ಚಂದಾಲಿಂಗೇಶ್ವರ ಬೆಟ್ಟದಲ್ಲಿ ಅಪರೂಪದ ಆಯುರ್ವೇದ ಸಸ್ಯ ಪ್ರಭೇದಗಳು ಪತ್ತೆ!

| Published : Jul 10 2025, 12:45 AM IST

ಚಂದಾಲಿಂಗೇಶ್ವರ ಬೆಟ್ಟದಲ್ಲಿ ಅಪರೂಪದ ಆಯುರ್ವೇದ ಸಸ್ಯ ಪ್ರಭೇದಗಳು ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಚಂದಾಲಿಂಗೇಶ್ವರ ದೇವಸ್ಥಾನದ ಬೆಟ್ಟದಲ್ಲಿ ಗಿಡಮೂಲಿಕೆಗಳ ಸಮದ್ಧ ತಾಣವಾಗಿದ್ದು, ಇವುಗಳ ಸಂರಕ್ಷಣೆ ಮಾಡುವ ಜತೆಗೆ ಇದರ ಬಗ್ಗೆ ಸಾರ್ವಜನಿಕರು ಆಯುರ್ವೇದ ಔಷಧದ ಮಹತ್ವ ತಿಳಿದುಕೊಳ್ಳುವುದು ಅಗತ್ಯವಿದೆ.

ಹನುಮಸಾಗರ:

ಪಶ್ಚಿಮ ಘಟ್ಟದಲ್ಲಿ ಸಿಗದೆ ಇರುವ ಅಪರೂಪದ ಆಯುರ್ವೇದ ಸಸ್ಯ ಪ್ರಭೇದಗಳು ಸಮೀಪದ ಚಂದಾಲಿಂಗೇಶ್ವರ ದೇವಸ್ಥಾನದ ಬೆಟ್ಟದಲ್ಲಿ ಬುಧವಾರ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಳಕಲ್ ಶ್ರೀವಿಜಯ ಮಹಾಂತೇಶ ಆಯುರ್ವೇದ ವೆದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ರಾಮಣ್ಣ ಪರಪ್ಪ ಕರಡಿ ಆಯುರ್ವೇದ ಆಸ್ಪತ್ರೆಯ ವೈದ್ಯರು, ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಔಷಧ ಗಿಡಮೂಲಿಕೆಗಳ ಪರಿಚಯ ಹಾಗೂ ಅನ್ವೇಷಣಕ್ಕಾಗಿ ಬೆಟ್ಟದಲ್ಲಿ ಸುತ್ತಾಡಿದರು. ಇವರೊಟ್ಟಿಗೆ ಪಾರಂಪರಿಕ ನಾಟಿ ವೈದ್ಯ ಶಿವಶಂಕರ ಮೆದಿಕೇರಿ, ಗ್ಯಾನನಗೌಡ ಮಾಲಿಪಾಟೀಲ, ವೀರಭದ್ರಯ್ಯ ಚೌಕಿಮಠ, ಅಶೋಕ ಪತ್ತಾರ, ಆಯುರ್ವೇದಕ್ಕೆ ಸಂಬಂಧಿಸಿದಂತೆ ಸಸ್ಯ ಪ್ರಭೇದ ಹಾಗೂ ಅಪರೂಪದ ಸಸ್ಯಗಳು ಕಂಡು ಬಂದಿವೆ ಎಂದು ವೈದ್ಯರು ತಿಳಿಸಿದರು.

ಪಾತಾಳ ಗರುಡ, ಅಪಮಾರ್ಗ, ಹಲಗತ್ತಿ, ಹಿಪ್ಪೆ, ಲತಾಕರಂಜ, ಮಹಾಲಿಂಗನಬಳ್ಳಿ, ಗಜುಗ, ಚಿತ್ರಮುಲ, ನಿರ್ಗುಂಡಿ, ಬಹತ್‌ಗೋಕ್ಷರ ಅಂಕೋಲಾ, ಪರ್ಪಟಾ, ಅಶ್ವಗಂಧಾ, ಮುಸಲಿ, ಗುಂಜಾ, ಕರಂಜಾ, ಮೊಲದ ಕಿವಿಗಡ್ಡೆ, ಆಡಿವಿ ಈರುಳ್ಳಿ, ಗಿಣಿಮೂಗಿನ ಗಡ್ಡೆ, ಮಯೂರ ಶಿಖಾ, ರಕ್ತಮಂಡಲ, ಬ್ರಹ್ಮದಂಡಿ, ಪಾಷಣ ಭೇದ, ಕಾಗಿಮೋತಿ, ಒಡೆಯನಕಂಟಿ, ಮೊಸವಾಳ, ಗಣವಾರಿ ಹೀಗೆ ನಾನಾ ರೀತಿಯ 50ರಿಂದ 60 ಸಸ್ಯಗಳ ಸಮಗ್ರ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.

ಉಪನ್ಯಾಸಕಿ ಡಾ. ಮುಕ್ತಾ ಅರಳಿ. ಪಾರಂಪರಿಕ ನಾಟಿ ವೈದ್ಯ ಶಿವಶಂಕರ ಮೆದಿಕೇರಿ ಮಾತನಾಡಿ, ಬೆಟ್ಟ ಗಿಡಮೂಲಿಕೆಗಳ ಸಮದ್ಧ ತಾಣವಾಗಿದ್ದು, ಇವುಗಳ ಸಂರಕ್ಷಣೆ ಮಾಡುವ ಜತೆಗೆ ಇದರ ಬಗ್ಗೆ ಸಾರ್ವಜನಿಕರು ಆಯುರ್ವೇದ ಔಷಧದ ಮಹತ್ವ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ವಿಜಮಾಂತೇಶ ಆಯುರ್ವೇದ ‌ವಿದ್ಯಾರ್ಥಿಗಳಿಂದ ೧೦೦೦ಕ್ಕೂ ಹೆಚ್ಚು ಆಯುರ್ವೇದ ಗಿಡ ಮೂಲಿಕೆ ಬಿಜದ ಉಂಡೆ ಹಾಗೂ ಶಿವಾನಿ, ಜಂಬುನೀರಲಿ, ಹಲಸಿನಮರ, ಮಾವು, ಬೀಜದ ಉಂಡೆಗಳನ್ನು ಬೆಟ್ಟಗಳಲ್ಲಿ ಹಾಕಲಾಯಿತು.

ಅರಣ್ಯ ರಕ್ಷಕ ದಾನನಗೌಡ ಪೊಲೀಸ್‌ಪಾಟೀಲ, ನೀಲಪ್ಪ ಕುದರಿ, ವೈದ್ಯಾಧಿಕಾರಿ ಡಾ. ಅರವಿಂದ ಕನವಳ್ಳಿ, ಉಪನ್ಯಾಸಕಿ ಡಾ. ವರ್ಷಾ, ಡಾ. ಶಂಕರ ಹುಲಮನಿ ವಿದ್ಯಾರ್ಥಿಗಳು ಇದ್ದರು.