ಸಾರಾಂಶ
- ಬೆಳಗಾವಿ ಚಲೋ, ಬೆಂಗಳೂರು ಚಲೋ ಹೋರಾಟ ನಡೆಸುತ್ತೇವೆ: ಹೊದಿಗೆರೆ ರಮೇಶ್ ಆಗ್ರಹ
- - -- ಶೋಷಿತ ಸಮುದಾಯಗಳಲ್ಲಿ ಹುಟ್ಟಿರುವುದು ನಮ್ಮ ತಪ್ಪಲ್ಲ
- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್: ಅಸಮಾಧಾನ- - -
ಚನ್ನಗಿರಿ: ಬೆಳಗಾವಿಯ ಬಿ.ಕೆ.ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಿಕ್ಕೋಡಿಯ ಮಾಜಿ ಸಂಸದ ರಮೇಶ್ ಕತ್ತಿ ವಾಲ್ಮೀಕಿ ಬೇಡ ನಾಯಕ ಸಮಾಜಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಒತ್ತಾಯಿಸಿದರು.ಸೋಮವಾರ ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಾಲ್ಮೀಕಿ ಬೇಡ ನಾಯಕ ಸಮಾಜಕ್ಕೆ ಅವಮಾನಿಸಿರುವ ಜಿ ಸಂಸದ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ದೂರು ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ತನ್ನ ಬೆಂಬಲಿಗರೊಂದಿಗೆ ಮಾತನಾಡುವಾಗ ಅವಾಚ್ಯ ಶಬ್ದಗಳಿಂದ ವಾಲ್ಮೀಕಿ ನಾಯಕ ಸಮುದಾಯವನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ವಾಲ್ಮೀಕಿ ಸಮುದಾಯಕ್ಕೆ ನೋವಾಗಿದೆ ಎಂದರು.
ಶೋಷಿತ ಸಮುದಾಯಗಳಲ್ಲಿ ಹುಟ್ಟಿರುವುದು ನಮ್ಮ ತಪ್ಪಲ್ಲ. ನಾವ್ಯಾರೂ ಇದೇ ಸಮಾಜದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ನಾವು ಸಹ ಮೇಲ್ವರ್ಗದವರಂತೆ ಮನುಷ್ಯರು. ನಮಗೂ ಈ ಸಮಾಜದಲ್ಲಿ ಬದುಕುವ ಹಕ್ಕಿದೆ. ಈ ಕೂಡಲೇ ರಮೇಶ್ ಕತ್ತಿ ಅವಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಇರುವ ವಾಲ್ಮೀಕಿ ನಾಯಕರು ಬೆಳಗಾವಿ ಚಲೋ, ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಬಸವಾಪುರ ರಂಗನಾಥ್, ಗುರುರಾಜಪುರ ಹರೀಶ್, ಮಲ್ಲಪ್ಪ, ಗುಡ್ಡವ್ವರ ನಾಗರಾಜ್, ಜಿತೇಂದ್ರರಾಜ್, ಹನುಮಂತಪ್ಪ, ಶ್ರೀನಿವಾಸ್, ರಂಗಸ್ವಾಮಿ, ರುದ್ರಪ್ಪ, ಕೊಂಡದಹಳ್ಳಿ ಜಯಣ್ಣ, ತಿಪ್ಪೇಶಪ್ಪ ಮೊದಲಾದವರು ಹಾಜರಿದ್ದರು.
- - --20ಕೆಸಿಎನ್‌ಜಿ1:
ವಾಲ್ಮೀಕಿ ಬೇಡ ನಾಯಕ ಸಮಾಜಕ್ಕೆ ಜಾತಿನಿಂದನೆ ಮಾಡಿರುವ ಮಾಜಿ ಸಂಸದ ರಮೇಶ್ ಕತ್ತಿ ಅವರನ್ನು ಬಂಧಿಸುವಂತೆ ಚನ್ನಗಿರಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಪೊಲೀಸರಿಗೆ ದೂರು ನೀಡಿದರು.