ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಕೆಜಿಎಫ್ ವಿಧಾನಸಭೆ ಕ್ಷೇತ್ರದ ಬೆಮೆಲ್ ನಗರದ ಸ್ವಾಗತ ಕಮಾನಿನಿಂದ ಪೈಲೈಟ್ಸ್, ಸೂರಜ್ ಮಹಲ್ ವೃತ್ತ, ರಾಬರ್ಟ್‌ಸನ್‌ಪೇಟೆ, ಸಾಲ್ಡನಾ ವೃತ್ತ, ಆಂಡ್ರಸನ್‌ಪೇಟೆ, ಕೋರಮಂಡಲ್ , ಗಾಂಧಿವೃತ್ತದವರೆಗೂ ಅಂದಾಜು ೪ ಕೋಟಿ ೬೦ ಲಕ್ಷ ರು. ವೆಚ್ಚದಲ್ಲಿ ರಸ್ತೆಯ ಮಧ್ಯದ ಡಿವೈಡರ್‌ಗಳಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್ ದೀಪಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಶಶಿಧರ್ ಕೆಜಿಎಫ್ ನಗರವನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡ್ಯೊಯುವ ನಿಟ್ಟಿನಲ್ಲಿ ಸ್ವೀಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು.ನಂತರ ಶಾಸಕಿ ಮಾತನಾಡಿ, ಕಳೆದ ೨೦- ೩೦ ವರ್ಷಗಳಿಂದ ಯಾರೂ ಮಾಡಲು ಸಾಧ್ಯವಾಗದ ಕೆಲಸವನ್ನು ನಾನು ಮಾಡಿರುವುದು ನನಗೆ ಸಂತೃಪ್ತಿ ದೊರಕಿದೆ, ನಾನು ಕ್ಷೇತ್ರದ ಜನರ ಸೇವಕಳಾಗಿ ದುಡಿಯುತ್ತಿದ್ದೇನೆ, ಪ್ರಥಮ ಬಾರಿ ಶಾಸಕಿಯಾಗಿ ಆಯ್ಕೆಯಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಆದರೆ ನಾನು ಕಾಂಗ್ರೆಸ್ ಶಾಸಕಿ ಆಗಿದ್ದರಿಂದ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ, ಆದರೆ ಮರಳಿ ನನಗೆ ಜನತೆ ೨ನೇ ಬಾರಿ ಆಶೀರ್ವಾದ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಳಿದಷ್ಟು ಅನುದಾನ ಬಿಡುಗಡೆಗೊಳಿಸಿದ್ದಾರೆ, ಆದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ೯ ಕಿಲೋಮಿಟರ್ ದೂರದವರೆಗೂ ಹೈಮಾಸ್ಟ್ ದೀಪಗಳನ್ನು ಅಳವಡಿಸಲು ಸಾಧ್ಯವಾಗಿರುವುದು ಎಂದು ತಿಳಿಸಿದರು.ಬೆಮೆಲ್ ವಸಂತನಗರದ ಬಳಿ ೨೯೪ ಎಕರೆ ಜಮೀನಿನಲ್ಲಿ ಟೌನ್ ಶಿಫ್ ಸಹ ನಿರ್ಮಾಣ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಶೀಘ್ರದಲ್ಲೇ ಟೌನ್ ಶಿಫ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ನಗರದ ಸೂರಜ್‌ಮಹಲ್ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಡೊಳ್ಳು ಕುಣಿತ, ಭರ್ಜರಿ ಬ್ಯಾಂಡ್ ಸೆಟ್‌ಗಳೊಂದಿಗೆ ಸಾಲ್ಡನಾ ವೃತ್ತದವರೆಗೂ ಕಾಲ್ನಡಿಗೆ ಮೂಲಕ ದೀಪಗಳನ್ನು ಶಾಸಕಿ ರೂಪಕಲಾ ಉದ್ಘಾಟಿಸಿದರು.ನಗರಸಭೆ ಅಧ್ಯಕ್ಷೆ ಇಂದಿರಾ ಗಾಂಧಿ ದಯಶಂಕರ್, ಉಪಾಧ್ಯಕ್ಷ ಜರ್ಮನ್, ಮಾಜಿ ನಗರಸಭೆ ಉಪಾಧ್ಯಕ್ಷೆ ದೇವಿ ಗಣೇಶ್, ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಯಪಾಲ್, ಸಂಪತ್ ಕುಮಾರ್, ನಗರಸಭೆ ಸದಸ್ಯರಾದ ಮಾಣಿಕ್ಯಂ, ಕರುಣಾಕರನ್, ಪ್ರವೀಣ್, ಶಾಲಿನಿ ನಂದಕುಮಾರ, ಸುಕನ್ಯ ಸುರೇಶ್, ರಾಜೇಶ್ ನದಿಯಾ, ಮಗಿ, ಪ್ರಭು, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ತಹಸೀಲ್ದಾರ್ ನಾಗವೇಣಿ, ಎಇಇ ಮಂಜುನಾಥ್ ಇದ್ದರು.