ಮೋದಿ ಪೂರ್ಣಾವಧಿ ಪ್ರಧಾನಿಯಾಗಲೆಂದು ಪಾರಾಯಣ

| Published : Jun 10 2024, 12:31 AM IST

ಸಾರಾಂಶ

ದೇಶದ ಪ್ರಧಾನಿಯಾಗಿ ನರೇಂದ್ರ ಮಮೋದಿ 3 ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುತ್ತಿರೋದಕ್ಕೆ ಅಭಿನಂದಿಸಿ ಭಗವಂತ ಅವರಿಗೆ ಸಂಪೂರಣ ಅವಧಿಗೆ ಸರಕಾರ ಮಾಡುವಂತೆ ಹರಸಲಿ ಎಂದು ಪ್ರಾರ್ಥಿಸಲಾಯ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ವಿಶ್ವ ಮಧ್ವ ಮಹಾ ಪರಿಷತ ಘಟಕದಲ್ಲಿರುವ ಹಂಸ ನಾಮಕ, ಲಕ್ಷ್ಮಿನಾರಾಯಣ ಹಾಗೂ ಹರೇ ಶ್ರೀರಾಮ ಪಾರಾಯಣ ಸಂಘ ಗಳ ವತಿಯಿಂದ ಭಾನುವಾರ ದತ್ತಾತ್ರೇಯ ಅಳವಂಡಿ ಇವರ ಮನೆಯಲ್ಲಿ ನಡೆದ ಸಾಪ್ತಾಹಿಕ ಪಾರಾಯಣದಲ್ಲಿಂದು ದೇಶದ ಪ್ರಧಾನಿಯಾಗಿ ನರೇಂದ್ರ ಮಮೋದಿ 3 ನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುತ್ತಿರೋದಕ್ಕೆ ಅಭಿನಂದಿಸಿ ಭಗವಂತ ಅವರಿಗೆ ಸಂಪೂರಣ ಅವಧಿಗೆ ಸರಕಾರ ಮಾಡುವಂತೆ ಹರಸಲಿ ಎಂದು ಪ್ರಾರ್ಥಿಸಲಾಯ್ತು.

ಜೇವರ್ಗಿ ಕಾಲನಿಯ ಶ್ರೀ ದತ್ತಾತ್ರೇಯ ಅಳವoಡಿ ಯವರ ಮನೆಯಲ್ಲಿ ಜರುಗಿದ ಪರಾಯಣದಲ್ಲಿ ಸೇರಿದ್ದ ಹಿರಿಯರಾದ ಕೃಷ್ಣಾ ಕಾಕಲವಾರ್‌, ನಾರಾಯಣ ಆಚಾರ್ಯ ಓಂಕಾರ್‌, ಪದ್ಮನಾಭಾಚಾರ್ಯ್‌ ಜೋಷಿ, ನರಸಿಂಗರಾವ ಕುಲಕರ್ಣಿ, ಶಶಿಧರ್‌ ಜೋಷಿ, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರು ನರೇಂದ್ರ ಮೋದಿ ಯವರು ಮೂರನೆಯ ಬಾರಿ ಪ್ರಧಾನಮoತ್ರಿ ಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಸುವರ್ಣ ಗಳಿಗೆಯಲ್ಲಿ ಶುಭ ಕೋರಿದರು.

ಈ ಸoಧರ್ಭದಲ್ಲಿ, ಇವತ್ತಿನ ಪಾರಾಯಣದ ಮೂಲಕ ಶ್ರೀ ಹರಿವಾಯುಗುರುಗಳ ಪೂರ್ಣ ಅನುಗ್ರಹ ಕೋರಿ ಅವರ ನೂತನ ಸರಕಾರ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿಯೆoದು ಪ್ರಾರ್ಥಿಸಲಾಯಿತು.