ಏಪ್ರಿಲ್ 20ರಿಂದ ಆರಂಭವಾಗಿರುವ ಜಾತ್ರಾ ಮಹೋತ್ಸವ 25ರವರೆಗೆ ನಡೆಯಲಿದೆ. ಇದರ ಅಂಗವಾಗಿ ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯುತ್ತಿವೆ. ಮೊದಲ ದಿನ ದೇವರಿಗೆ ಪಂಚಾಮೃತ ಅಭಿಷೇಕ, ಗಂಗಾಸ್ನಾನ, ಬಲಿಪ್ರದಾನೋತ್ಸವ, ಸಂಪ್ರೋಕ್ಷಣೆ, ರಕ್ಷಾಬಂಧನ ಹಾಗೂ ಪುಷ್ಪಮಂಟಪೋತ್ಸವ ಸೇರಿದಂತೆ ಹಲವು ಪೂಜಾ ವಿಧಿಗಳು ನೆರವೇರಿಸಲಾಯಿತು. ಏಪ್ರಿಲ್ 21ರಂದು ನವಿಲೋತ್ಸವ, ಗಜೇಂದ್ರ ಮೋಕ್ಷೋತ್ಸವ, ಗರುಡೋತ್ಸವ, ಲಕ್ಷ್ಮೀ ಕಲ್ಯಾಣೋತ್ಸವ ಹಾಗೂ ಅಂಬಾರಿ ಉತ್ಸವಗಳು ನಡೆದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆಪುರ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಭಕ್ತಿ, ವೈಭವ ಮತ್ತು ಸಂಪ್ರದಾಯದ ಸೊಗಡಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಏಪ್ರಿಲ್ 20ರಿಂದ ಆರಂಭವಾಗಿರುವ ಜಾತ್ರಾ ಮಹೋತ್ಸವ 25ರವರೆಗೆ ನಡೆಯಲಿದೆ. ಇದರ ಅಂಗವಾಗಿ ಪ್ರತಿದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯುತ್ತಿವೆ. ಮೊದಲ ದಿನ ದೇವರಿಗೆ ಪಂಚಾಮೃತ ಅಭಿಷೇಕ, ಗಂಗಾಸ್ನಾನ, ಬಲಿಪ್ರದಾನೋತ್ಸವ, ಸಂಪ್ರೋಕ್ಷಣೆ, ರಕ್ಷಾಬಂಧನ ಹಾಗೂ ಪುಷ್ಪಮಂಟಪೋತ್ಸವ ಸೇರಿದಂತೆ ಹಲವು ಪೂಜಾ ವಿಧಿಗಳು ನೆರವೇರಿಸಲಾಯಿತು. ಏಪ್ರಿಲ್ 21ರಂದು ನವಿಲೋತ್ಸವ, ಗಜೇಂದ್ರ ಮೋಕ್ಷೋತ್ಸವ, ಗರುಡೋತ್ಸವ, ಲಕ್ಷ್ಮೀ ಕಲ್ಯಾಣೋತ್ಸವ ಹಾಗೂ ಅಂಬಾರಿ ಉತ್ಸವಗಳು ನಡೆದಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಮಂಗಳವಾರ ನಡೆದ ಬ್ರಹ್ಮರಥೋತ್ಸವದ ವೇಳೆ ಸಂಪ್ರದಾಯದಂತೆ ಜಯಮ್ಮ, ಚಂದ್ರಶೇಖರ್ ದಂಪತಿ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿಯವರ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ಭರ್ಜರಿಯಾಗಿ ನಡೆಯಿತು. ನಂತರ ಸೂರ್ಯಮಂಡಲೋತ್ಸವ, ಕಳಸಪೂಜೆ ಹಾಗೂ ತೇರು ಮಂಟಪೋತ್ಸವ ಕೈಂಕರ್ಯ ನೆರವೇರಿಸಲಾಯಿತು. ಮಹಾರಥಾರೋಹಣ, ಅಡ್ಡಪಲ್ಲಕ್ಕಿ ಉತ್ಸವ, ಕುಂಕುಮೋತ್ಸವ, ಶಾಂತೋತ್ಸವ, ಪ್ರಹ್ಲಾದ ಪುರಾಣ, ಉಯ್ಯಾಲೋತ್ಸವ ಹಾಗೂ ಶಯನೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಮಧ್ಯಾಹ್ನ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 24ರಂದು ಅಶ್ವರೋಹಣೋತ್ಸವ, ಚೂರ್ಣೋತ್ಸವ, ತೀರ್ಥಸ್ನಾನ, ಹೂವಿನ ಅಲಂಕಾರ ಹಾಗೂ ಹನುಮಂತೋತ್ಸವ ನಡೆಯಲಿದ್ದು, ಗ್ರಾಮದೇವತೆ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಯ ಮದುವಣಿಗೆ ಸಂಬಂಧಿಸಿದ ವಿಶೇಷ ಪೂಜೆಗಳು ಜರುಗಲಿವೆ. ಏಪ್ರಿಲ್ 25ರಂದು ಮಹಾಲಕ್ಷ್ಮೀ ದೇವಿಯ ಜಾತ್ರೆ, ಅಗ್ನಿಕುಂಡ ಸೇವೆ, ಸಿಡಿ ಸೇವೆ ಹಾಗೂ ಸಂಜೆ ಜಲಕ್ರೀಡೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಮಾಪನಗೊಳ್ಳಲಿದೆ.ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.