಿಗೀತೆ, ಜನಪದ ಗೀತೆ ಮತ್ತು ಸಂಗೀತ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.