ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಾದ್ಯಂತ ಸೋಮವಾರ ಮಳೆ ಪ್ರಮಾಣ ಇಳಿಮುಖವಾಗಿತ್ತು. ಆದರೆ ಭಾರಿ ಗಾಳಿಯಿಂದಾಗಿ ಕೆಲವೆಡೆ ಹಾನಿ ಸಂಭವಿಸಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಕೂಡ ಇಳಿಕೆಯಾಗಿದೆ. ಜಿಲ್ಲೆಯ ಭಾಗಮಂಡಲ, ಕುಶಾಲನಗರದ ಸಾಯಿ ಬಡಾವಣೆ, ಕರಡಿಗೋಡು ಮತ್ತಿತರ ಕಡೆಗಳಲ್ಲಿ ಪ್ರವಾಹ ಇಳಿದಿದೆ.ಸೋಮವಾರಪೇಟೆ ರಸ್ತೆಯ ತಣ್ಣೀರುಹಳ್ಳ ಗ್ರಾಮದ ಜೋಸೆಫ್ ಡಿಸಿಲ್ವ ಎಂಬವರಿಗೆ ಸೇರಿದ ಕಾಫಿ ತೋಟದಿಂದ ಸಿಲ್ವರ್ ಮರ ಬಿದ್ದು, ವಳಗುಂದ ನಿವಾಸಿ ಶಶಿ ಕುಮಾರ್ ಎಂಬವರಿಗೆ ಗಾಯವಾಗಿದೆ. ಸೋಮವಾರಪೇಟೆಯಲ್ಲಿ ಚಿಕಿತ್ಸೆ ನೀಡಿದ ಬಳಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸಾಗಿಸಲಾಗಿದೆ. ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ ಗ್ರಾಮದ ಬಾಬಿ ಅವರ ಮನೆ ಹಾನಿಯಾಗಿದೆ.
ವಿರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದ ತೋರ ಗ್ರಾಮದ ನಿವಾಸಿ ಪೂವಣ್ಣ ಅವರ ಮನೆ ಮಳೆಯಿಂದ ಹಾನಿಯಾಗಿದೆ. ಬಿಟ್ಟಂಗಾಲದ ನಿವಾಸಿ ಪೊನ್ನೀರ ಅಯ್ಯಪ್ಪ ಅವರ ವಾಹನ ನಿಲುಗಡೆ ಶೆಡ್ ಮೇಲೆ ತೆಂಗಿನ ಮರ ಬಿದ್ದು ಶೆಡ್ ಗೆ ಹಾನಿಯಾಗಿದೆ. ಅಮ್ಮತ್ತಿ ಹೋಬಳಿಯ ಕರಡಿಗೋಡು ಹೊಳೆಕೆರೆ ಪೈಸಾರಿಯಲ್ಲಿ ಕಾವೇರಿ ಹೊಳೆಯ ನೀರಿನ ಮಟ್ಟ ಇಳಿಮುಖಗೊಂಡಿದೆ.ಅಮ್ಮತ್ತಿ ಹೋಬಳಿಯ ಚೆನ್ನಂಗಿ ಮೂಡಬೈಲು ಗ್ರಾಮದ ಮೂರ್ತಿ ಅವರ ವಾಸದ ಮನೆ ಗೋಡೆ ಬಿದ್ದು ಹಾನಿಯಾಗಿದೆ. ಚೆನ್ನಯ್ಯನಕೋಟೆ ಗ್ರಾಮದ ಲಕ್ಷ್ಮೀ, ಕೃಷ್ಣ ಅವರ ಮನೆಗೆ ಹಾನಿಯಾಗಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 19.88 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 51.28 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1632.63 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 769.11 ಮಿ.ಮೀ ಮಳೆಯಾಗಿತ್ತು.ಮಡಿಕೇರಿ ತಾಲೂಕಿನಲ್ಲಿ10.78 ಮಿ.ಮೀ. ಕಳೆದ ವರ್ಷ ಇದೇ ದಿನ 52.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2296.20 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1308.73 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ 1.10 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 43.95 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1567.05 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 600.56 ಮಿ.ಮೀ. ಮಳೆಯಾಗಿತ್ತು.ಪೊನ್ನಂಪೇಟೆ ತಾಲೂಕಿನಲ್ಲಿ 20.93 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 60.73 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1550.96 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 644.84 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ 60.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 76.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1710.96 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 788.81 ಮಿ.ಮೀ. ಮಳೆಯಾಗಿತ್ತು.ಕುಶಾಲನಗರ ತಾಲೂಕಿನಲ್ಲಿ 5.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1038 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 502.55 ಮಿ.ಮೀ. ಮಳೆಯಾಗಿತ್ತು.
ಹೋಬಳಿ ವಿವರ : ಮಡಿಕೇರಿ ಕಸಬಾ 8.60, ನಾಪೋಕ್ಲು 5.80, ಸಂಪಾಜೆ 8.50, ಭಾಗಮಂಡಲ 20.20, ವಿರಾಜಪೇಟೆ 2.20, ಹುದಿಕೇರಿ 14.50, ಶ್ರೀಮಂಗಲ 32.20, ಪೊನ್ನಂಪೇಟೆ 21.01, ಬಾಳೆಲೆ 16.02, ಸೋಮವಾರಪೇಟೆ ಕಸಬಾ 55, ಶನಿವಾರಸಂತೆ 40, ಶಾಂತಳ್ಳಿ 100, ಕೊಡ್ಲಿಪೇಟೆ 48.20, ಕುಶಾಲನಗರ 2.60, ಸುಂಟಿಕೊಪ್ಪ 9 ಮಿ.ಮೀ.ಮಳೆಯಾಗಿದೆ.