ಸಾರಾಂಶ
ಕಬ್ಬೂರ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ರಾಯಣ್ಣ ಜ್ಯೋತಿಯನ್ನು ಬರಮಾಡಿಕೊಂಡರು
ಕನ್ನಡಪ್ರಭ ವಾರ್ತೆ ಕಬ್ಬೂರ
ಕುರುಬ ಜನಾಂಗವು ಶಿಕ್ಷಣ, ಕೃಷಿ ಹಲವು ಯೋಜನೆಗಳಿಂದ ವಂಚಿತವಾಗಬಾರದೆಂಬ ದೃಷ್ಟಿಕೋನದಿಂದ ಕುರುಬ ಜನಾಂಗವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸ್ ಮಾಡಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಭರವಸೆ ನೀಡಿದರು.ಪಟ್ಟಣದಲ್ಲಿ ಗುರುವಾರ ಸಂಗೋಳ್ಳಿ ರಾಯಣ್ಣ ಜಯಂತಿ ನಿಮಿತ್ತ ಪಟ್ಟಣದ ರಾಯಣ್ಣ ಯುವ ಬ್ರಿಗೇಡ್ ತಂಡ ನಂದಗಡದಿಂದ ಕಬ್ಬೂರ ಪಟ್ಟಣಕ್ಕೆ ಆಗಮಿಸಿದ ರಾಯಣ್ಣ ಜ್ಯೋತಿಯನ್ನು ಸ್ವಾಗತಿಸಿ, ಮಾತನಾಡಿದರು.
ವಸಂತರಾವ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಂಬುಪ್ರಸಾದ ನರೋಟೆ ಮಾತನಾಡಿ, ರಾಜ್ಯ ಸರ್ಕಾರ ಕುರುಬ ಜನಾಂಗವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಕುರುಬ ಜನಾಂಗವು ಕಬ್ಬೂರ ಪಟ್ಟಣದಿಂದಲೇ ಉಗ್ರ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಎ.ಎ.ಪಾಟೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವರಾಜ ಪಾಟೀಲ, ಹಾಲಪ್ಪ ಹೊಸೂರ, ಪಿಂಟು ಬೆಲ್ಲದ, ಉದಯ ರಜಪೂತ, ನಾಗಪ್ಪ ಬಾಡದ, ರಾಮಪ್ಪ ಪೂಜೇರಿ, ಸಿದ್ರಾಮ ನಾಯಿಕ, ಸುರೇಶ ಭಗವತಿ, ಸಿದ್ದಪ್ಪ ಭಗವತಿ, ಶ್ರೀನಿವಾಸ ಹನಗಂಡಿ, ಸಿದ್ದಪ್ಪ ಘೇವಾರಿ, ಕಾಮಪ್ಪ ಪೂಜೇರಿ, ಸಿದ್ದಪ್ಪ ಪೂಜೇರಿ, ಮಲ್ಲಪ್ಪ ಬಿಳಿಕುರಿ, ಕಲ್ಲಪ್ಪ ಕರಗಾಂವಿ, ಮಹಾದೇವ ದೇಸಾಯಿ ಇದ್ದರು.