ಮನುಷ್ಯ ದುರಂಹಕಾರ ಬಿಟ್ಟು ಬದುಕಬೇಕು: ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ

| Published : Jun 24 2024, 01:36 AM IST

ಮನುಷ್ಯ ದುರಂಹಕಾರ ಬಿಟ್ಟು ಬದುಕಬೇಕು: ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ಮನುಷ್ಯರು ಅಂಧರ ಕಣ್ಣಿನಲ್ಲಿ ಲೋಕ ನೋಡುವುದು, ಶ್ರವಣ ದೋಷವುಳ್ಳವರ ಕಿವಿಯಲ್ಲಿ ಕೇಳುವುದನ್ನು ಕಲ್ಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾನ್ಯ ಮನುಷ್ಯರು ಅಂಧರ ಕಣ್ಣಿನಲ್ಲಿ ಲೋಕ ನೋಡುವುದು, ಶ್ರವಣ ದೋಷವುಳ್ಳವರ ಕಿವಿಯಲ್ಲಿ ಕೇಳುವುದನ್ನು ಕಲ್ಪಿಸಿಕೊಳ್ಳಬೇಕು. ಹಾಗೇ ನೋಡಲು, ಕೇಳಲು ಸಾಧ್ಯವಾದರೇ ಮನುಷ್ಯ ತನ್ನ ದುರಂಹಕಾರವನ್ನು ಬಿಟ್ಟು ಬದುಕಬೇಕು ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು.

ಕುವೆಂಪುನಗರದ ರಂಗಾಂತರಂಗದಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ರಂಗವಲ್ಲಿ ಸಮಾಜವಾದಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಎಸ್. ಸುಚೇತ ಅವರ ''''''''''''''''ಕೇಳದ ಕಿವಿಗಳು ಹೇಳಿದ ಕಥೆಗಳು'''''''''''''''' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆ.ಎಸ್. ಸುಚೇತ ಅವರ ಈ ಪುಸ್ತಕವು ಮನುಷ್ಯನ ಅಹಂಕಾರಕ್ಕೆ ಚುಚ್ಚಲಿದೆ ಎಂದು ತಿಳಿಸಿದರು.

ವಿಶೇಷಚೇತನರು ಅನಾಥ ಭಾವವನ್ನು ಅನುಭವಿಸುತ್ತಾರೆ. ಅವರಿಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅವರ ವೈಫಲ್ಯವನ್ನು ಸಂವೇದಶೀಲರನ್ನಾಗಿ ಅರಿಯಬೇಕು. ಸುಚೇತ ಅವರ ಬರವಣಿಗೆಯಲ್ಲಿ ಕೇಳಿದ್ದೇಲ್ಲವೂ ನೆನಪು ಮಾತ್ರವಲ್ಲ. ನೋಡಿದರ ಆಧಾರದ ಮೇಲೆ ಮಾತುಗಳನ್ನು ಕಲ್ಪಿಸಿಕೊಳ್ಳುತ್ತಾರೆ. ವಿಜ್ಞಾನ ಏನೇ ಹೇಳಿದರೂ ಅನುಭವದ ಮಾತು ತಟ್ಟಿದಂತೆ ಮನಸ್ಸಿಗೆ ತಟ್ಟುವುದಿಲ್ಲ ಎಂದರು.

1968ರಲ್ಲಿ ಕನ್ನಡದಲ್ಲಿ ಡಾ. ರಾಜಕುಮಾರ್ ಅಭಿನಯದ ನಾಂದಿ ಎಂಬ ಸಿನಿಮಾ ಇಡೀ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರವಣ ದೋಷವುಳ್ಳವರ ಕಥೆ ಆಧರಿತ ಸಿನಿಮಾ. ಇದರ ಪ್ರೇರಣೆಯಿಂದ ಹಿಂದಿಯಲ್ಲಿ ಕೋಶಿಷ್ ಸಿನಿಮಾ ಬಂತು. ಇದನ್ನು ಪ್ರತಿಯೊಬ್ಬರು ನೋಡಬೇಕು ಎಂದು ಅವರು ಹೇಳಿದರು.

ವಿಶೇಷಚೇತನರ ಕುರಿತಾದ ಪುಸ್ತಕಗಳು ಬರುತ್ತಿವೆ. ಆದರೆ, ಮೂರನೇ ಕಿವಿ ಎಂಬ ಪುಸ್ತಕವು ಒಂದು. ಈಗ ಕೇಳದ ಕಿವಿಗಳ ಹೇಳಿಕೆ ಕತೆ ಪುಸ್ತಕವೂ ಬಂದಿದೆ. ಇಂತಹ ಕೃತಿಗಳನ್ನು ಓದಬೇಕು, ಓದಿಸಬೇಕು. ಆ ಮೂಲಕ ಸೂಕ್ಷ್ಮ ಸಂವೇದನಾಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು.

ಕೃತಿ ಕುರಿತು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎ. ನಾಗರಾಜ ಮಾತನಾಡಿ, ಈ ಕೃತಿ ಪೂರ್ವಶ್ರಮದ ಕೃತಿಗಳನ್ನು ನೆನಪಿಗೆ ತರಲಿದೆ. ಕೃತಿಕಾರರು ತನ್ನ ಪ್ರಚಲಿತ ಕೃತಿಗೂ ಜೊತೆಗೆ ಇಂದಿನ ಕೃತಿಯನ್ನು ನೆನಪಿಸಿಕೊಳ್ಳುವ ಪರಿಪಾಠವಿತ್ತು. ಕಾಲನಂತರ ಬಿಟ್ಟು ಹೋಯಿತು. ಆ ಒಂದು ಪ್ರಸ್ತುತತೆಯನ್ನು ಪ್ರಚುರಪಡಿಸಿದವರು ಸುಚೇತನವರು ಎಂದರು.

ಪುಸ್ತಕವೂ ಸಂಚಿಕೆ ಪುಟಗಳನ್ನು ದಾಟಿದೆ. ಸುಚೇತನವರು ತನ್ನ ತಾಯಿ ಅವರಿಗೆ ಅರ್ಪಿಸಿದ್ದಾರೆ. ಕೃತಿಯಲ್ಲಿ ಕೃತಜ್ಞತೆ ಭಾವವನ್ನು ಎತ್ತಿಹಿಡಿಯಲಿದೆ. ಆಧುನಿಕ ತಂತ್ರದ ಜ್ಞಾನದ ಮೂಲಕ ದೃಷ್ಟಿ ದೋಷವುಳ್ಳವರು ಕನ್ನಡದ ಕೃತಿಗಳನ್ನು ಓದಬಹುದಾಗಿದೆ. ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕೃತಿಯನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ನಿರ್ದೇಶಕಿ ಪ್ರೊ.ಎಂ. ಪುಷ್ಪಾವತಿ ಬಿಡುಗಡೆಗೊಳಿಸಿದರು. ನಿವೃತ್ತ ವಿಜ್ಞಾನಿ ಡಾ.ಇ. ರತಿರಾವ್, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‌ಪ್ರಕಾಶಕ ಬಿ.ಕೆ. ಸುರೇಶ್, ಲೇಖಕ ನಾ. ದಿವಾಕರ್, ಧನಂಜಯ ಎಲಿಯೂರು, ಕೃತಿಯ ಕರ್ತೃ ಕೆ.ಎಸ್. ಸುಚೇತ ಮೊದಲಾದವರು ಇದ್ದರು.

----

ಕೋಟ್...

ಕನ್ನಡ ಸಾಹಿತ್ಯದಲ್ಲಿ ವಿಶೇಷಚೇತನರಿಗೆ ಅನೇಕ ಕೃತಿಗಳು ಬಂದಿವೆ. ಅದರಲ್ಲಿ ಈ ಕೃತಿ ವಿಶೇಷವಾಗಿದೆ. ಶ್ರವಣ ದೋಷವುಳ್ಳವರ ಅನುಭವಗಳನ್ನು ಕೃತಿ ಹೇಳಲಿದೆ.

- ಪ್ರೊ.ಎಂ. ಪುಷ್ಪಾವತಿ, ನಿರ್ದೇಶಕಿ, ಆಯಿಷ್