ವೈಜ್ಞಾನಿಕ ವಿವಿ ಸ್ಥಾಪನೆಗೆ ಸಂಶೋಧನಾ ಪರಿಷತ್‍ ಆಗ್ರಹ

| Published : Feb 06 2024, 01:33 AM IST

ವೈಜ್ಞಾನಿಕ ವಿವಿ ಸ್ಥಾಪನೆಗೆ ಸಂಶೋಧನಾ ಪರಿಷತ್‍ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿಜ್ಞಾನ-ಸಾಹಿತ್ಯ-ಸಂಸ್ಕೃತಿ ಸಮಾಗಮಗೊಳಿಸಿ ಮಕ್ಕಳಲ್ಲಿ ಮಾನವೀಯತೆ, ಸೌಹಾರ್ದತೆ, ಪ್ರಯೋಗ ಶೀಲತೆ ಬೆಳೆಸುವುದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಧ್ಯೇಯ ಎಂದು ಚಿತ್ರದುರ್ಗ ಶಾಖೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಸಾರ್ವಜನಿಕರಲ್ಲಿನ ಮೌಡ್ಯತೆಯನ್ನು ನಿವಾರಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಮೌಢ್ಯ ಮುಕ್ತ ವೈಜ್ಞಾನಿಕ ಆಕಾಡೆಮಿ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಮೌಢ್ಯ ನಿವಾರಣೆಗೆ ವೈಜ್ಞಾನಿಕ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಚಿತ್ರದುರ್ಗ ಶಾಖೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜನ ಸಾಮಾನ್ಯರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯ, ವೈಜ್ಞಾನಿಕ ಕೌಶಲ್ಯ, ಚಿಂತನಾಶೀಲತೆ, ಮನಸ್ಸಿನ ಸದೃಢತೆ ಬೆಳಸಲು ಶ್ರಮಿಸಿಸುತ್ತಿದೆ. ಶೈಕ್ಷಣಿಕ. ಶೈಕ್ಷಣಿಕ ವೈಜ್ಞಾನಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನಾ ಕಾರ್ಯಗಳನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳುತ್ತಾ ಜನಮನದಲ್ಲಿ ನೆಲೆಗೊಂಡಿದೆ. ವಿಜ್ಞಾನ-ಸಾಹಿತ್ಯ-ಸಂಸ್ಕೃತಿ ಸಮಾಗಮಗೊಳಿಸಿ ಮಕ್ಕಳಲ್ಲಿ ಮಾನವೀಯತೆ, ಸೌಹಾರ್ದತೆ, ಪ್ರಯೋಗ ಶೀಲತೆ ಬೆಳೆಸುವುದು ಪರಿಷತ್ತಿನ ಧ್ಯೇಯವಾಗಿದೆ. ವೈಚಾರಿಕ ಚಿಂತಕರ ಛಾವಡಿಯಿಂದ ಬಂದ ಮುಖ್ಯಮಂತ್ರಿಗಳು ಮೌಢ್ಯತೆ ವಿರೋಧಿ ಕಾನೂನು ಜಾರಿಗೆ ತಂದಿದ್ದು, ಅನೇಕ ಮುಗ್ಧ ಜನರಿಗೆ ಅನುಕೂಲವಾಗಿದೆ.

ಜನರಲ್ಲಿ ಜಾಗೃತಿ ಮೂಡಿಸುವ ಪ್ರಯುಕ್ತ ಮೌಢ್ಯ ಮುಕ್ತ ವೈಜ್ಞಾನಿಕ ಆಕಾಡಮಿ ಸರ್ಕಾರದ ವತಿಯಿಂದ ಸ್ಥಾಪನೆ ಮಾಡುವುದು ಅಗತ್ಯವಾಗಿದೆ. ಪರಿಷತ್ತು ವತಿ ಯಿಂದ ಪ್ರತಿ ವರ್ಷ ನಡೆಯುವ ವೈಜ್ಞಾನಿಕ ಸಮ್ಮೇಳನಕ್ಕೆ 1 ಕೋಟಿ 50 ಲಕ್ಷ ರು. ಅನುದಾನ ನೀಡುವುದು. ಪರಿಷತ್ತು ವತಿಯಂದ ಪ್ರಕಟವಾಗುತ್ತಿರುವ ವಿಜ್ಞಾನ ಸಿರಿ ಮಾಸಪತ್ರಿಕೆಯನ್ನು ಗ್ರಾಮ ಪಂಚಾಯ್ತಿ ಮತ್ತು ಶಾಲಾ ಖಾಲೇಜು ಗ್ರಂಥಾಲಯಗಳಿಗೆ ಖರೀದಿಸಲು ಶಿಕ್ಷಣ ಇಲಾಖೆಗೆ ಆದೇಶ ಮಾಡಬೇಕು, ಚಿಕ್ಕಬಳ್ಳಾ ಪುರ ಶಿಡ್ಲಘಟ್ಟದ ಬಳಿ ನಿರ್ಮಾಣ ಮಾಡುತ್ತಿರುವ 55 ಕೋಟಿ ರು. ವೆಚ್ಚದ ವಿಜ್ಞಾನ ಗ್ರಾಮಕ್ಕೆ ಪ್ರತಿವರ್ಷ 10 ಕೋಟಿ ರು. ಅನುದಾನ ನೀಡಬೇಕೆಂದು ಜಿಲ್ಲಾಧಿ ಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಜಿಲ್ಲಾಧ್ಯಕ್ಷ ನಾಗರಾಜ್ ಸಗಂ, ಕಾರ್ಯದರ್ಶಿ ಲೋಕೇಶ್, ಪದಾಧಿಕಾರಿಗಳಾದ ಜ್ಞಾನಮೂರ್ತಿ, ಎಂ.ರಂಗಪ್ಪ, ಕೆಂಚಪ್ಪ, ಲವಕುಮಾರ್, ಮಹಿಳಾ ಪದಾಧಿಕಾರಿಗಳಾದ ಶೈಲಾಜಬಾಬು, ದೇವಕಿ ರುದ್ರಪ್ಪ ಗೀತಾ ಸದಸ್ಯರಾದ ರಾಜಶೇಖರ, ಹನುಮಂತಪ್ಪ ಕಾಟಪ್ಪ, ಜನಾರ್ಧನಶೆಟ್ಟಿ, ಗಿರೀಶ್ ಇದ್ದರು.