ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ "ರಾಜು ಜೇಮ್ಸ್ ಬಾಂಡ್ " ಚಿತ್ರ ಇದೇ ತಿಂಗಳ ಫೆ.14ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ ಗುರುನಂದನ್ ಈ ಕುರಿತು ಮಾಹಿತಿ ನೀಡಿ, ಚಿತ್ರದಲ್ಲಿ ನಾಯಕ ಅಣ್ಣಾವ್ರ ಅಭಿಮಾನಿ. ಅವರ ಬಾಂಡ್ ಶೈಲಿಯ ಚಿತ್ರಗಳನ್ನು ನೋಡುತ್ತ ಅದೇ ವ್ಯಕ್ತಿತ್ವವನ್ನು ತನ್ನ ಜೀವನದಲ್ಲಿಯೂ ಮೈಗೂಡಿಸಿಕೊಂಡಿರುತ್ತಾನೆ. ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಟ ಆತನಿಗೆ ಜೀವನದಲ್ಲಿ ಎದುರಾಗುವ ಹಲವಾರು ಸಂದಿಗ್ಧ ಪರಿಸ್ಥಿತಿಗಳು, ಆತ ಅದನ್ನೆಲ್ಲ ಹೇಗೆ ನಿಭಾಯಿಸಿ ಜೇಮ್ಸ್ ಬಾಂಡ್ ಆಗುತ್ತಾನೆ ಎನ್ನುವುದೇ ಈ ಚಿತ್ರದ ಕಥಾಹಂದರ. ನಿರ್ದೇಶಕ ದೀಪಕ್ ಮಧುವನಹಳ್ಳಿ ನಿರ್ದೇಶಕರು ಇಡೀ ಚಿತ್ರವನ್ನು ಹೂಮರಸ್ ಆಗಿ ನಿರೂಪಿಸಿದ್ದಾರೆ ಎಂದರು.
ವಿಭಿನ್ನವಾದ ಕಥಾಹಂದರವನ್ನು ಈ ಚಿತ್ರದಲ್ಲಿ ಟ್ರೈ ಮಾಡಿದ್ದೇವೆ, ಕಿರಣ್ ಬರ್ತೂರು ಚಿತ್ರ ನಿರ್ಮಾಣ ಮಾಡಿದ್ದಾರೆ. ಲಂಡನ್ ನಲ್ಲಿ 21 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ 4 ಹಾಡುಗಳು ಮೂಡಿಬಂದಿದ್ದು, ಎಲ್ಲ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ತಿಳಿಸಿದರು.ಸಹ ನಿರ್ಮಾಪಕ ಎಂ.ಎಲ್.ಕೆ. ನಾಯ್ಡು ಮಾತನಾಡಿ, ರಾಜು ಜೇಮ್ಸ್ ಬಾಂಡ್ ಒಂದೊಳ್ಳೆ ಚಿತ್ರ. ಮುಂದೆ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆಯಿದೆ. ಮನೋಹರ್ ಜೋಶಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಗುರುನಂದನ್ ಜೊತೆ ನಾಯಕಿಯಾಗಿ ಮೃದುಲ ನಟಿಸಿದ್ದಾರೆ. ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾನಾಣಿ, ಮಂಜುನಾಥ ಹೆಗಡೆ, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಮೃದುಲ, ಕಿರಣ್, ದರ್ಶನ್ ಇತರರು ಇದ್ದರು.- - - -6ಕೆಡಿವಿಜಿ47.ಜೆಪಿಜಿ:
ರಾಜು ಜೇಮ್ಸ್ ಬಾಂಡ್ ಫಿಲ್ಮ್ ಫೆ.14ರಂದು ರಾಜ್ಯಾದ್ಯಂತ ಬಿಡುಗಡೆಯಾಗುವ ಕುರಿತು ದಾವಣಗೆರೆಯಲ್ಲಿ ನಟ ಗುರುನಂದನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.