ಸಾರಾಂಶ
ಕುತ್ತಿಗೆ ಮುರಿತಕ್ಕೆ ಒಳಗಾಗಿದ್ದ ಎರಡು ಹೆಣ್ಣುಮಕ್ಕಳ ಬಡ ಕಾರ್ಮಿಕ ವ್ಯಕ್ತಿಯೋರ್ವನಿಗೆ ನಗರದ ಶ್ರೀ ಆರ್ಥೋ ಮತ್ತು ಟ್ರಾಮಾ ಕೇಂದ್ರದ ನುರಿತ ವೈದ್ಯ ಡಾ.ಐ.ದೇವಗೌಡ ಅವರು ಯಶಸ್ವಿ ಸರ್ವಿಕಲ್ ಶಸ್ತ್ರಚಿಕಿತ್ಸೆ ಮೂಲಕ ಮರುಜೀವ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿಕುತ್ತಿಗೆ ಮುರಿತಕ್ಕೆ ಒಳಗಾಗಿದ್ದ ಎರಡು ಹೆಣ್ಣುಮಕ್ಕಳ ಬಡ ಕಾರ್ಮಿಕ ವ್ಯಕ್ತಿಯೋರ್ವನಿಗೆ ನಗರದ ಶ್ರೀ ಆರ್ಥೋ ಮತ್ತು ಟ್ರಾಮಾ ಕೇಂದ್ರದ ನುರಿತ ವೈದ್ಯ ಡಾ.ಐ.ದೇವಗೌಡ ಅವರು ಯಶಸ್ವಿ ಸರ್ವಿಕಲ್ ಶಸ್ತ್ರಚಿಕಿತ್ಸೆ ಮೂಲಕ ಮರುಜೀವ ನೀಡಿದ್ದಾರೆ.
ಹುಕ್ಕೇರಿ ಮೂಲದ ಇಜಾಜ್ ಅಹ್ಮದ್‌ಶೇಖ್ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರ್ಮಿಕನಾಗಿದ್ದು, ಬಸ್ತವಾಡ ಗ್ರಾಮದಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಭಾರದ ವಸ್ತು ಆಕಸ್ಮಿಕವಾಗಿ ಮೈಮೇಲೆ ಮುರಿದು ಬಿದ್ದ ಪರಿಣಾಮ ತೀವ್ರ ಆಘಾತಕ್ಕೆ ಒಳಗಾಗಿದ್ದನು. ಚೇತರಿಸಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿದ್ದ ಬಡ ಕಾರ್ಮಿಕನಿಗೆ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದು ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಕಾರ್ಮಿಕನ ಆರೋಗ್ಯ ಚೇತರಿಕೆಗೆ ಕುಟುಂಬಸ್ಥರು ವೈದ್ಯ ಡಾ.ದೇವಗೌಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಕೋಟ್....
ಆಂಟಿರಿಯರ್ ಸರ್ವಿಕಲ್ ಡಿಸೆಕ್ಟಮಿ ಮತ್ತು ಫ್ಯೂಶನ್ ಉಪಕ್ರಮದ ಎರಡು ಗಂಟೆಯ ಶಸ್ತ್ರಚಿಕಿತ್ಸೆ ಮೂಲಕ ಸ್ಪೈನಲ್ ಕಾರ್ಡ್ ಸರಿಪಡಿಸಲಾಗಿದೆ.ಯಾವುದೇ ಬಗೆಯ ಟ್ರಾಮಾ ಸಂಬಂಧಿತ ಅತ್ಯಾಧುನಿಕ ಚಿಕಿತ್ಸೆಗಳು ಇಂದು ಲಭ್ಯವಿವೆ. ಜನತೆ ದುಗುಡ ಪಡುವ ಅಗತ್ಯವಿಲ್ಲ.ಡಾ.ಐ.ದೇವಗೌಡ ಮುಖ್ಯಸ್ಥರು, ಶ್ರೀ ಆರ್ಥೋ ಮತ್ತು ಟ್ರಾಮಾ ಕೇಂದ್ರ ಬೆಳಗಾವಿ.21ಬಿಇಎಲ್3