ತುರ್ತು ಪರಿಸ್ಥಿತಿಯ 50ರ ನೆನಪು ಒಂದು ಜಾಗೃತ ವರ್ಷ: ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್

| Published : Jun 27 2024, 01:04 AM IST

ತುರ್ತು ಪರಿಸ್ಥಿತಿಯ 50ರ ನೆನಪು ಒಂದು ಜಾಗೃತ ವರ್ಷ: ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ತುರ್ತು ಪರಿಸ್ಥಿತಿ ಘೋಷಣೆಯ ಈ ೫೦ನೇ ವರ್ಷವನ್ನು ಒಂದು ಜಾಗೃತ ವರ್ಷ ಎಂದು ಕರೆಯಲಾಗಿದೆ. ಜಾಗೃತವಾದ ಸಮಯದಲ್ಲಿ ಜನಜಾಗೃತಿ ಇರಬೇಕು. ಎಲ್ಲರ ಮೇಲೆ, ಆಡಳಿತ ನಡೆಸುವರ ಬಗ್ಗೆ ಕಣ್ಣು ಇರಬೇಕು ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಎಮರ್ಜೆನಿಸ್ಸಿ ಹೇರಿಕೆಯ ಕರಾಳ ನೆನಪು

ಕನ್ನಡಪ್ರಭ ವಾರ್ತೆ ಹಾಸನ

ದೇಶದ ತುರ್ತು ಪರಿಸ್ಥಿತಿ ಘೋಷಣೆಯ ಈ ೫೦ನೇ ವರ್ಷವನ್ನು ಒಂದು ಜಾಗೃತ ವರ್ಷ ಎಂದು ಕರೆಯಲಾಗಿದೆ. ಜಾಗೃತವಾದ ಸಮಯದಲ್ಲಿ ಜನಜಾಗೃತಿ ಇರಬೇಕು. ಎಲ್ಲರ ಮೇಲೆ, ಆಡಳಿತ ನಡೆಸುವರ ಬಗ್ಗೆ ಕಣ್ಣು ಇರಬೇಕು ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಅಂದು ಪ್ರಧಾನಿ ಇಂದಿರಾಗಾಂಧಿ ಸೂಚನೆ ಮೇರೆಗೆ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು, ಇದೇ ಜೂ.೨೫ಕ್ಕೆ ೪೯ ವರ್ಷ ತುಂಬಲಿದ್ದು ೫೦ನೇ ವರ್ಷಕ್ಕೆ ಕಾಲಿರಿಸಲಿದೆ. ಚುನಾವಣೆ ವೇಳೆಯೇ ಇಂದಿರಾಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇದರಿಂದ ದೇಶದಲ್ಲಿ ಸಂವಿಧಾನ ಆಶಯಕ್ಕೆ ಧಕ್ಕೆಯಾಯಿತು’ ಎಂದು ಹೇಳಿದರು.

‘ಸಂವಿಧಾನ ಆರ್ಟಿಕಲ್ ೩೨ ಅತ್ಯಂತ ಗಂಭೀರ ಕಾಲಂ ಆಗಿದ್ದು ಯಾವುದೇ ಸಮಸ್ಯೆ ಎದುರಾದರೆ ಇದರ ಅಡಿ ಸುಪ್ರೀಂ ಕೋರ್ಟ್‌ಗೆ ಸಂಪೂರ್ಣ ಅಧಿಕಾರ ಇರುತ್ತದೆ.೩೫೬ ರ ಕಾಲಂ ಅನ್ನು ಸುಗ್ರೀವಾಜ್ಞೆ ಮುಖಾಂತರ ಯಾವುದೇ ಆಡಳಿತ ಸರ್ಕಾರವಿದ್ದರೂ ಕೆಡುವುವಂತಹ ಅಧಿಕಾರ ಈ ಆರ್ಟಿಕಲ್‌ನಲ್ಲಿ ಇರುತ್ತದೆ’ ಎಂದು ಹೇಳಿದರು.

‘ಚುನಾಯಿತ ಪ್ರತಿನಿಧಿಗಳು ಸೇರದಂತೆ ವಿರೋಧ ಪಕ್ಷವನ್ನೇ ಹೊರತುಪಡಿಸಿ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಅಧಿಕಾರ ಚಲಾಯಿಸುವ ಹಕ್ಕನ್ನು ಹೊಂದಿರುತ್ತದೆ. ತುರ್ತು ಪರಿಸ್ಥಿತಿ ಘೋಷಣೆ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಚಳವಳಿ ಆರಂಭಿಸಿಲಾಗಿತ್ತು. ಹೋರಾಟದಲ್ಲಿ ನಾನು ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದೆವು. ಅಂದು ಹಾಸನ ಜಿಲ್ಲೆಯಿಂದ ೨೮೦ ಜನರು ಜೈಲು ವಾಸ ಅನುಬವಿಸಿದ್ದಾರೆ. ಈಗಾಗಲೇ ಅನೇಕರು ಸಾವನಪ್ಪಿದ್ದು, ನಾವು ಸೇರಿದಂತೆ ಕೆಲವರು ಉಳಿದುಕೊಂಡಿದ್ದಾರೆ. ಹುಚ್ಚು ಕಾಯಿದೆ ಬಳಕೆ ಮಾಡಿದ್ದಾರೆ. ಜನರ ಮೇಲೆ ಬೇಡವಾದ ಕಾನೂನು ಗೊತ್ತಿಲ್ಲದವರು ಕಾನೂನು ಹೇರುವುದನ್ನು ಮಾಡಿದ್ದಾರೆ. ಇದು ಒಂದು ರೀತಿಯ ಎರಡನೇ ಸ್ವಾತಂತ್ರ್ಯಸಂಗ್ರಾಮವಾಗಿದೆ’ ಎಂದು ಸ್ಮರಿಸಿದರು.

ಹಿಂದೆ ಚಿಂತಕರು ಸಾಮಾಜಿಕ ಹೋರಾಟಗಾರರು ಪಾರ್ಲಿಮೆಂಟ್ ಸದಸ್ಯರಾಗಿರುತ್ತಿದ್ದರು. ಆದರೆ ಇಂದಿನ ರಾಜಕಾರಣದಲ್ಲಿ ಹಣ ಇದ್ದವರು ಪಾರ್ಲಿಮೆಂಟ್ ಮೆಟ್ಟಿಲೇರುವ ಹಾಗೆ ಆಗಿರುವುದು ಬೇಸರ ತಂದಿದೆ ಎಂದು ಹೇಳಿದರು.

ನಂಜುಂಡಪ್ಪ ಸತ್ಯನಾರಯಣಗುಪ್ತ ವಿಶಾಲಾಕ್ಷಮ್ಮ, ಎ.ಎಸ್. ಬಸವರಾಜ್, ಗಂಗಾಧರ್, ರೇಣುಕಾನಂದ ಇತರರು ಹಾಜರಿದ್ದರು.