ಪ್ರೀತಿ,ವಿಶ್ವಾಸ, ಸಹೋದರತೆ ಸಮಾಜಭಿವೃದ್ಧಿಯೇ ಈ ಹಬ್ಬದ ಸಂದೇಶ. ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತ ನಮ್ಮ ಉದ್ದೇಶ
ಕಾರಟಗಿ: ಹಿಂದುಗಳಿಗೆ ಪವಿತ್ರ ಶ್ರಾವಣ ಮಾಸದಂತೆ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಪವಿತ್ರ ಹಬ್ಬ. ರಂಜಾನ್ ಎಲ್ಲ ಜೀವನದಲ್ಲಿ ಹೊಸ ಉತ್ಸಾಹ ನೆಮ್ಮದಿ ತರಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ವಲೀಸಾಬ್ ದರ್ಗಾ ಆವರಣದ ಈದ್ಗಾ ಮೈದಾನದಲ್ಲಿ ರಂಜಾನ್ ನಿಮಿತ್ತ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶನಿವಾರ ಮಾತನಾಡಿದರು.ಪ್ರೀತಿ,ವಿಶ್ವಾಸ, ಸಹೋದರತೆ ಸಮಾಜಭಿವೃದ್ಧಿಯೇ ಈ ಹಬ್ಬದ ಸಂದೇಶ. ಅಭಿವೃದ್ಧಿಯ ಕರ್ನಾಟಕ, ಬಲಿಷ್ಠ ಭಾರತ ನಮ್ಮ ಉದ್ದೇಶ. ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ರಂಜಾನ್ ಶಾಂತಿ ಸಹನೆ, ಸಹಬಾಳ್ವೆ ಸಾರುವ ಹಬ್ಬವಾಗಿದೆ. ಇಸ್ಲಾಂ ಸಹೋದರರಿಗೆ ಉಪವಾಸ ವೃತ ಆಚರಿಸುವ ರಂಜಾನ್ ಮಹತ್ವದ ಹಬ್ಬವಾಗಿದೆ. ಇದು ಪರಸ್ಪರ ಸೌಹಾರ್ದತೆ ಮತ್ತು ಭಾವೈಕ್ಯತೆಯ ಪ್ರತೀಕವಾಗಿದೆ ಎಂದರು.
ಇದೇ ಆವರಣದಲ್ಲಿ ಮುಸ್ಲಿಂ ಸಮುದಾಯ ಭವನಕ್ಕೆ ಈಗಾಗಲೇ ಕೋಟಿ ಅನುದಾನ ನೀಡಲಾಗಿದೆ.ಕಾಮಗಾರಿ ಕೂಡ ನಡೆದಿದೆ.ಮುಂದಿನ ದಿನಗಳಲ್ಲಿ ಹೆಚ್ಚುವರಿ ಇನ್ನು ಒಂದು ಕೋಟಿ ಭವನಕ್ಕೆ ನೀಡುವುದಾಗಿ ಸಚಿವ ತಂಗಡಗಿ ಪ್ರಕಟಿಸಿದರು.ಸರ್ಕಾರದ ಗಮನ:
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ತಂಗಡಗಿ, ಬಸಾಪುರ ಬಳಿಯ ತುಂಗಭದ್ರಾ ಎಡದಂಡೆ ನಾಲೆಯ ಬೊಂಗಾ ಬಿದ್ದ ಸ್ಥಳಕ್ಕೆ ಭೇಟಿ ನೀಡಿದ್ದು, ಶೀಘ್ರದಲ್ಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಒಳಮೈ ಭಾಗ ಹಂತ ಹಂತವಾಗಿ ಮೇಲೇರದಂತೆ ಆಣೆಕಟ್ಟೆಯಿಂದ ಕುಡಿವ ನೀರಿಗಾಗಿ ನಾಲೆಗೆ ನೀರು ಬಿಡಲಾಗುವುದು. ಕಾಲುವೆ ಕೊಚ್ಚಿಕೊಂಡು ನೀರು ಜಮೀನುಗಳಿಗೆ ನುಗ್ಗಿ ರೈತರ ಬೆಳೆ ನಷ್ಟವಾಗಿರುವ ಕುರಿತು ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು.ಮಾ. ೨೨ ಸೋಮವಾರ ಅಧಿಕಾರಿಗಳ ಸಭೆ ಕರೆಯಲಾಗಿದೆ, ನಂತರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ಕ್ರಸ್ಟ್ ಗೇಟ್ ಕಾಮಗಾರಿ ಭರದಿಂದ ಸಾಗಿದ್ದು, ೧೮ ಗೇಟ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಎಲ್ಲ ಗೇಟ್‌ಗಳ ದುರಸ್ತಿ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದರು.