ಮನುಷ್ಯನ ನೋವಿನ ನಿವಾರಣೆಗೆ ಸಾಹಿತ್ಯ ಮುಖ್ಯ

| Published : Aug 09 2024, 12:35 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಪ್ರಕೃತಿಯ ಮಡಿಲು ಬಳಸಿಕೊಂಡು ಬಿಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಮನುಷ್ಯನ ನೋವಿನ ನಿವಾರಣೆಗೆ ಸಾಹಿತ್ಯ ಮುಖ್ಯವಾಗಿದ್ದು, ಕ್ರೌರ್ಯವನ್ನು ತಡೆಯುವ ಅಸ್ತ್ರವಾಗಿದೆ ಎಂದು ಮಹಾರಾಣಿ ಕಾಲೇಜು ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕಸಾಪ ಆಯೋಜಿಸಿದ್ದ ಸರೋಜರಾವ್ ಅವರ ಅಂತರಂಗದ ಅಲೆಗಳು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಪ್ರಕೃತಿಯ ಮಡಿಲು ಬಳಸಿಕೊಂಡು ಬಿಡಲಾಗುತ್ತಿದೆ. ಎಲ್ಲಾ ವಿಷಯದಲ್ಲಿಯೂ ಬಳಸಿ ಬೀಸಾಕುವ ಪ್ರವೃತ್ತಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು ತಮ್ಮ ಜವಾಬ್ದಾರಿ ನಿಬಾಯಿಸಬೇಕಿದೆ. ಪ್ರತಿ ಕೃತಿಯು ಮನಸ್ಸಿನ ಔಷಧಿಯಾಗಿದ್ದು, ಚಂಚಲ ಮನಸ್ಸನ್ನು ಪರಿವರ್ತಿಸುತ್ತದೆ ಎಂದರು.ಪುಸ್ತಕ ಓದುವುದರಲ್ಲಿ ನೀವು ತಲ್ಲೀನರಾದರೆ ಚಂಚಲನತೆ ತಪ್ಪುತ್ತದೆ. ಸಂಕಟಗಳನ್ನು ಅನುಭವಿಸುವ ತಲ್ಲಣವನ್ನು ದಾಖಲಿಸಲು ಕಾವ್ಯ ಹುಟ್ಟಿಕೊಳ್ಳುತ್ತದೆ. ಸರೋಜ ರಾವ್ ಅವರು ಕೂಡ ಹೆರಿಗೆ ವೇಳೆ ಎಲ್ಲಾ ರೀತಿಯ ದುಃಖ ಖಿನ್ನತೆಯನ್ನು ಸವಿಸ್ತಾರವಾಗಿ ಬರೆದಿದ್ದಾರೆ ಎಂದು ಅವರು ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶಾರದಾ ವಿಲಾಸ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರೊ. ಸತ್ಯನಾರಾಯಣ, ಸಹಾಯಕ ಪ್ರಾಧ್ಯಪಕ ಡಾ.ಜಿ. ಆನಂದ, ಕವಯಿತ್ರಿ ಸರೋಜರಾವ್, ಕಸಾಪ ಕಾರ್ಯದರ್ಶಿ ಲತಾ ಮೋಹನ್, ಕೋಶಾಧ್ಯಕ್ಷ ಜಿ. ಪ್ರಕಾಶ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಶಾರದಾ ವಿಲಾಸ ಕಾಲೇಜಿನ ಸಹಾರ್ಯಕ ಪ್ರಾಧ್ಯಪಕ ಡಾ.ಜಿ. ಆನಂದ್, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೆಶ್, ಗಾಯಕರಾದ ಡಾ.ಆರ್. ನಿಂಗರಾಜು, ಡಾ ಐ.ಡಿ. ಲೋಕೇಶ್, ಮಂಜುಳಾ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.