ವಿವಿ ಆಡಿಟೋರಿಯಂಗೆ ಅನುದಾನ ನೀಡಲು ಮನವಿ

| Published : Sep 12 2025, 12:06 AM IST

ವಿವಿ ಆಡಿಟೋರಿಯಂಗೆ ಅನುದಾನ ನೀಡಲು ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿ ಬಿದರೆಕಟ್ಟೆಯಲಿರುವ ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಸುಸಜ್ಜಿತ ಆಡಿಟೋರಿಯಂ ನಿರ್ಮಾಣ ಮಾಡಲು ಸಿಎಸ್‌ಆರ್ ಅನುದಾನ ನೀಡುವಂತೆ ಶಾಸಕ ಬಿ.ಸುರೇಶ್‌ಗೌಡ ಕೇಂದ್ರ ಉಕ್ಕು ಮತ್ತು ಕಬ್ಬಿಣ ಹಾಗೂ ಬೃಹತ್‌ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿ ಬಿದರೆಕಟ್ಟೆಯಲಿರುವ ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಸುಸಜ್ಜಿತ ಆಡಿಟೋರಿಯಂ ನಿರ್ಮಾಣ ಮಾಡಲು ಸಿಎಸ್‌ಆರ್ ಅನುದಾನ ನೀಡುವಂತೆ ಶಾಸಕ ಬಿ.ಸುರೇಶ್‌ಗೌಡ ಕೇಂದ್ರ ಉಕ್ಕು ಮತ್ತು ಕಬ್ಬಿಣ ಹಾಗೂ ಬೃಹತ್‌ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮನವಿ ಮಾಡಿದರು.ನವದೆಹಲಿಯಲ್ಲಿ ಗೃಹ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸುರೇಶ್‌ಗೌಡರು, ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ ರಾಜ್ಯದಲ್ಲೇ ಅತಿದೊಡ್ಡ ಕ್ಯಾಂಪಸ್‌ ಆಗಿದೆ. ವಿವಿಯ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತಹ ಸುಸಜ್ಜಿತ ಆಡಿಟೋರಿಯಂ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ಅನುದಾನದಲ್ಲಿ ನೆರವು ನೀಡಬೇಕು ಎಂದು ಸಚಿವ ಕುಮಾರಸ್ವಾಮಿಯವರನ್ನು ವಿನಂತಿ ಮಾಡಿಕೊಂಡರು.ವಿವಿ ಆಡಿಟೋರಿಯಂ ನಿರ್ಮಾಣಕ್ಕೆ ಸಿಎಸ್‌ಆರ್ ಅನುದಾನ ನೀಡುವಂತೆ ತಮ್ಮ ವ್ಯಾಪ್ತಿಯಲ್ಲಿ ಬರುವ ಕಂಪನಿಗಳಿಗೆ ನಿರ್ದೇಶನ ನೀಡಲು ಮನವಿ ಮಾಡಿದರು. ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಅನುದಾನ ಬಿಡುಗಡೆ ಬಗ್ಗೆ ಭರವಸೆ ನೀಡಿದರು. ಕೇಂದ್ರ ಸಚಿವಕುಮಾರಸ್ವಾಮಿ ಭೇಟಿ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಹೊಳಕಲ್ ಆಂಜನಪ್ಪ, ಮುಖಂಡರಾದ ಪ್ರಭಾಕರ್, ಗಂಗರಾಜು, ಭೈರೇಗೌಡ ಮೊದಲಾದವರು ಹಾಜರಿದ್ದರು.