ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯುರ್ವೇದಕ್ಕೆ ಮಾನ್ಯತೆ -ಬೊಮ್ಮಾಯಿ

| Published : Apr 28 2024, 01:20 AM IST / Updated: Apr 28 2024, 09:23 AM IST

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯುರ್ವೇದಕ್ಕೆ ಮಾನ್ಯತೆ -ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಆಯುರ್ವೇದದಲ್ಲಿ ಅಲೋಪತಿ ರೀತಿ ನಿರಂತರ ಸಂಶೋಧನೆ ಆಗಬೇಕು. ಅದನ್ನು ಸರ್ಕಾರ, ಐಎಂಎ ಒಪ್ಪಿಕೊಳ್ಳಬೇಕು. ಆಗ ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಅಲೋಪತಿಗೆ ಸಮನಾಗಿ ಆಯುರ್ವೇದ ಬೆಳೆಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಆಯುರ್ವೇದದಲ್ಲಿ ಅಲೋಪತಿ ರೀತಿ ನಿರಂತರ ಸಂಶೋಧನೆ ಆಗಬೇಕು. ಅದನ್ನು ಸರ್ಕಾರ, ಐಎಂಎ ಒಪ್ಪಿಕೊಳ್ಳಬೇಕು. ಆಗ ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಅಲೋಪತಿಗೆ ಸಮನಾಗಿ ಆಯುರ್ವೇದ ಬೆಳೆಯಬೇಕು.

 ಇದರಿಂದ ಮಾನವ ಕುಲಕ್ಕೆ ದೊಡ್ಡ ಸಹಾಯವಾಗುತ್ತದೆ ಎಂದು ಮಾಜಿ ಸಿಎಂ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ಇಲ್ಲಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿಂದಗಿ ಶಾಂತವಿರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಆಯುರ್ವೇದಕ್ಕೆ ಉತ್ತೇಜನ ನೀಡಲು ಬಿಜೆಪಿ ಅವಧಿಯಲ್ಲಿ ಆಯುಷ್ ಇಲಾಖೆಯನ್ನು ಆರಂಭಿಸಲಾಗಿದೆ.

 ಪ್ರಧಾನಿ ಮೋದಿಯವರು ಯೋಗಕ್ಕೆ ಅತ್ಯಂತ ಮಹತ್ವ ಕೊಟ್ಡಿದ್ದಾರೆ. ಆಯುರ್ವೇದದ ಬೆಳವಣಿಗೆಗೆ ಪ್ರತ್ಯೇಕವಾಗಿ ಆಯುಷ್ ಇಲಾಖೆ ತೆರೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯುಷ್‌ ವೈದ್ಯರಿಗೆ ಮಾನ್ಯತೆ ನೀಡುವ ಕೆಲಸ ಮಾಡಲಾಗಿದೆ ಎಂದರು.ಕೆಳ ಹಂತದ ಸಮುದಾಯ, ಬಡವರು, ದೀನದಲಿತರು ಆಯುರ್ವೆದಕ್ಕೆ ಬರುತ್ತಾರೆ. ಶ್ರೀಮಂತ ಅಲೊಪತಿಗೆ ಬರುತ್ತಾರೆ. 

ಎಲ್ಲರಿಗೂ ಆಯುರ್ವೇದದ ಚಿಕಿತ್ಸೆ ದೊರೆಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಬೇಕು. ನೀವು ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದರೆ, ಆ ನಿಟ್ಟಿನಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗೆ ಕಾರಣವಾಗಲಿದೆ. ನಾನು ಆಯುರ್ವೇದಕ್ಕೆ ಅಗತ್ಯ ಬೆಂಬಲ ನೀಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ವಿ.ಎಚ್.ಕೆ. ಹಿರೇಮಠ, ಪ್ರಾಚಾರ್ಯರಾದ ಚಂದ್ರಶೇಖರ ಗೌಡರ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶಪ್ಪ ಮೇಗಳಮನಿ ಹಾಜರಿದ್ದರು.