ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ, ಇಂದಿನಿಂದ ನಾಮಪತ್ರ ಸಲ್ಲಿಕೆ ಶುರು

| Published : Jul 29 2025, 01:03 AM IST

ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ, ಇಂದಿನಿಂದ ನಾಮಪತ್ರ ಸಲ್ಲಿಕೆ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಆ. 17ರಂದು ಮತದಾನ ನಡೆಯಲಿದ್ದು, ಅಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಆ. 19ರಂದು ನಡೆಸಲಾಗುವುದು. ಆ. 20ರಂದು ಮತಗಳ ಎಣಿಕೆಯ ಪ್ರಕ್ರಿಯೆ ತಾಲೂಕು ಕೇಂದ್ರ ಸ್ಥಳದಲ್ಲಿ ಬೆಳಗ್ಗೆ 8 ಗಂಟೆಯಿಂದ ಜರುಗಲಿದೆ.

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ. ಜು. 29ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜಕೀಯ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಯಶಸ್ವಿ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು.ಚುನಾವಣಾ ವೇಳಾಪಟ್ಟಿ: ಚುನಾವಣಾ ಅಧಿಸೂಚನೆ ಹೊರಡಿಸುವ ಜು. 29 ಆಗಿದ್ದು, ನಾಮಪತ್ರ ಸಲ್ಲಿಸಲು ಆ. 5 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಆ. 6ರಂದು, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಆ. 8 ಕೊನೆಯ ದಿನ. ಆ. 17ರಂದು ಮತದಾನ ನಡೆಯಲಿದ್ದು, ಅಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಆ. 19ರಂದು ನಡೆಸಲಾಗುವುದು. ಆ. 20ರಂದು ಮತಗಳ ಎಣಿಕೆಯ ಪ್ರಕ್ರಿಯೆ ತಾಲೂಕು ಕೇಂದ್ರ ಸ್ಥಳದಲ್ಲಿ ಬೆಳಗ್ಗೆ 8 ಗಂಟೆಯಿಂದ ಜರುಗಲಿದೆ. ಮಾದರಿ ನೀತಿ ಸಂಹಿತೆ: ಚುನಾವಣೆಯ ಮಾದರಿ ನೀತಿ ಸಂಹಿತೆಯು ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜು. 29ರಿಂದ ಆ. 20ರ ವರೆಗೆ ಜಾರಿಯಲ್ಲಿರುತ್ತದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.ವಾರ್ಡುವಾರು ಮೀಸಲಾತಿ: ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ 15 ವಾರ್ಡುಗಳಿದ್ದು, ವಾರ್ಡ್ ನಂ. 1 ಪರಿಶಿಷ್ಟ ಪಂಗಡ, ವಾರ್ಡ್ ನಂ. 2 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ. 3 ಸಾಮಾನ್ಯ, ವಾರ್ಡ್ ನಂ. 4 ಸಾಮಾನ್ಯ, ವಾರ್ಡ್ ನಂ. 5 ಹಿಂದುಳಿದ ವರ್ಗ(ಎ), ವಾರ್ಡ್ ನಂ. 6 ಸಾಮಾನ್ಯ ಮಹಿಳೆ, ವಾರ್ಡ್ ನಂ. 7 ಹಿಂದುಳಿದ ವರ್ಗ(ಬಿ), ವಾರ್ಡ್ ನಂ. 8 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ ನಂ. 9 ಸಾಮಾನ್ಯ, ವಾರ್ಡ್ ನಂ. 10 ಸಾಮಾನ್ಯ, ವಾರ್ಡ್ ನಂ. 11 ಹಿಂದುಳಿದ ವರ್ಗ(ಎ), ವಾರ್ಡ್ ನಂ. 12 ಸಾಮಾನ್ಯ ಮಹಿಳೆ, ವಾರ್ಡ್ ನಂ. 13 ಸಾಮಾನ್ಯ ಮಹಿಳೆ, ವಾರ್ಡ್ ನಂ. 14 ಪರಿಶಿಷ್ಟ ಜಾತಿ ಹಾಗೂ ವಾರ್ಡ್ ನಂ. 15 ಸಾಮಾನ್ಯ ಮಹಿಳೆ ಹೀಗೆ ಅಂತಿಮ ಮೀಸಲಾತಿಯನ್ನು ಹೊರಡಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5,869 ಪುರುಷರು, 5,842 ಮಹಿಳೆಯರು ಹಾಗೂ ಇತರೆ ಓರ್ವರು ಸೇರಿ 11,712 ಮತದಾರರಿದ್ದಾರೆ. ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚ ಗರಿಷ್ಟ ಒಂದು ಲಕ್ಷ ರು. ಮೀರುವಂತಿಲ್ಲ. ಸಾಮಾನ್ಯ ಅಭ್ಯರ್ಥಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಾಗ 1000 ರು. ಹಾಗೂ ಹಿಂದುಳಿದ ವರ್ಗ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಮಹಿಳೆ ಆಗಿದ್ದಲ್ಲಿ 500 ರು. ಮೊತ್ತದ ಠೇವಣಿ ಸಲ್ಲಿಸಬೇಕು ಎಂದರು. ಚುನಾವಣಾಧಿಕಾರಿಗಳ ನೇಮಕ: ವಾರ್ಡ್ ನಂ. 1 ರಿಂದ 8ಕ್ಕೆ ಚುನಾವಣಾಧಿಕಾರಿಯಾಗಿ ಹಿರೇಕೆರೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಿ. ಮಹಾದೇವ(ಮೊ. 9901912980) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಯಡಗೋಡ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ತೇವರಿ(ಮೊ. 9449175586) ಅವರನ್ನು ನೇಮಕ ಮಾಡಲಾಗಿದೆ. ವಾರ್ಡ್ ನಂ. 9ರಿಂದ 15ಕ್ಕೆ ಚುನಾವಣಾಧಿಕಾರಿಯಾಗಿ ಹಿರೇಕೆರೂರು ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಗಂಗರಾಜು(ಮೊ. 7892814438) ಸಹಾಯಕ ಚುನಾವಣಾಧಿಕಾರಿಯಾಗಿ ಹಿರೇಕಬ್ಬಾರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವಪ್ಪ ಸಣ್ಣಶಿವಣ್ಣನವರ(ಮೊ. 9611646859) ಅವರನ್ನು ನೇಮಕ ಮಾಡಲಾಗಿದೆ. ರಟ್ಟಿಹಳ್ಳಿ ಕೃಷಿ ಇಲಾಖೆ ಕಟ್ಟಡದಲ್ಲಿ ಚುನಾವಣಾ ಕಚೇರಿ ಆರಂಭಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ, ವಿವಿಧ ಪಕ್ಷದ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.