ಏಪ್ರಿಲ್ ನಲ್ಲಿ ರಂಭಾಪುರಿ ಶ್ರೀ ಪ್ರವಾಸ

| Published : Mar 30 2024, 12:45 AM IST

ಸಾರಾಂಶ

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಏಪ್ರಿಲ್ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ಪ್ರಕಟಣೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಏಪ್ರಿಲ್ ತಿಂಗಳಿನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಪೀಠದ ಪ್ರಕಟಣೆ ತಿಳಿಸಿದೆ.

ಏ.1ರಂದು ಬೈಲಹೊಂಗಲ ತಾಲೂಕು ವಣ್ಣೂರು ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಾರಂಭ, 2ರಂದು ತೀರ್ಥಹಳ್ಳಿ ತಾಲೂಕು ಕವಲೇದುರ್ಗ ಮಠದಲ್ಲಿ ಇಷ್ಟಲಿಂಗ ಮಹಾಪೂಜಾ, 3ರಂದು ರಾಣೆಬೆನ್ನೂರು ತಾಲೂಕು ಲಿಂಗದಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜಾ, 4ರಂದು ಅಜ್ಜಂಪುರ ತಾಲೂಕು ಗೌರಾಪುರದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 5ರಂದು ಹೊನ್ನಾಳಿ ತಾಲೂಕು ಕುಳಗಟ್ಟಿಯಲ್ಲಿ ಇಷ್ಟಲಿಂಗ ಮಹಾಪೂಜಾ, 6ರಂದು ಕಡೂರು ತಾಲೂಕು ಹೊಗರೆಖಾನ್ ಗ್ರಾಮದಲ್ಲಿ ಸಿದ್ದೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ಸಮಾರಂಭ, 7ರಂದು ಚಿಕ್ಕಮಗಳೂರು ತಾಲೂಕು ಮುತ್ತಿನಪುರದ ವೀರಭದ್ರೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸುವರು.

೮ ರಂದು ಹುಬ್ಬಳ್ಳಿ ತಾಲೂಕು ತಿರುಮಲಕೊಪ್ಪದ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಧರ್ಮ ಜಾಗೃತಿ ಸಮಾರಂಭ, 9ರಂದು ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ , 10ರಂದು ಹುಬ್ಬಳ್ಳಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 11 ಹಾಗೂ 12ರಂದು ಧಾರವಾಡ ತಾಲೂಕು ಅಮ್ಮಿನ ಭಾವಿಯಲ್ಲಿ ಧರ್ಮ ಸಮಾರಂಭದ ಸಾನ್ನಿಧ್ಯ ಹಾಗೂ ನೂತನ ರಥೋತ್ಸವಕ್ಕೆ ಚಾಲನೆ ನೀಡುವರು.

13ರಂದು ಹುಬ್ಬಳ್ಳಿ ತಾಲೂಕು ಹಳ್ಳಿಯಾಳದಲ್ಲಿ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ಹಾಗೂ ಧರ್ಮ ಸಮಾರಂಭ, 14ರಂದು ಹಾವೇರಿ ತಾಲೂಕು ನೆಗಳೂರಿನಲ್ಲಿ ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಸಮಾರಂಭ, 15ರಂದು ಕಲಘಟಗಿ ತಾಲೂಕು ಸಂಗೇದೇವರಕೊಪ್ಪದಲ್ಲಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ, 16ರಂದು ಕಲಘಟಗಿ ತಾಲೂಕು ಬೇಗೂರು ಗ್ರಾಮದಲ್ಲಿ ಗ್ರಾಮದೇವಿ ಪ್ರತಿಷ್ಠಾಪನಾ ಸಮಾರಂಭ, 17ರಂದು ಚಡಚಣ ತಾಲೂಕು ಏಳಗಿ ಪಿ.ಎಸ್. ಗ್ರಾಮದಲ್ಲಿ ವೀರಭದ್ರಸ್ವಾಮಿ ಮಹಾದ್ವಾರ ಉದ್ಘಾಟನಾ ಸಮಾರಂಭ, 18ರಂದು ಅಫಜಲಪುರ ತಾಲೂಕು ಕರಟಗಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ, 19ರಂದು ಚಿತ್ತಾಪುರ ತಾಲೂಕು ಸಿದ್ಧೇಶ್ವರ ಜ್ಞಾನಧಾಮದಲ್ಲಿ ಧರ್ಮ ಸಮಾರಂಭ, 23ರಂದು ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ವಾಸ್ತವ್ಯ ಮಾಡಿ ಭಕ್ತಾದಿಗಳಿಗೆ ದರ್ಶನ ಆಶೀರ್ವಾದ ನೀಡುವರು. 29ರಂದು ಕುಂದಗೋಳ ತಾಲೂಕು ಪಶುಪತಿಹಾಳದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ೨೯ಬಿಹೆಚ್‌ಆರ್ ೪: ರಂಭಾಪುರಿ ಶ್ರೀ