ಸಾರಾಂಶ
ಧರ್ಮ ಹಾಗೂ ದೇಶದ ರಕ್ಷಣೆಗಾಗಿ 1925ರಲ್ಲಿ ಆರಂಭವಾದ ಆರ್‌ಎಸ್ಎಸ್ ಅಂದಿನಿಂದ ಇಂದಿನವರೆಗೆ ದೇಶ ಹಾಗೂ ಧರ್ಮಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕರಲ್ಲಿ ಶಿಸ್ತು ಬೆಳೆಸುವ ಕೆಲಸ ಮಾಡುತ್ತಿದೆ. ಹಿಂದೂ ಸಮುದಾಯ ಒಗ್ಗೂಡಿಸಲು ಮತ್ತು ವಿಶ್ವದ ಎಲ್ಲಾ ಧರ್ಮಗಳಿಗೆ ಜ್ಞಾನ ನೀಡಿದ ಹಿಂದೂ ರಾಷ್ಟ್ರ ಸ್ಥಾಪಿಸಲು ಯುವ ಸಮುದಾಯಕ್ಕೆ ವ್ಯಕ್ತಿತ್ವ ತರಬೇತಿ ನೀಡುವ ಮತ್ತು ಶಿಸ್ತು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯ ವಕ್ತಾರ ರಾಘವೇಂದ್ರ ನೀಲನ್ನವರ ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಧರ್ಮ ಹಾಗೂ ದೇಶದ ರಕ್ಷಣೆಗಾಗಿ 1925ರಲ್ಲಿ ಆರಂಭವಾದ ಆರ್‌ಎಸ್ಎಸ್ ಅಂದಿನಿಂದ ಇಂದಿನವರೆಗೆ ದೇಶ ಹಾಗೂ ಧರ್ಮಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕರಲ್ಲಿ ಶಿಸ್ತು ಬೆಳೆಸುವ ಕೆಲಸ ಮಾಡುತ್ತಿದೆ. ಹಿಂದೂ ಸಮುದಾಯ ಒಗ್ಗೂಡಿಸಲು ಮತ್ತು ವಿಶ್ವದ ಎಲ್ಲಾ ಧರ್ಮಗಳಿಗೆ ಜ್ಞಾನ ನೀಡಿದ ಹಿಂದೂ ರಾಷ್ಟ್ರ ಸ್ಥಾಪಿಸಲು ಯುವ ಸಮುದಾಯಕ್ಕೆ ವ್ಯಕ್ತಿತ್ವ ತರಬೇತಿ ನೀಡುವ ಮತ್ತು ಶಿಸ್ತು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯ ವಕ್ತಾರ ರಾಘವೇಂದ್ರ ನೀಲನ್ನವರ ಹೇಳಿದರು.ಸಮೀಪದ ಮುಗಳಖೋಡ ಗ್ರಾಮದ ಶ್ರೀ ಗುರುಪಾದೇಶ್ವರ ಮಠದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಸಂಭ್ರಮ ಕಾರ್ಯಕ್ರಮದಲ್ಲಿಮಾತನಾಡಿ, ನೂರು ವರ್ಷ ಪೂರೈಸಿದ ಈ ಅಮೃತ ಘಳಿಗೆ ಸಂಘ ಐದು ಪಂಚ ಪರಿವರ್ತನೆಯ ಕಾರ್ಯ ಕೈಗೆತ್ತಿಕೊಂಡಿದ್ದು, ಮೊದಲ ಎರಡು ಸುಂದರ, ಸಬಲ ಸಮಾಜ ನಿರ್ಮಾಣ ಮತ್ತು ಸ್ವದೇಶಿ ಜೀವನ ಶೈಲಿ ಸಂಘಟನಾತ್ಮಕವಾಗಿದ್ದರೆ, ಉಳಿದ ಮೂರು ಸಮಾಜಕ್ಕೆ ಕೊಡುಗೆ ನೀಡುವುದೇ (ನಾಗರಿಕ ಕರ್ತವ್ಯ), ಬಲಿಷ್ಠ ರಾಷ್ಟ್ರದ ನಿರ್ಮಾಣದ ಧ್ಯೇಯವೇ (ಕುಟುಂಬ ಪ್ರಬೋಧನೆ) ಮತ್ತು ಹೊಣೆಗಾರಿಕೆಯ ಭಾವ (ಪರಿಸರ ಸಂರಕ್ಷಣೆ) ಸಮಾಜದ ಸಭಾಗೀತ್ವದಲ್ಲಿ ಮಾಡುವ ಸಾಮೂಹಿಕ ಕಾರ್ಯಗಳಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ರಾಮಯ್ಯ ಗುರುಪಾದಯ್ಯ ಹಿರೇಮಠ ಶ್ರೀಗಳು, ಶಿವಸೇನಾ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ, ಅಮಿಸಿದ್ಧ ಬಾಳಿಬೂದಿ, ಮುತ್ತಪ್ಪ ತಾವಳಗೆರಿ, ಮಲ್ಲಪ್ಪ ಬಿಸನಕೊಪ್ಪ, ಪ್ರವೀಣ ಬಾವಿಕಟ್ಟಿ, ಸಂಜಯ ಶಿಂಪಿ, ಆನಂದ ಶಿರಗುಂಪ್ಪಿ, ಅಡಿವೇಶ ಜೋಗಿ, ನಾಗು ಒಡೆಯರ, ಮಲ್ಲಪ್ಪ ಹುಂಡೇಕಾರ, ಡಾ.ಶರಣಯ್ಯ ಬಬಲಾದಿಮಠ, ಗುರು ನಾವಿ, ಸಂತೋಷ ನಾವಿ, ಪರಮಾನಂದ ನಂದಿಕೆಶ್ವರ, ಪ್ರಭು ಜಗದಾಳ, ಸಚಿನ ಮಂತ್ರಣ್ಣವರ, ಚಿದಾನಂದ ಹುಂಡೆಕಾರ, ನಾಮದೇವ ಬಟಕುರ್ಕಿ, ಅಡಿವೇಶ ಜೋಗಿ, ಮುರುಗೇಶ ಹೂಗಾರ, ಚೇತನ ರಾಮಪುರ, ಸುಖದೇವ ಪವಾರ, ನಾಗು ಒಡೆಯರ, ಅಭಿಷೇಕ ಜೋಗಿ, ಹೊಂಣೇಶ ರಂಗಾಪುರ, ವಿಜಯ ಹುಕ್ಕೇರಿ, ನಂದಪ್ಪ ಜೋಗಿ, ಗುರುಬಸು ಶಿವಾಪುರ, ರಮೇಶ ನಿಲಜಗಿ, ಸಿದ್ದಪ್ಪ ಬಾಳಿಬುದಿ, ಪರಮಾನಂದ ಕುಂಬಾರ, ಈರಯ್ಯ ಮಠಪತಿ ಇದ್ದರು.