ವೈಯಕ್ತಿಕ ಬದುಕು ಬದಿಗಿಟ್ಟು ಸಮಾಜಕ್ಕಾಗಿ ಬದುಕುತ್ತಿರುವ ಪೊಲೀಸರು: ಶಿವರಾಜು

| Published : Apr 03 2024, 01:33 AM IST

ವೈಯಕ್ತಿಕ ಬದುಕು ಬದಿಗಿಟ್ಟು ಸಮಾಜಕ್ಕಾಗಿ ಬದುಕುತ್ತಿರುವ ಪೊಲೀಸರು: ಶಿವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಶಿಸ್ತು ಸಂಯಮ, ಸಮಯ ಪಾಲನೆಯು ಪೊಲೀಸ್ ಇಲಾಖೆಯ ಬೆನ್ನೆಲುಬು. ಇದರ ಪಾಲನೆಯಿಂದ ವೈಯಕ್ತಿಕ ಬೆಳವಣಿಗೆಯೂ ಆಗುತ್ತದೆ. ನಿವೃತ್ತ ಅಧಿಕಾರಿಗಳ ಕಲ್ಯಾಣಕ್ಕಾಗಿ ಪೊಲೀಸ್‌ ಧ್ವಜ ಮಾರಾಟ ಮಾಡುತ್ತಿದ್ದು, ಕರ್ತವ್ಯ ನಿರತರು ಹೆಚ್ಚಿನ ಧ್ವಜ ಮಾರಾಟ ಮಾಡಿ

ಕನ್ನಡಪ್ರಭ ವಾರ್ತೆ ಮೈಸೂರು

ಪೊಲೀಸ್ ಇಲಾಖೆಯ ಸಿಬ್ಬಂದಿ ವೈಯಕ್ತಿಕ ಬದುಕು ಬದಿಗಿಟ್ಟು ಸಮಾಜಕ್ಕಾಗಿ ಬದುಕುತ್ತಿದ್ದಾರೆ ಎಂದು ನಿವೃತ್ತ ಕಮಾಂಡೆಂಟ್‌ ಶಿವರಾಜು ತಿಳಿಸಿದರು.

ನಗರ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಗರ ಪೊಲೀಸ್, ಅಶ್ವರೋಹಿ ದಳ, ಕರ್ನಾಟಕ ಪೊಲೀಸ್ಅಕಾಡೆಮಿ, ದಕ್ಷಿಣ ವಲಯ, ಜಿಲ್ಲಾ ಪೊಲೀಸ್, ಕೆಎಸ್ಆರ್ ಪಿ 5ನೇ ಪಡೆ, ಪೊಲೀಸ್ತರಬೇತಿ ಶಾಲೆ, ರಾಜ್ಯ ಗುಪ್ತ ವಾರ್ತೆ, ಡಿಸಿಆರ್ ಇ, ಸೆಸ್ಕ್ ಜಾಗೃತ ದಳ, ಐಎಸ್ ಡಿ, ಲೋಕಾಯುಕ್ತ ಇಲಾಖೆ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ಧ್ವಜ ದಿನಾಚರಣೆಯಲ್ಲಿ ಅವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಶಿಸ್ತು ಸಂಯಮ, ಸಮಯ ಪಾಲನೆಯು ಪೊಲೀಸ್ ಇಲಾಖೆಯ ಬೆನ್ನೆಲುಬು. ಇದರ ಪಾಲನೆಯಿಂದ ವೈಯಕ್ತಿಕ ಬೆಳವಣಿಗೆಯೂ ಆಗುತ್ತದೆ. ನಿವೃತ್ತ ಅಧಿಕಾರಿಗಳ ಕಲ್ಯಾಣಕ್ಕಾಗಿ ಪೊಲೀಸ್‌ ಧ್ವಜ ಮಾರಾಟ ಮಾಡುತ್ತಿದ್ದು, ಕರ್ತವ್ಯ ನಿರತರು ಹೆಚ್ಚಿನ ಧ್ವಜ ಮಾರಾಟ ಮಾಡುವಂತೆ ಅವರು ಸಲಹೆ ನೀಡಿದರು.

ಅಶ್ವದಳ, ಸಿಎಆರ್, ಡಿಎಆರ್, ಕೃಷ್ಣರಾಜ, ನರಸಿಂಹರಾಜ, ದೇವರಾಜ, ಸಂಚಾರ ಉಪ ವಿಭಾಗ, ಮಹಿಳಾ ಪೊಲೀಸ್, ಕೆಎಸ್ಆರ್ ಪಿ ತುಕಡಿಗಳ ಶಿಸ್ತುಬದ್ಧ ಪಥಸಂಚಲನಕ್ಕೆ ಪೊಲೀಸ್ ಬ್ಯಾಂಡ್ ಸಾಥ್ ನೀಡಿದವು.

ಇದೇ ವೇಳೆ ಪೊಲೀಸ್ ಇಲಾಖೆಯಿಂದ ನಿವೃತ್ತರಾದ ವೇದಮೂರ್ತಿ (ಪಿಆರ್ಎಸ್ಐ), ಎಂ.ಎಸ್. ಸುರೇಶ್(ಸಿಪಿಸಿ), ಬಿ.ಎಂ. ಸಂಜೀವ (ಆರ್ಎಸ್ಐ), ಮುತ್ತೇಗೌಡ (ಎಆರ್ಎಸ್ಐ), ಇಂದ್ರಮ್ಮ (ಪಿಎಸ್ಐ), ಕೆ. ಮಹದೇವಯ್ಯ(ಸಿಎಚ್ ಸಿ), ಬಸವಣ್ಣ (ಸಿಎಚ್ ಸಿ), ನಂಜುಂಡಸ್ವಾಮಿ (ಎಆರ್ಎಸ್ಐ), ಎಂ. ಲಿಂಬೋಜಿರಾವ್(ಎಆರ್ಎಸ್ಐ), ಎಂ. ಕೃಷ್ಣಮೂರ್ತಿ (ವಾದ್ಯಗಾರ), ಕೆ. ಸುಬ್ರಮಣಿ (ಅನುಯಾಯಿ), ಯು. ಶ್ರೀನಿವಾಸ್(ಎಎಪಿ), ರಾಜು (ಹಿರಿಯ ಶೀಘ್ರ ಲಿಪಿಕಾರರು), ಎ. ಸುಬ್ಬರಾಯುಡು (ಸಿಎಚ್ ಸಿ), ವೈರಮುಡಯ್ಯ (ಎಎಸ್ಐ), ಎಂ. ಪುಟ್ಟಸ್ವಾಮಿ (ಎಆರ್‌ಐ), ಕೆ. ಕೆಂಪಯ್ಯ (ಆರ್‌ಎಸ್ಐ , ಕಮಲಮ್ಮ (ಎಎಸ್ಐ), ಅಬ್ದುಲ್‌ ಖುದ್ದುಸ್‌ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ವಲಯ ಡಿಐಜಿ ಅಮಿತ್ ಸಿಂಗ್, ನಗರ ಪೊಲೀಸ್ಆಯುಕ್ತ ರಮೇಶ್ಬಾನೋತ್, ಕೆಪಿಎ ನಿರ್ದೇಶಕ ಲೋಕೇಶ್ ಭ ಜಗಲಾಸರ್, ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಡಿಸಿಆರ್ ಇ ಎಸ್ಪಿ ಡಾ.ಬಿ.ಟಿ. ಕವಿತಾ, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಮಾರುತಿ, ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ಮೊದಲಾದವರು ಇದ್ದರು.