ಕೇಂದ್ರದಿಂದ ರಾಜ್ಯಗಳ ಮೇಲೆ ಸೇಡಿನ ಕ್ರಮ

| Published : Sep 29 2024, 01:32 AM IST

ಸಾರಾಂಶ

ತುಮಕೂರು: ಕೇಂದ್ರದ ಎನ್ ಡಿಎ ಸರ್ಕಾರ ತಮ್ಮ ನೀತಿಗಳನ್ನು ವಿರೋಧಿಸುವ ರಾಜ್ಯ ಸರ್ಕಾರಗಳ ಮೇಲೆ ವಿನಾಕಾರಣ ಸೇಡು ತೀರಿಸಿಕೊಳ್ಳುತ್ತಿವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸದಸ್ಯ ಮೀನಾಕ್ಷಿ ಸುಂದರಂ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು: ಕೇಂದ್ರದ ಎನ್ ಡಿಎ ಸರ್ಕಾರ ತಮ್ಮ ನೀತಿಗಳನ್ನು ವಿರೋಧಿಸುವ ರಾಜ್ಯ ಸರ್ಕಾರಗಳ ಮೇಲೆ ವಿನಾಕಾರಣ ಸೇಡು ತೀರಿಸಿಕೊಳ್ಳುತ್ತಿವೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸದಸ್ಯ ಮೀನಾಕ್ಷಿ ಸುಂದರಂ ಆಕ್ರೋಶ ವ್ಯಕ್ತಪಡಿಸಿದರು.ಅವರು ಶನಿವಾರ ತುಮಕೂರಿನ ಜನಚಳುವಳಿ ಕೇಂದ್ರದಲ್ಲಿ, ಸಿಪಿಐ(ಎಂ) ಪಕ್ಷದ 18 ನೇ ತುಮಕೂರು ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.ಜನ ಸಾಮಾನ್ಯರು ಬದುಕಲಿಕ್ಕೆ ಸಾಧ್ಯವಾಗದೇ ಇರುವ ರೀತಿಯಲ್ಲಿ ಹೊಸ ಹೊಸ ಕಾನೂನುಗಳನ್ನು ಇವತ್ತು ಜಾರಿಮಾಡುತ್ತಿದ್ದು ದುಡಿಯುವಂತಹ ಜನರಿಗೆ ನ್ಯಾಯೋಚಿತ ಪಾಲು ಕೊಡದೆ ಇರುವಂತಹ ಮನಸ್ಥಿತಿಯಲ್ಲಿದೆ ಎಂದರು. ಅಲ್ಲದೆ ಜನರನ್ನು ಒಡೆದು ಆಳುವ ಉಳಿಸುವಂತವಹ ಕೆಲಸವನ್ನು ವ್ಯಾಪಕವಾಗಿ ಎನ್‌ಡಿಎ ಸರ್ಕಾರ ಮಾಡುತ್ತಿದೆ. ಅಖಂಡ ಭಾರತದ ಸರ್ವಾಧಿಕಾರವನ್ನು ಸರ್ವಾನುಮತಗೊಳಿಸಲಿಕ್ಕೆ ಇರುವಂತಂಹ ಎಲ್ಲಾ ಪ್ರಯತ್ನಗಳನ್ನು ಮತ್ತೆ ತಮ್ಮ ಅಧಿಕಾರವನ್ನು ಕೇಂದ್ರಿಕೃತಗೊಳಿಸುವಂತಹ ಸಂವಿಧಾನ ವಿರೋಧಿಯ ಪ್ರಯತ್ನಗಳನ್ನು ಎನ್‌ಡಿ ಸರ್ಕಾರ ಮಾಡಲಿಕ್ಕೆ ಹೊರಟಿದೆ ಎಂದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸದಸ್ಯ ಸೈಯುದ್ ಮುಜೀಬ್‌ ಮಾತನಾಡಿ ಬಂಡವಾಳಗಾರರಿಗೆ ರೈತರ, ಬಡವರ ಭೂಮಿಯನ್ನು ಕಿತ್ತುಕೊಳ್ಳುವಂತಹ ಕೆಲಸವನ್ನು ಸರ್ಕಾರಗಳು ಮಾಡುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ, ನಿವೇಶನ ರಹಿತರಿಗೆ ವಸತಿ ನಿವೇಶನ ನೀಡಲು ಇಲ್ಲದ ಭೂಮಿ ಬಂಡವಾಳ ಶಾಹಿಗಳಿಗೆ ನೀಡಲು ಎಲ್ಲಿಂದ ಬರುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಉಮೇಶ್ ಮಾತನಾಡಿ ಸರ್ಕಾರಿ ಇಲಾಖೆಗಳಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ, ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುದನ್ನು ನಿಲ್ಲಿಸದಿದ್ದರೆ ಮುಂದಿನ ದಿಗಳಲ್ಲಿ ನಮ್ಮ ಪಕ್ಷದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದರು. ಸಿಪಿಐ(ಎಂ) ನಗರ ಸಮಿತಿ ಕಾರ್ಯದರ್ಶಿ ಲೋಕೇಶ್.ಜಿ ಮಾತನಾಡಿ ಕೈಗಾರಿಕೆಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು ಇವರಿಗೆ ವಿಶೇಷವಾದ ಕಾನೂನನ್ನು ಜಾರಿಗೆ ತಂದು ಇವರ ಕೆಲಸವನ್ನು ಖಾಯಂ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಸಮ್ಮೇಳನದ ಅಧ್ಯಕ್ಷೇತೆಯನ್ನು ವಹಿಸಿದ ಸಿಪಿಐ(ಎಂ)ತುಮಕೂರು ಜಿಲ್ಲಾ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ ಕೇಂದ್ರ ಸರ್ಕಾರ ವಿರೋಧಿ ನೀತಿಗಳನ್ನು ಮುಂದುವರಿಸಿದ್ದಲ್ಲಿ ನಮ್ಮ ಪಕ್ಷದ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದರು . ಅಗಲಿದ ಗಣ್ಯವ್ಯಕ್ತಿಗಳಿಗೆ ಎರಡು ನಿಮಿಷಗಳ ಕಾಲ ಮೌನಚರಣೆಯನ್ನು ಅಚರಿಸಲಾಯಿತು. ಸಿಪಿಐ(ಎಂ) ಹಿರಿಯ ಸದಸ್ಯ ಅಜ್ಜಪ್ಪ ನವರು ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಜಾಲನೆ ನೀಡಿದರು.ಸಮಿತಿಯ ಮುಂದಾಳು ಷಣ್ಮುಖಪ್ಪ ಸ್ವಾಗತಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಉಮೇಶ್,ಬಿ ನಗರ ಸಮಿತಿ ಸದಸ್ಯರಾದ ಶಾಹತಾಜ್ ವೇದಿಕೆಯಲ್ಲಿದ್ದರು.ನಗರ ಸಮಿತಿ ಸದಸ್ಯರಾದ ರಂಗಧಮಯ್ಯ ವಂದಿಸಿದರು. ಬಹಿರಂಗ ಸಭೆಯಲ್ಲಿ ರೈತಮುಖಂಡರಾದ ದೊಡ್ಡನಂಜಪ್ಪ, ಬೀಡಿ ಕಾರ್ಮಿಕ ಮುನ್ನಫ್, ಕಾರ್ಮಿಕರಾದ ಶಿವಕುಮಾರ, ಸುಜಿತ್ ನಾಯಕ್,ಆಟೋ ಸಂಘದ ಇಂತೂ ಇದ್ದರು.