ಜಾತಿ ಜನಗಣತಿಯಲ್ಲಿ ಒಕ್ಕಲಿಗ ಎಂದೇ ನಮೋದಿಸಿ: ಬೈರೇಗೌಡ

| Published : Sep 19 2025, 01:00 AM IST

ಸಾರಾಂಶ

ನಿಮ್ಮ ಮನೆಗಳ ಬಳಿಗೆ ಸೆ.೨೨ ರಿಂದ ಅ.೭ ರವೆರೆವಿಗೂ ಸರ್ಕಾರ ನಿಯೋಜಿಸಿದ ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಇನ್ನಿತೆರ ಯಾರೇ ಬಂದು ೪೮ ಪಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಒಕ್ಕಲಿಗ ಎನ್ನುವುದರ ಜೊತೆಗೆ ಬಿಪಿಎಲ್ ಕಾರ್ಡ್ ಇರುವ ಬಗ್ಗೆ ಕಸುಬು ಎನ್ನುವ ಕಡೆ ಕುಲಕಸುಬಾದ ವ್ಯವಸಾಯ ಎಂದು ಬರೆಯಿಸುವಂತೆ ಸೂಚಿಸಿದರು.

ದೇವನಹಳ್ಳಿ: ಸರ್ಕಾರ ಜಾತಿ ಜನಗಣತಿ ಕೈಗೆತ್ತಿಕೊಂಡಿದ್ದು ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೋದಿಸಿ ಉಪಜಾತಿಗಳನ್ನು ಬರೆಯಿಸಬೇಡಿ ಎಂದು ದೇವನಹಳ್ಳಿ ತಾಲುಕು ಒಕ್ಕಲಿಗರ ಸಂಘದ ತಾಲುಕು ಅಧ್ಯಕ್ಷರೂ ಹಿರಿಯ ವಕೀಲರೂ ಆದ ಬಿ.ಎಂ. ಬೈರೇಗೌಡರು ಹೇಳಿದರು.

ಪಟ್ಟಣದ ಒಕ್ಕಲಿಗರ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಉಪಜಾತಿಗಳನ್ನು ನಮೋದಿಸಿದರೆ ಒಕ್ಕಲಿಗರನ್ನು ವಿಭಜಿಸಿದಂತಾಗುತ್ತದೆ. ನಾವು ಔದ್ಯೋಗಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಸವಲತ್ತು ಪಡೆದುಕೊಳ್ಳಬೇಕಾದರೆ ಒಕ್ಕಲಿಗ ಜನಾಂಗ ಒಂದೇ ಒಗ್ಗಟ್ಟಿನಲ್ಲಿರಬೇಕು ಎಂದರು.

ಪ್ರಧಾಕಾರ್ಯದರ್ಶಿ ಎಂ.ಮುನಿರಾಜು ಮಾತನಾಡಿ, ನಿಮ್ಮ ಮನೆಗಳ ಬಳಿಗೆ ಸೆ.೨೨ ರಿಂದ ಅ.೭ ರವೆರೆವಿಗೂ ಸರ್ಕಾರ ನಿಯೋಜಿಸಿದ ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಇನ್ನಿತೆರ ಯಾರೇ ಬಂದು ೪೮ ಪಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಒಕ್ಕಲಿಗ ಎನ್ನುವುದರ ಜೊತೆಗೆ ಬಿಪಿಎಲ್ ಕಾರ್ಡ್ ಇರುವ ಬಗ್ಗೆ ಕಸುಬು ಎನ್ನುವ ಕಡೆ ಕುಲಕಸುಬಾದ ವ್ಯವಸಾಯ ಎಂದು ಬರೆಯಿಸುವಂತೆ ಸೂಚಿಸಿದರು.

ಸಮಯದಲ್ಲಿ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಹಿರಿಯ ವಕೀಲ ಬಿ.ಎಂ.ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ಮುನಿರಾಜು ಶ್ರೀರಾಮಯ್ಯ, ಎಸ್‌ಎಲ್‌ಎನ್.ಮುನಿರಾಜು, ಜೆ.ಪಿ. ನಾರಾಯಣ್, ನರಗನಹಳ್ಳಿ ಶ್ರೀನಿವಾಸ್ , ಕೆಸಿ. ಮಂಜುನಾಥ್ ಮತ್ತಿತರರು ಇದ್ದರು.