ಶಿರೂರು ಮೂಲ ಮಠದಲ್ಲಿ ರಾಮನವಮಿ ಪೂರ್ವಭಾವಿ ಸಭೆ

| Published : Apr 07 2024, 01:48 AM IST

ಶಿರೂರು ಮೂಲ ಮಠದಲ್ಲಿ ರಾಮನವಮಿ ಪೂರ್ವಭಾವಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿರೂರು ಮೂಲಮಠದಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಆಚರಣೆಯ ರೂಪು ರೇಖೆ ವ್ಯವಸ್ಥೆ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಠದ ದಿವಾನರಾದ ಉದಯ ಸರಳತ್ತಾಯ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಶಿರೂರು ಗ್ರಾಮದಲ್ಲಿರುವ ಶಿರೂರು ಮೂಲಮಠದಲ್ಲಿ ಏ. 9ರಿಂದ 18ರ ವರೆಗೆ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ವೈಭವದಿಂದ ನಡೆಯಲಿರುವ ಶ್ರೀ ರಾಮ ನವಮಿ ಮಹೋತ್ಸವ ಆಚರಣೆಯ ರೂಪು ರೇಖೆ ವ್ಯವಸ್ಥೆ ಬಗ್ಗೆ ಪೂರ್ವಭಾವಿ ಸಭೆ ಭಾನುವಾರ ಉಡುಪಿ ಶ್ರೀಮಠದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಠದ ದಿವಾನರಾದ ಉದಯ ಸರಳತ್ತಾಯ ವಹಿಸಿದ್ದರು. ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಮಂಜ, ಉಡುಪಿ ತಾಲೂಕು ಸಂಘದ ಅಧ್ಯಕ್ಷ ಮಂಜುನಾಥ್ ಉಪಾಧ್ಯ, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್, ತುಳು ಶಿವಳ್ಳಿ ಮಾಧ್ವ ಮಂಡಲದ ಅಧ್ಯಕ್ಷ ರವಿಪ್ರಕಾಶ್, ಶ್ರೀಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.

ಶ್ರೀನಿವಾಸ್ ಬಾದ್ಯಾ, ಶ್ರೀನಿವಾಸ್ ಬಲ್ಲಾಳ್, ಜಯರಾಮ್ ಆಚಾರ್ಯ, ಶೋಭಾ ಉಪಾಧ್ಯಾಯ, ವಾಸುದೇವ ಆಚಾರ್ಯ ಹಾಗೂ ಎಲ್ಲ ವಲಯದ ಪದಾಧಿಕಾರಿಗಳು, ಹಿರಿಯರು, ಮಹಿಳೆಯರು ಸಲಹೆ ಸೂಚನೆ ನೀಡಿ ಸಂಕಲ್ಪ ಬದ್ಧರಾಗುವುದಾಗಿ ಭರವಸೆ ನೀಡಿರು. ಶ್ರೀ ಮಠದ ದಿವಾನರು ಪ್ರಸ್ತಾವನೆ ಮಾತುಗಳನ್ನಾಡಿ, ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ ವಂದಿಸಿದರು.