ಸಾರಾಂಶ
ಧರ್ಮದ ಉಳಿವಿಗಾಗಿ ಜಾಗೃತಿ ಜಾಥವನ್ನು ಇದೇ ಸೋಮವಾರ ೨೫ರಂದು ಶ್ರೀ ಶಾಸಕ ಎಚ್ ಕೆ ಸುರೇಶ್ ಹಾಗು ಧರ್ಮಸ್ಥಳ ಸ್ವಸಹಾಯಸಂಘ ಹಾಗೂ ಧರ್ಮಸ್ಥಳ ಭಕ್ತಾದಿಗಳ ನೇತೃತ್ವದಲ್ಲಿ ಬೃಹತ್ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಒಂದು ವರ್ಗದವರು ನಮ್ಮ ಸಂಸ್ಕೃತಿಯ ಸನಾತನ ಧರ್ಮ ಹಾಗು ಹಿಂದೂ ದೇಗುಲವನ್ನೇ ಗುರಿಯಾಗಿಟ್ಟುಕೊಂಡು ಅಪಪ್ರಚಾರ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರುನಮ್ಮ ನಡಿಗೆ ಧರ್ಮದ ಜಾಗೃತಿ ಕಡೆಗೆ ಅಭಿಯಾನದ ಅಂಗವಾಗಿ ಸೋಮವಾರ ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಸಂಜಯ್ ಕೌರಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಹಿಂದೂಗಳ ಭಾವನೆಗೆ ದಕ್ಕೆ ತರುವ ಕೆಲಸವನ್ನು ಒಂದು ವರ್ಗ ಮಾಡುತ್ತಿದೆ. ಅವರ ಮೇಲೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರ್ಮದ ಉಳಿವಿಗಾಗಿ ಜಾಗೃತಿ ಜಾಥವನ್ನು ಇದೇ ಸೋಮವಾರ ೨೫ರಂದು ಶ್ರೀ ಶಾಸಕ ಎಚ್ ಕೆ ಸುರೇಶ್ ಹಾಗು ಧರ್ಮಸ್ಥಳ ಸ್ವಸಹಾಯಸಂಘ ಹಾಗೂ ಧರ್ಮಸ್ಥಳ ಭಕ್ತಾದಿಗಳ ನೇತೃತ್ವದಲ್ಲಿ ಬೃಹತ್ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಒಂದು ವರ್ಗದವರು ನಮ್ಮ ಸಂಸ್ಕೃತಿಯ ಸನಾತನ ಧರ್ಮ ಹಾಗು ಹಿಂದೂ ದೇಗುಲವನ್ನೇ ಗುರಿಯಾಗಿಟ್ಟುಕೊಂಡು ಅಪಪ್ರಚಾರ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರತೆ ಬಗ್ಗೆ ಇಡಿ ದೇಶಕ್ಕೆ ಮಾದರಿಯಾಗಿದ್ದು ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಆದರೂ ಸಹ ಕೆಲ ಯೂಟ್ಯೂಬ್ ಗಳಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ನೀಡುವ ಮೂಲಕ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ರಾಜ್ಯದ ಎಲ್ಲೆಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಿದ್ದಾರೆ. ಅಲ್ಲದೆ ಸ್ವಸಹಾಯ ಸಂಘದ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಭಿಯಾಗಿ ಬದುಕಲು ಹತ್ತುಹಲವಾರು ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಸುಳ್ಳು ಅಪಪ್ರಚಾರ ಮಾಡುತ್ತಿರುವ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲಿ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯ ಆಗಲಿ. ಈಗಾಗಲೆ ಎಸ್ ಐ ಟಿ ಯನ್ನು ರಚನೆ ಆಗಿದ್ದು ನಮ್ಮ ಪಕ್ಷವು ಸ್ವಾಗತಿಸುತ್ತದೆ. ಇಲ್ಲಿ ನ್ಯಾಯ ಸಿಗಬೇಕು. ತಾಲೂಕಿನಲ್ಲಿ ಧರ್ಮ ಜಾಗೃತಿಗೆ ಶ್ರೀ ಕ್ಷೇತ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಾಣೇನಹಳ್ಳಿ ನವೀನ್ , ನಗರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಛಲವಾದಿ ಮಹಾಸಭಾದ ತಾಲೂಕು ಅದ್ಯಕ್ಷ ತೆಂಡೇಕೆರೆ ರಮೇಶ್ ಹಾಜರಿದ್ದರು.;Resize=(128,128))
;Resize=(128,128))