ಸಾರಾಂಶ
ದೇಗುಲದಲ್ಲಿ ಮುಂಜಾನೆ ಕಳಸಾ ಆರಾಧನೆ, ಗಣಪತಿ ಪೂಜೆ, ದೇವತಾ ಹೋಮ ಹವನಾದಿಗಳನ್ನು ಗಳೊಂದಿಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೂರ್ಣಹುತಿ ನಂತರ ಕಳಸದ ಹಾಗೂ ಕುಂಭಾಭಿಷೇಕದ ಸೇವಾಕರ್ತರಾದ ಶಾಸಕ ಉದಯ್ ದಂಪತಿ ವಿಶೇಷ ಪೂಜಾ ವಿಧಿ ವಿಧಾನ ದೊಂದಿಗೆ ಕಳಸ ಪುನರ್ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯ ಶ್ರೀಕಾಶಿ ವಿಶ್ವೇಶ್ವರಸ್ವಾಮಿ ದೇಗುದಲ್ಲಿ ಬುಧವಾರ ಮಹಾಶಿವರಾತ್ರಿ ಅಂಗವಾಗಿ ನೂತನ ಕಳಶ ಪುನರ್ ಪ್ರತಿಷ್ಠಾಪನಾ ಹಾಗೂ ಕುಂಭಾಭಿಷೇಕ ಕಾರ್ಯ ವಿಜೃಂಭಣೆಯಿಂದ ನೆರವೇರಿತು.ಶಾಸಕ ಕೆ.ಎಂ.ಉದಯ್, ಪತ್ನಿ ವಿನುತಾ ಉದಯ್ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಕಳಸ ಪ್ರತಿಷ್ಠಾಪನ ಕಾರ್ಯಕ್ಕೆ ಚಾಲನೆ ನೀಡಿದರು.
ಪ್ರತಿಷ್ಠಾಪನ ಅಂಗವಾಗಿ ದೇಗುಲದಲ್ಲಿ ಮುಂಜಾನೆ ಕಳಸಾ ಆರಾಧನೆ, ಗಣಪತಿ ಪೂಜೆ, ದೇವತಾ ಹೋಮ ಹವನಾದಿಗಳನ್ನು ಗಳೊಂದಿಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೂರ್ಣಹುತಿ ನಂತರ ಕಳಸದ ಹಾಗೂ ಕುಂಭಾಭಿಷೇಕದ ಸೇವಾಕರ್ತರಾದ ಶಾಸಕ ಉದಯ್ ದಂಪತಿ ವಿಶೇಷ ಪೂಜಾ ವಿಧಿ ವಿಧಾನ ದೊಂದಿಗೆ ಕಳಸ ಪುನರ್ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದರು.ಕಾರ್ಯಕ್ರಮದಲ್ಲಿ ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರರಾವ್, ಶಂಕರ ಮಠದ ಅಧ್ಯಕ್ಷ ಶಾಮಿಯಾನ ಗುರುಸ್ವಾಮಿ, ಸಿ.ಅಪೂರ್ವಚಂದ್ರ, ಬಿ. ವಿ.ಮಂಜುನಾಥ, ಸೇರಿದಂತೆ ದೇಗುಲದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈಶ್ವರನಿಗೆ ಪಂಚಾಮೃತ ಅಭಿಷೇಕಮಂಡ್ಯ:
ಬ್ರಾಹ್ಮಣ ಯುವ ಸೇವಾ ಟ್ರಸ್ಟ್‌ನಿಂದ ನಗರದ ಹಾಲಹಳ್ಳಿ ಬಡಾವಣೆಯಲ್ಲಿರುವ ಬ್ರಾಹ್ಮಣರ ರುದ್ರ ಭೂಮಿ (ಮೋಕ್ಷದಾಮ)ದಲ್ಲಿರುವ ಈಶ್ವರನಿಗೆ ಬುಧವಾರ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ಮಹಾಮಂಗಳಾರತಿಯನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ವೇದ ಬ್ರಹ್ಮಶ್ರೀ ಅನಂತನಾರಾಯಣ ಶಾಸ್ತ್ರಿ ಮತ್ತು ಶಿಷ್ಯ ವೃಂದದಿಂದ ರುದ್ರ ಪಾರಾಯಣ, ಮತ್ತು ಪೂಜಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಶಣೈ, ನಿರ್ದೇಶಕರಾದ ಪ್ರಸನ್ನ ಮಯ್ಯ, ಉಮಾ ದೊರೆಸ್ವಾಮಿ, ಹೂಳಲು ರಾಘವೇಂದ್ರ ಭಾಗವಹಿಸಿದ್ದರು.
ವಿಪ್ರ ಪ್ರಮುಖರಾದ ಶಶಿ ಟ್ರೇಡರ್ಸ್ ರಾಮಕೃಷ್ಣ, ಗುಂಡೂರಾವ್, ನಾರಾಯಣ್, ಸುರೇಶ್, ಬ್ರಾಹ್ಮಣ ಯುವ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರಮೇಶ್, ಸಂಘದ ಅಧ್ಯಕ್ಷ ರಾಧಾಕೃಷ್ಣನ್, ಉಪಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಬಾಲಾಜಿ ಕೆ.ಆರ್., ಖಜಾಂಚಿ ರಾಮಚಂದ್ರ, ನಿರ್ದೇಶಕರಾದ ಎನ್.ಗೋಪಿನಾಥ್, ರವಿಶಂಕರ್, ಕೇಶವ, ಪ್ರದೀಪ್ ಕುಮಾರ್ ಅನೇಕ ವಿಪ್ರ ಬಾಂಧವರು ಭಾಗವಹಿಸಿದ್ದರು.