ಸಾರಾಂಶ
ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ಶೈಕ್ಷಣಿಕ, ಮದುವೆ, ಅಂತಿಮ ಸಂಸ್ಕಾರ ಸಹಾಯಧನ, ಚಿಕಿತ್ಸಾ ವೆಚ್ಚದ ಧನ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಪಡೆಯಲು ಕಡ್ಡಾಯವಾಗಿ ಕಾರ್ಡುಗಳ ನವೀಕರಣ ಆಗಿರತಕ್ಕದ್ದು. ಇಲ್ಲದಿದ್ದರೆ ಸೌಲಭ್ಯ ದೊರೆಯುವುದಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಟ್ಟಡ ಕಾರ್ಮಿಕರು ಕಲ್ಯಾಣ ನಿಧಿಯಿಂದ ಪರಿಹಾರ ಪಡೆಯಲು ಕಡ್ಡಾಯವಾಗಿ ಕಾರ್ಡ್ ನೋಂದಣಿಯಾಗಿರಬೇಕು. ಜೊತೆಗೆ ಅವಧಿ ಮುಗಿದಿದ್ದರೆ ತಕ್ಷಣ ಅದನ್ನು ನವೀಕರಿಸಿಕೊಂಡಲ್ಲಿ ಮಾತ್ರ ಪರಿಹಾರ ಪಡೆಯಲು ಸಾಧ್ಯ ಎಂದು ಕಾರ್ಮಿಕ ನಿರೀಕ್ಷಕ ಹೇಮಂತ್‌ಕುಮಾರ್ ಸಲಹೆ ನೀಡಿದರು.ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಅಬ್ಬಯ್ಯನಾಯ್ಡು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ಶೈಕ್ಷಣಿಕ, ಮದುವೆ, ಅಂತಿಮ ಸಂಸ್ಕಾರ ಸಹಾಯಧನ, ಚಿಕಿತ್ಸಾ ವೆಚ್ಚದ ಧನ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಪಡೆಯಲು ಕಡ್ಡಾಯವಾಗಿ ಕಾರ್ಡುಗಳ ನವೀಕರಣ ಆಗಿರತಕ್ಕದ್ದು. ಇಲ್ಲದಿದ್ದರೆ ಸೌಲಭ್ಯ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಡ್‌ಗಳ ಅವಧಿ ಮುಗಿದ ಮಾರನೇ ದಿನವೇ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಸಮೀಪದ ಸಿಎಸ್‌ಸಿ ಸೆಂಟರ್‌ಗಳಲ್ಲಿ ನವೀಕರಿಸಬಹುದು. ಇಲ್ಲವೇ ಕಾರ್ಮಿಕ ಇಲಾಖೆ ಕಚೇರಿಗೆ ಧಾವಿಸಿ ಎಲ್ಲ ದಾಖಲಾತಿಗಳನ್ನೂ ಸಲ್ಲಿಸಿ ನವೀಕರಿಸಿಕೊಳ್ಳಬಹುದು ಎಂದರು.ಕಟ್ಟಡ ಕಾರ್ಮಿಕರು ಕೆಲಸ ನಿರ್ವಹಿಸುವ ವೇಳೆ ಬಿದ್ದು ಗಾಯಗೊಂಡರೆ ಅಂತಹವರಿಗೆ 1 ಲಕ್ಷ ರು. ಪರಿಹಾರ, ಅಂಗವೈಕಲ್ಯಕ್ಕೆ ಒಳಗಾದರೆ ಯಾವ ಪ್ರಮಾಣದಲ್ಲಿ ಅಂಗವೈಕಲ್ಯವಾಗಿದೆ ಎಂಬುದರ ಆಧಾರದ ಮೇಲೆ 2 ಲಕ್ಷ ರು. ಪರಿಹಾರ ಪಡೆಯಬಹುದಾಗಿದೆ ಎಂದರು.
ಗ್ರಾಪಂ ಸದಸ್ಯರಾದ ದಿನೇಶ್, ಹೇಮಂತ್, ರಾಜಶೇಖರ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಜಗದೀಶ್, ಖಜಾಂಚಿ ಜಯರಾಂ, ಸಂಘಟನಾ ಕಾರ್ಯದರ್ಶಿ ಶಿವರಾಜು, ಉಪಾಧ್ಯಕ್ಷ ರಘು, ಮುಖಂಡರಾದ ಸೋಮಣ್ಣ ಸೇರಿದಂತೆ ಹಲವರು ಇದ್ದರು.ಡಿ.೨ರಂದು ಹನುಮ ಜಯಂತಿ ಪೂಜಾ ಮಹೋತ್ಸವ
ಮಂಡ್ಯ: ನಗರದ ಬನ್ನೂರು ರಸ್ತೆಯಲ್ಲಿರುವ ಶ್ರೀಚಾಮುಂಡೇಶ್ವರಿ ಆಟೋ ನಿಲ್ದಾಣದ ಶ್ರೀಅಭಯ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ ಹನ್ನೊಂದನೇ ವರ್ಷದ ಹನುಮ ಜಯಂತಿ ಪೂಜಾ ಮಹೋತ್ಸವವನ್ನು ಡಿ.೨ರಂದು ಏರ್ಪಡಿಸಲಾಗಿದೆ. ಡಿ.೧ರಂದು ಸಂಜೆ ೫ ಗಂಟೆಗೆ ಶ್ರೀ ರಾಮತಾರಕ ಹೋಮ ಮತ್ತು ಸುದರ್ಶನ ಹೋಮವನ್ನು ನಡೆಸಲಾಗುವುದು. ಡಿ.೨ರಂದು ಹನುಮಜಯಂತಿ ಪ್ರಯುಕ್ತ ದೇವರಿಗೆ ಬೆಣ್ಣೆ ಅಲಂಕಾರ, ಫಲ ಪಂಚಾಮೃತಾಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿದೆ. ಬೆಳಗ್ಗೆ ೧೧ ರಿಂ ಮಧ್ಯಾಹ್ನ ೩ ಗಂಟೆಯವರೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಟೋ ಚಾಲಕರು, ಮಾಲೀಕರು ಮನವಿ ಮಾಡಿದ್ದಾರೆ.;Resize=(128,128))
;Resize=(128,128))