ಸಾರಾಂಶ
ರಾಜೀವನಗರದಲ್ಲಿ ಕನ್ನಡ ನುಡಿ ಕಂದ ಚಿಲಿಪಿಲಿ ಶ್ರೀಗಂಧ ಕಮ್ಮಟ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಂದನಾ ರೈ ಕಾರ್ಕಳ, ಹರಿಣಾಕ್ಷಿ ದಿವಾಕರ್ ಶೆಟ್ಟಿ ಅಲೆವೂರು, ಜನಪದ ಕಲಾವಿದ ಶಂಕರ್ ದಾಸ್, ಪ್ರಕಾಶ್ ಪ್ರಭು ರವೀಂದ್ರ ಕುಮಾರ್ ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಾಥಮಿಕ ಶಾಲಾ ಅಸ್ಥಿತ್ವವನ್ನು ಉಳಿಸಿಕೊಂಡು, ಅವುಗಳನ್ನು ಬೆಳೆಸುವಲ್ಲಿ, ಮಕ್ಕಳ ದಾಖಲಾತಿಗೆ ಪೂರಕವಾದ ಅಂಗನವಾಡಿ ಪುಟಾಣಿಗಳ ಕಮ್ಮಟದ ಆಯೋಜನೆ ಶ್ಲಾಘನೀಯವಾಗಿದೆ. ಗ್ರಾಮೀಣ ಪರಿಸರದ ಅಂಗನವಾಡಿ ಮಕ್ಕಳನ್ನು ಒಂದೆಡೆ ಸೇರಿಸಿ, ಅವರಿಗೆ ಇಷ್ಟವಾಗುವಂತಹ ಆಟಪಾಠ ಚಟುವಟಿಕೆಗಳ ಮೂಲಕ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು. ಆಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಮತ್ತು ಕನ್ನಡ ಶಾಲೆಗಳು ಉಳಿಸಲು ಸಾಧ್ಯ ಎಂದು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ ಕೆ. ಅಭಿಪ್ರಾಯಪಟ್ಟರು.ಅವರು ಇಲ್ಲಿನ ರಾಜೀವನಗರದಲ್ಲಿ ನಡೆದ ಕನ್ನಡ ನುಡಿ ಕಂದ ಚಿಲಿಪಿಲಿ ಶ್ರೀಗಂಧ ಕಮ್ಮಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ಬಡಗುಬೆಟ್ಟು ಅವರು ಕಮ್ಮಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರವಿ ಕೆ. ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮಣಿಪಾಲ ಎಂ.ಐ.ಟಿ.ಯ ಉಪನ್ಯಾಸಕ ಪ್ರೊ. ಗುರುಮೂರ್ತಿ, ಪ್ರಕಾಶ್ ಶೆಣೈ ಪರ್ಕಳ ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಂದನಾ ರೈ ಕಾರ್ಕಳ, ಹರಿಣಾಕ್ಷಿ ದಿವಾಕರ್ ಶೆಟ್ಟಿ ಅಲೆವೂರು, ಜನಪದ ಕಲಾವಿದ ಶಂಕರ್ ದಾಸ್, ಪ್ರಕಾಶ್ ಪ್ರಭು ರವೀಂದ್ರ ಕುಮಾರ್ ಭಾಗವಹಿಸಿದ್ದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಪಿ. ಅವರು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯಕ್ ಅವರು ವಂದಿಸಿದರು. ಸತ್ಯವತಿ ಮತ್ತು ಎಸ್. ಎಸ್. ಪ್ರಸಾದ್ ಅವರು ಕಾರ್ಯಕ್ರಮ ಸಂಯೋಜಿಸಿದರು.