ಲಾರಿಗೆ ಸಿಕ್ಕಿ ದ್ವಿಚಕ್ರ ವಾಹನ ಹಿಂಬದಿ ಸವಾರ ಸಾವು

| Published : Mar 30 2024, 01:15 AM IST

ಸಾರಾಂಶ

ಕಾರನ್ನು ತಪ್ಪಿಸಿ ಮುಂದೆ ಬಂದಾಂಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಸವಾರ ತೀವ್ರ ಗಾಯಗೊಂಡ ಘಟನೆ ಆನೇಕಲ್ ಬಳಿ ನಡೆದಿದೆ.

ಕಾರನ್ನು ತಪ್ಪಿಸಿ ಮುಂದೆ ಬಂದ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಸವಾರ ತೀವ್ರ ಗಾಯಗೊಂಡ ಘಟನೆ ಆನೇಕಲ್ ಬಳಿ ನಡೆದಿದೆ.ಕನ್ನಡಪ್ರಭ ವಾರ್ತೆ ಆನೇಕಲ್

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು ತಪ್ಪಿಸಿ ಮುಂದೆ ಬಂದಾಂಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ವಾಹನ ಸವಾರ ತೀವ್ರ ಗಾಯಗೊಂಡ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಮಿರ್ಜಾ ರಸ್ತೆಯಲ್ಲಿ ನಡೆದಿದೆ.

ಅರಣ್ಯ ಪ್ರಾದೇಶಿಕ ವಲಯ ಕಚೇರಿಯ ''''''''ಚಿರತೆ ಕಾರ್ಯ ಪಡೆ''''''''ಯ (ಚೀತಾ ಟಾಸ್ಕ್ ಫೋರ್ಸ್) ಹಂಗಾಮಿ ನೌಕರನಾದ ರಾಕೇಶ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೋರ್ವ ಸಿಬ್ಬಂದಿ ವಿನಯ್ ಎಂಬಾತನ ಕಾಲಿಗೆ ಗಂಭೀರ ಗಾಯವಾಗಿದ್ದು, ನೀರು ನೀರು ಎಂದು ಅರಚುತ್ತಿದ್ದ ದೃಶ್ಯ ಜನರ ಮನ ಕಲಕುವಂತಿತ್ತು.

ಗೌರೆನಹಳ್ಳಿ ಸಸ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಎಟಿಎಮ್‌ಗೆ ಹೋಗಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಬೈಕ್‌ನಲ್ಲಿ ತೆರಳಿದ್ದರು. ಊಟ ಮಾಡಿಕೊಂಡು ನಂತರ ಹೋಗಿ ಎಂದು ಹೇಳಿದರೂ ಕೇಳಲಿಲ್ಲ ಎಂದು ಸಹ ಸಿಬ್ಬಂದಿ ಪುಟ್ಟಮ್ಮ ತಿಳಿಸಿದರು.

ಗಸ್ತು ಅರಣ್ಯ ಪಾಲಕ ಟಿ. ವೈ. ಜನಗೇರಿ ಮಾಹಿತಿ ನೀಡಿ ಇಬ್ಬರೂ ತುಂಬಾ ಚುರುಕಿನಿಂದ ಕೆಲಸ ಮಾಡುತ್ತಿದ್ದರು. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ವಿನಯ್‌ಗೆ ಅನೇಕಲ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಬ್ಬರಿಗೂ ಇಲಾಖೆ ವತಿಯಿಂದ ದೊರೆಯಬಹುದಾದ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗುವುದು. ವಲಯ ಅರಣ್ಯಾಧಿಕಾರಿ ರಘು ಅವರು ಆಸ್ಪತ್ರೆ ವೈದ್ಯರ ಸಂಪರ್ಕದಲ್ಲಿದ್ದು, ಎಲ್ಲಾ ಸಿಬ್ಬಂದಿ ಗಾಯಾಳು ಜತೆಗಿದ್ದೇವೆ ಎಂದರು.

ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಎಸ್ಐ ಮಹಜರ್ ನಡೆಸಿ ವಾಹನ ಸಂದಣಿಯನ್ನು ಮುಕ್ತ ಮಾಡಿದ್ದಾರೆ.