ಶ್ರೀವಿಠ್ಠಲ-ರುಕ್ಮಿಣಿ ಹಾಗೂ ಶ್ರೀಸಿದ್ಧಿವಿನಾಯಕ ದೇವರ ಮೂರ್ತಿಗಳ 13ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀನಾಮದೇವ ಹರಿಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡವು.

ಧಾರವಾಡ:

ಶ್ರೀವಿಠ್ಠಲ-ರುಕ್ಮಿಣಿ ಹಾಗೂ ಶ್ರೀಸಿದ್ಧಿವಿನಾಯಕ ದೇವರ ಮೂರ್ತಿಗಳ 13ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀನಾಮದೇವ ಹರಿಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡವು.ಮೂರು ದಿನಗಳ ಕಾರ್ಯಕ್ರಮದಲ್ಲಿ ಕೀರ್ತನೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು. ಭಕ್ತರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ದಿಂಡಿ ಉತ್ಸವ ಹಾಗೂ ನಗರ ಪ್ರದಕ್ಷಿಣೆ ಸಹ ಶ್ರದ್ಧಾ-ಭಕ್ತಿಯಿಂದ ನೆರವೇರಿತು.ಕಾರ್ಯಕ್ರಮದಲ್ಲಿ ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ 700ಕ್ಕೂ ಹೆಚ್ಚು ಭಕ್ತರು ಆಗಮಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು.

ಈ ವೇಳೆ ಮಾತನಾಡಿದ ಶ್ರೀನಾಮದೇವ ಶಿಂಪಿ ಸಮಾಜದ ಧಾರವಾಡ ಅಧ್ಯಕ್ಷ ಮಧುಸೂದನ ಪಿಸೆ, “ಭಕ್ತರ ಅಪಾರ ಸಹಕಾರ, ದಾನಿಗಳ ಉದಾರ ಕೊಡುಗೆ ಹಾಗೂ ಸಮಾಜದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಭಕ್ತರ ಈ ಪ್ರೀತಿ ಮತ್ತು ಸಹಕಾರವೇ ಮುಂದಿನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಈ ವೇಳೆ ಉಪಾಧ್ಯಕ್ಷ ಪ್ರಭಾಕರ ಬೊಂಗಾಳೆ, ಕಾರ್ಯದರ್ಶಿ ಲಕ್ಷ್ಮಣರಾವ್ ಮುಳೆ, ಮೋಹನ್ ಭಿಂಗೆ, ನಿತಿನ್ ಪತಂಗೆ, ಪ್ರಮೋದ ಭಿಂಗೆ, ವಿದ್ಯಾ ಭಿಂಗೆ, ಡಿ.ವೈ. ಕ್ಷೀರಸಾಗರ, ಸುಶೀಲಾ ಪತಂಗೆ, ಮಂಗಲಾ ಲಾಳಗೆ, ಲತಾ ಮಿರಜ್ಕರ್, ರಶ್ಮಿ ಸದರೆ, ಭಾಗ್ಯಶ್ರೀ ಪಿಸೆ, ದಿನಕರ ಮೀರಜಕರ, ಸೋಮನಾಥ ಗಂಜಿಗಟ್ಟಿ, ಪ್ರವೀಣ್ ಮುಳೆ, ಆನಂದ ರೇಣಕೆ ಮಂಜುನಾಥ (ಪುಟ್ಟ) ಲಾಳಗೆ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.