ದೇಶಕ್ಕಾಗಿ ಹೋರಾಡುವ ಸೈನಿಕರ ಸೇವೆ ಸ್ಮರಿಸಿ: ಶ್ರೀಕಾಂತ ದುಂಡಿಗೌಡ್ರ

| Published : Mar 22 2025, 02:02 AM IST

ದೇಶಕ್ಕಾಗಿ ಹೋರಾಡುವ ಸೈನಿಕರ ಸೇವೆ ಸ್ಮರಿಸಿ: ಶ್ರೀಕಾಂತ ದುಂಡಿಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ವೀರಯೋಧರಲ್ಲಿ ಮುಗಳಿ ಗ್ರಾಮದ ಚಂದ್ರು ಡವಗಿಯವರು ಒಬ್ಬರು. ಇಂಥ ವೀರಸೇನಾನಿಯನ್ನು ಎಲ್ಲರೂ ಸ್ಮರಿಸಬೇಕು.

ಶಿಗ್ಗಾಂವಿ: ಮುಗಳಿ ಗ್ರಾಮದ ಐಟಿಐ ಕಾಲೇಜಿಗೆ ಹುತಾತ್ಮ ಯೋಧ ಚಂದ್ರು ಡವಗಿ ಅವರ ಹೆಸರಿಡುವಂತೆ ರಾಜ್ಯ ಸರ್ಕಾರಕ್ಕೆ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಆಗ್ರಹಿಸಿದರು.ತಾಲೂಕಿನ ಮುಗಳಿ ಗ್ರಾಮದಲ್ಲಿ ಹುತಾತ್ಮ ವೀರಯೋಧ ಚಂದ್ರು ಡವಗಿ ಅವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿ, ಸೈನಿಕರು ದೇಶ ಸೇವೆಯೇ ಈಶ ಸೇವೆ ಎಂದು ಕಾಯಕವನ್ನು ಮಾಡುವರು. ತಮ್ಮ ಜೀವ ಮತ್ತು ಜೀವನವನ್ನು ಲೆಕ್ಕಿಸದೆ ತಮ್ಮ ಕುಟುಂಬವನ್ನು ತೊರೆದು ಸೇವೆ ಸಲ್ಲಿಸುತ್ತಾರೆ. ಎಷ್ಟೋ ಜನ ವೀರಯೋಧರು ಹೋರಾಡಿ ಅಲ್ಲಿಯೇ ವೀರಮರಣ ಹೊಂದುತ್ತಾರೆ. ಅಂತಹ ವೀರಯೋಧರಲ್ಲಿ ಮುಗಳಿ ಗ್ರಾಮದ ಚಂದ್ರು ಡವಗಿಯವರು ಒಬ್ಬರು. ಇಂಥ ವೀರಸೇನಾನಿಯನ್ನು ಎಲ್ಲರೂ ಸ್ಮರಿಸಬೇಕು ಎಂದರು.

ಸಹಕಾರಿ ಮುಖಂಡ ಶಿವಾನಂದ ರಾಮಗೇರಿ ಮಾತನಾಡಿ, ಗ್ರಾಮದ ಪುತ್ರ ದೇಶಕ್ಕಾಗಿ ಸೇವೆ ಮಾಡುವ ಸಂದರ್ಭದಲ್ಲಿ ವೀರಮರಣವನ್ನು ಹೊಂದಿದ ಚಂದ್ರು ಅವರು ಸಾಹಸಮಯಿಯಾಗಿದ್ದರು. ಅಂಥವರನ್ನು ಕಳೆದುಕೊಂಡಿದ್ದಕ್ಕೆ ದುಃಖವಾಗಿದ್ದರೂ ದೇಶಕ್ಕಾಗಿ ಹೋರಾಡಿದ್ದಕ್ಕೆ ಹೆಮ್ಮೆ ಇದೆ ಎಂದರು.

ಮಾಲತೇಶ ಬಿಜ್ಜೂರ, ಈಶ್ವರಗೌಡ ಪಾಟೀಲ, ಬಸವರಾಜ ಗೊಬ್ಬಿ ಸೇರಿದಂತೆ ಹಲವರು ಮಾತನಾಡಿದರು. ಬಸನಗೌಡ ಮೂಲಿಮನಿ, ಶಂಭಣ್ಣ ರಾಮಗೇರಿ, ಉಳವಣಗೌಡ ಪಾಟೀಲ, ಶೇಖಪ್ಪ ಆಡಿನ, ಬಸಪ್ಪ ಬದ್ರಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿಂಗಪ್ಪ ದುಂಡಪ್ಪನವರ ಮಹದೇವಪ್ಪ ತಳವಾರ, ಶಂಕರ ಗೊಬ್ಬಿ, ರೇಣವ್ವ ಬಿಸೇಟ್ಟಿ, ಶಿವಾನಂದ ಬಿಷೇಟ್ಟಿ, ಬಸವರಾಜ ಗೊಬ್ಬಿ, ಶಿವಪ್ಪ ದುಂಡಪ್ಪನವರ, ಬಸವಣ್ಣೆವ್ವ ಡವಗಿ, ಹುತಾತ್ಮ ಯೋಧನ ಪತ್ನಿ ಶಿಲ್ಪಾ ಡವಗಿ ಇತರರು ಇದ್ದರು. ಮಾಜಿ ಯೋಧ ಮಂಜುನಾಥ ಬಿಸೇಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.ಮತ್ತೊಮ್ಮೆ ಚಿಪ್ಕೋ ಚಳವಳಿ ನಡೆಯಲಿ

ರಾಣಿಬೆನ್ನೂರು: ಅರಣ್ಯ ಉಳಿಸಲು ಮತ್ತೊಮ್ಮೆ 70ರ ದಶಕದ ಚಿಪ್ಕೋ ಚಳವಳಿ ನಡೆಯಬೇಕಾಗಿದೆ ಎಂದು ಪ್ರಾ. ಸುರೇಶ ಬಣಕಾರ ತಿಳಿಸಿದರು.ನಗರದ ಹಲಗೇರಿ ರಸ್ತೆಯ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ಮತ್ತು ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಅರಣ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಣ್ಯ ನಾಶದಿಂದ ಹವಾಮಾನದ ವೈಪರೀತ್ಯಗಳು ಉಂಟಾಗಿ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ವರ್ಷದ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ನಡೆಯುವ ಗ್ರಾಮದಲ್ಲಿ 100 ಸಸಿ ನೆಡುವ ಮೂಲಕ ಮರ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.ಡಾ. ಪುಷ್ಪಾಂಜಲಿ ಕಾಂಬಳೆ, ಪ್ರೊ. ಬಿ.ಯು. ಮಾಳೇನಹಳ್ಳಿ, ಚೈತ್ರಾ ಕಮ್ಮಾರ, ನಂದಾ ಹಲಗೇರಿ, ಸಂಜನಾ, ಸೌಜನ್ಯ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.