ಪರಪ್ಪನ ಅಗ್ರಹಾರದಲ್ಲಿ ಕೊಲೆಗಡುಕರಿಗೆ, ಹಣವಂತರಿಗೆ ಗೌರವ : ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ

| Published : Aug 29 2024, 12:47 AM IST / Updated: Aug 29 2024, 09:12 AM IST

ಪರಪ್ಪನ ಅಗ್ರಹಾರದಲ್ಲಿ ಕೊಲೆಗಡುಕರಿಗೆ, ಹಣವಂತರಿಗೆ ಗೌರವ : ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆಗಡುಕರು, ಹಣವಂತರಿಗೆ ಹೆಚ್ಚಿನ ಗೌರವವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.

 ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆಗಡುಕರು, ಹಣವಂತರಿಗೆ ಹೆಚ್ಚಿನ ಗೌರವವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕನ್ನಡ ನಾಡು, ನುಡಿ ವಿಚಾರದಲ್ಲಿಹೋರಾಟ ಮಾಡಿದ್ದ ವೇಳೆ 16 ದಿನ ಜೈಲಿನಲ್ಲಿದ್ದೆ. ಆ ವೇಳೆ ಜೈಲರ್‌ಗೆ ಸಿಂಗಲ್‌ ಇಡ್ಲಿ ಕೇಳಿದ್ದೆ. ಹೊರಗಿನ ಆಹಾರ ತರಲಾಗದು. ಜೈಲಿನಲ್ಲಿ ನೀಡುವ ಆಹಾರವನ್ನು ತಿನ್ನುವಂತೆ ಹೇಳಿದರು. ಚಿತ್ರನಟ ದರ್ಶನನಂತಹಣವಂತರಿಗೆ ಎಲ್ಲ ವ್ಯವಸ್ಥೆಯನ್ನು ಕೊಡುತ್ತಾರೆ. ಜೈಲಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪರಪ್ಪನ ಅಗ್ರಹಾರದಲ್ಲಿ ಸಿಬ್ಬಂದಿ ಹಣ ಇದ್ದವರಿಗೆ ಬೀಡಿ, ಸಿಗರೇಟ್‌, ಎಣ್ಣೆ, ಡ್ರಗ್ಸ್‌, ಗಾಂಜಾ ಎಲ್ಲವನ್ನೂ ಕೊಡುತ್ತಾರೆ. ಬಡಕೈದಿಗಳಿಗೆ ಔಷಧ ಮಿಶ್ರಿತ ಆಹಾರ ನೀಡುತ್ತಾರೆ. ಹಣ ಇದ್ದವರಿಗೆ ಹೊರಗಿನ ಆಹಾರ ಕೊಡುತ್ತಾರೆ. ಕೊಲೆಗಡುಕರು, ಕ್ರಿಮಿನ್ಲ್‌ಗಳಿಗೆ ಎಲ್ಲಿಲ್ಲದ ರಕ್ಷಣೆ, ಆತಿಥ್ಯ ನೀಡುತ್ತಿರುವ ಪರಪ್ಪನ ಅಗ್ರಹಾರದ ಕೆಟ್ಟ ವ್ಯವಸ್ಥೆ ಬಗ್ಗೆ ನಾನೇ ಒಂದು ಪುಸ್ತಕ ಬರೆದಿದ್ದೇನೆ ಎಂದರು.

ಪರಪ್ಪನ ಅಗ್ರಹಾರ ಅವ್ಯವಸ್ಥೆ ಬೆಳಕಿಗೆ ಬಂದಿದ್ದು, ಕೂಡಲೇ ಮುಖ್ಯಮಂತ್ರಿಗಳು ಗೃಹಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.