ಸಾರಾಂಶ
ದೇಶಕ್ಕೆ ಯೋಧರು ಮತ್ತು ರೈತರು ಎರಡು ಕಣ್ಣುಗಳಿದ್ದಂತೆ, ಅಂತಹ ಯೋಧರು ದೇಶದ ರಕ್ಷಣೆ ಮಾಡುವಾಗ ತಮ್ಮ ಪ್ರಾಣಾರ್ಪಣೆ ಮಾಡಿ ಅಮರರಾಗಿರುತ್ತಾರೆ ಅಂತಹ ಯೋಧರ ಮಕ್ಕಳಿಗೆ ಶೇ. 5 ರಷ್ಟು ಮೀಸಲಾತಿ ನೀಡಿದರೆ ಎಷ್ಟೋ ಮಂದಿಗೆ ಅವಕಾಶ ಸಿಗುತ್ತದೆ. ಆದುದರಿಂದ ಶೇ. 60 ಅಂಕಗಳಿಸಿದ ಎಲ್ಲಾ ಮೃತ ಯೋಧರ ಮಕ್ಕಳಿಗೆ ಮೀಸಲಿಟ್ಟು ಅವಕಾಶ ನೀಡಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶೇ. 60 ಅಂಕಗಳಿಸಿದ ಮೃತ ಯೋಧರ ಮಕ್ಕಳಿಗೆ ಎಂಜಿನಿಯರಿಗ್, ಐಐಟಿ, ಮೆಡಿಕಲ್ ಮತ್ತಿತರ ಉನ್ನತ ವಿದ್ಯಾಭ್ಯಾಸದಲ್ಲಿ ಶೇ. 5ರಷ್ಟು ಉಚಿತ ಸೀಟುಗಳನ್ನು ಸರ್ಕಾರ ಮೀಸಲಿಡಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಸಲಹೆ ನೀಡಿದರು.‘ನಮ್ಮೂರಿಗೆ ನಮ್ಮ ಶಾಸಕರು’ ಕಾರ್ಯಕ್ರಮದಡಿ ಶುಕ್ರವಾರ ತಾಲೂಕಿನ ಕಮ್ಮಗುಟ್ಟ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್. ಚೊಕ್ಕನಹಳ್ಳಿ, ಕರಕಮಾಕಲಹಳ್ಳಿ, ಬೊಮ್ಮಗಾನಹಳ್ಳಿ ಗ್ರಾಮ ಗಳಿಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶೇ.5ರಷ್ಟು ಮೀಸಲು ಕಲ್ಪಿಸಿದೇಶಕ್ಕೆ ಯೋಧರು ಮತ್ತು ರೈತರು ಎರಡು ಕಣ್ಣುಗಳಿದ್ದಂತೆ, ಅಂತಹ ಯೋಧರು ದೇಶದ ರಕ್ಷಣೆ ಮಾಡುವಾಗ ತಮ್ಮ ಪ್ರಾಣಾರ್ಪಣೆ ಮಾಡಿ ಅಮರರಾಗಿರುತ್ತಾರೆ ಅಂತಹ ಯೋಧರ ಮಕ್ಕಳಿಗೆ ಶೇ. 5 ರಷ್ಟು ಮೀಸಲಾತಿ ನೀಡಿದರೆ ಎಷ್ಟೋ ಮಂದಿಗೆ ಅವಕಾಶ ಸಿಗುತ್ತದೆ. ಆದುದರಿಂದ ಶೇ. 60 ಅಂಕಗಳಿಸಿದ ಎಲ್ಲಾ ಮೃತ ಯೋಧರ ಮಕ್ಕಳಿಗೆ ಮೀಸಲಿಟ್ಟು ಅವಕಾಶ ನೀಡಬೇಕು ಎಂದರು.
ಕ್ಷೇತ್ರದಲ್ಲಿನ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಗ್ರಾಮ ನೈರ್ಮಲೀಕರಣ, ಹಸರೀಕರಣ, ಸೂಕ್ತ ಸಾರಿಗೆ ಸಂಪರ್ಕ, ರಸ್ತೆ ನಿರ್ಮಾಣ ಸೇರಿದಂತೆ ಸಮಗ್ರ ಗ್ರಾಮೀಣ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.ಸಮಸ್ಯೆ ಪರಿಹರಿಸುವ ಭರವಸೆ
ಆರ್. ಚೊಕ್ಕನಹಳ್ಳಿ, ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಆರ್. ಚೊಕ್ಕನಹಳ್ಳಿ, ಕರಕಮಾಕಲಹಳ್ಳಿ, ಬೊಮ್ಮಗಾನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ರಸ್ತೆ ಸಂಪರ್ಕ, ಜಾಗದ ಒತ್ತುವರಿ ತೆರವು, ಚರಂಡಿ ನಿರ್ಮಾಣ, ನೈರ್ಮಲ್ಯ, ನಕಾಶೆ ರಸ್ತೆ, ರೈತರ ಬೆಸಕಾಂ, ವೃದ್ದರ ಪಿಂಚಣಿ,ವಸತಿ,ನಿವೇಶನ, ಬಸ್, ಶಾಲಾ ಕೊಠಡಿಗಳ, ಶೌಚಾಲಯ ಮತ್ತಿತರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಈವೇಳೆ ತಹಸಿಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುಳಾ,ಗ್ರಾಮ ಪಂಚಾಯತಿ ಪಿಡಿಓ ಮದ್ದಿರೆಡ್ಡಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮೋಹನ್ ರೆಡ್ಡಿ, ಮುಖಂಡರಾದ ಅರವಿಂದ, ಎಸ್.ಪ.ಶ್ರೀನಿವಾಸ್, ಲಕ್ಷ್ಮೀಪತಿ, ನಾಗಭೂಷಣ್, ರಾಜಣ್ಣ, ಶಂಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಇದ್ದರು.