ಸಾರಾಂಶ
ತೆರವಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ರಂಗಸಮುದ್ರ ಗ್ರಾಪಂಗೆ ಚುನಾವಣೆ ನಡೆದಿದ್ದು ಗ್ರಾಪಂನ ನೂತನ ಅಧ್ಯಕ್ಷರಾಗಿ ಮಾರಕ್ಕ ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ತೆರವಾಗಿದ್ದ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿನ ರಂಗಸಮುದ್ರ ಗ್ರಾಪಂಗೆ ಚುನಾವಣೆ ನಡೆದಿದ್ದು ಗ್ರಾಪಂನ ನೂತನ ಅಧ್ಯಕ್ಷರಾಗಿ ಮಾರಕ್ಕ ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.ತಾಲೂಕಿನ ರಂಗಸಮುದ್ರ ಗ್ರಾಪಂನಲ್ಲಿ ಒಟ್ಟು 18 ಮಂದಿ ಸದಸ್ಯರಿದ್ದು ಈ ಪೈಕಿ ಅಧ್ಯಕ್ಷ ಸ್ಥಾನ ಬಯಸಿ ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲದಿಂದ ಸಲ್ಲಿಸಿದ್ದ ರಂಗಸಮುದ್ರ ಸುಗುಣಮ್ಮ ನಾಮಪತ್ರ ವಾಪಸ್ಸು ಪಡೆದಿದ್ದು ಅಂತಿಮವಾಗಿ ಜೆಡಿಎಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಬೆಳ್ಳಿಬಟ್ಟಲು ಮಾರಕ್ಕ ರಾಜಣ್ಣ ಗ್ರಾಪಂನ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಡಿ.ಎನ್.ವರದರಾಜು ಕಾರ್ಯನಿರ್ವಹಿಸಿದ್ದು ಗ್ರಾಪಂ ಪಿಡಿಒ ದಾದಲೂರಪ್ಪ ಸೇರಿದಂತೆ ತಾಲೂಕು ಜೆಡಿಎಸ್ ಮುಖಂಡರಾದ ಕೆ.ವಿ.ಗಿರಿರಾಜ್, ಮಾಜಿ ಗ್ರಾಪಂ ಅಧ್ಯಕ್ಷ ಓಬಳಾಪುರ ಸುರೇಂದ್ರಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ಓಬಳಾಪುರ ತಿಪ್ಪೇಸ್ವಾಮಿ, ನಂಜುಂಡಪ್ಪ ಹಾಗೂ ಸಿ.ಟಿ.ಮಾರಪ್ಪ ಸೇರಿದಂತೆ ಇತರೆ ಗ್ರಾಪಂನ ಬೆಂಬಲಿತ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.