₹2.30 ಕೋಟಿಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಟ್ಟು ಭರವಸೆ
---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕುರುಬನಕಟ್ಟೆ ಶ್ರೀಕ್ಷೇತ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ನೀಡುವ 25 ಕೋಟಿ ರು. ವಿಶೇಷ ಅನುಧಾನದಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ಅವರು ಕುರುಬಕಟ್ಟೆ ಶ್ರೀಕ್ಷೇತ್ರದಲ್ಲಿ 2.30 ಕೋಟಿ ರು. ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆಂಪನಪಾಳ್ಯ ರಸ್ತೆಗೆ 90 ಲಕ್ಷ ರು. ಟೆಂಡರ್ ಆಗಿದೆ. ಜಕ್ಕಳ್ಳಿ, ಕೆಂಪನಪಾಳ್ಯ ರಸ್ತೆಗೆ ಸೇರಿದಂತೆ 7.7 ಕೋಟಿ ರು. ಕಾಮಗಾರಿಗೆಳಿಗೆ ಚಾಲನೆ ನೀಡಿದ್ದೇನೆ. ಈಗಾಗಲೇ ಶ್ರೀಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ತಂಗುದಾಣ, ಸಿಸಿ ರಸ್ತೆ, ಚರಂಡಿ ಕಾಮಗಾರಿ ಆಗಬೇಕು. ಶೌಚಾಲಯ ಇನ್ನಿತರೆ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು. ಜೊತೆಗೆ ಲಕ್ಕರನಸಪಾಳ್ಯ ಗ್ರಾಮದ ಬಸವ ಭವನದ ಮುಂದುವರೆದ ಕಾಮಗಾರಿಗೂ 10 ಲಕ್ಷ ರು. ಅನುದಾನ ನೀಡಿದ್ದೇನೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಸಾಹಿತಿ ಶಂಕನಪುರ ಮಹದೇವ, ನಾಗರಿಕ ಹಿತರಕ್ಷಣಾ ಸಮಿತಿಯ ನಟರಾಜು ಮಾಳಿಗೆ, ತಿಮ್ಮರಾಜೀಪ ಪುಟ್ಟಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಜು, ಮಾಜಿ ಉಪಾಧ್ಯಕ್ಷ ಕೆಂಪರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಣ್ಣ, ಯುವ ಮುಖಂಡ ಚೇತನ್, ಶಾಂತರಾಜು, ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಅರ್ಚಕ ಮಲ್ಲಣ್ಣ, ಗುತ್ತಿಗೆದಾರರು ಮಹೇಶ್, ಶಿವಕುಮಾರ್, ಮಲ್ಲು ಇನ್ನಿತರಿದ್ದರು.
---22ಕೆಜಿಎಲ್ 6
ಕೊಳ್ಳೇಗಾಲ ತಾಲೂಕಿನ ಕುರುಬನಕಟ್ಟೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.