ಪರಿಷ್ಕೃತ ಮತದಾರರ ಯಾದಿ: ಮಹಿಳಾ ಮಣಿಗಳ ಸಂಖ್ಯೆ ಜಾಸ್ತಿ

| Published : Mar 23 2024, 01:06 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತಗೊಂಡ ರಾಯಚೂರು ಕ್ಷೇತ್ರದ ಮತದಾರರ ಯಾದಿಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದು ವಿಶೇಷವಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಒಂದು ಬಾರಿಗೂ ಗೆಲ್ಲದ ಮಹಿಳೆಯರು ಮತದಾರರ ಸಂಖ್ಯೆಯಲ್ಲಿ ಮಾತ್ರ ಪುರುಷರಿಗಿಂತ ಹೆಚ್ಚಾಗಿರುವುದು ಗಮನ ಸೆಳೆಯುವಂತೆ ಮಾಡಿದೆ.

ರಾಮಕೃಷ್ಣ ದಾಸರಿ

ರಾಯಚೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತಗೊಂಡ ರಾಯಚೂರು ಕ್ಷೇತ್ರದ ಮತದಾರರ ಯಾದಿಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದು ವಿಶೇಷವಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಒಂದು ಬಾರಿಗೂ ಗೆಲ್ಲದ ಮಹಿಳೆಯರು ಮತದಾರರ ಸಂಖ್ಯೆಯಲ್ಲಿ ಮಾತ್ರ ಪುರುಷರಿಗಿಂತ ಹೆಚ್ಚಾಗಿರುವುದು ಗಮನ ಸೆಳೆಯುವಂತೆ ಮಾಡಿದೆ.

ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಅದೇ ರೀತಿ ಪಕ್ಕದ ಯಾದಗಿರಿಯ 4ರ ಪೈಕಿ 3 ಸೇರಿದಂತೆ ಒಟ್ಟಾರೆ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 9,85,675 ಪುರುಷರು, 10,05,246 ಮಹಿಳೆಯರು, 297 ಇತರೆ ಹಾಗೂ 334 ಸೇವಾ ಮತದಾರರು ಸೇರಿ ಒಟ್ಟು 19,93,755 ಮತದಾರರಿದ್ದು, ಪುರುಷರಿಗಿಂದ 19,571 ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾದಗಿರಿ,ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನ್ವಿ, ದೇವದುರ್ಗ ಮತ್ತು ಲಿಂಗಸುಗೂರಿನಲ್ಲಿ ಮಹಿಳಾ ಮತದಾರ ಸಂಖ್ಯೆ ಪುರುಷರಿಗಿಂತ ಜಾಸ್ತಿಯಿದೆ.

ಕ್ಷೇತ್ರವಾರು ವಿವರ: ಶೋರಾಪುರ (ಸುರಪುರ) ವಿಧಾನಸಭೆ ಕ್ಷೇತ್ರದಲ್ಲಿ 1,41,618 ಪುರುಷರು,1,39,729 ಮಹಿಳೆಯರು, 28 ಇತರೆ ಹಾಗೂ 64 ಸೇವಾ ಸೇರಿ ಒಟ್ಟು 2,81,756 ಮತದಾರರಿದ್ದಾರೆ. ಶಹಾಪುರದಲ್ಲಿ 1,22,523 ಪುರುಷರು,1,22,939 ಮಹಿಳೆಯರು, 15 ಇತರೆ ಹಾಗೂ 28 ಸೇವಾ ಸೇರಿ ಒಟ್ಟು 2,45,770 ಜನ ಅದೇ ರೀತಿ ಯಾದಗಿರಿಯಲ್ಲಿ 1,22,369 ಪುರುಷರು,1,23,864 ಮಹಿಳೆಯರು, 20 ಇತರೆ, 12 ಸೇವಾ ಸೇರಿ ಒಟ್ಟು 2,46.533 ಜನ ಮತದಾರರು ಪಟ್ಟಿಯಲ್ಲಿದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 1,14,829 ಪುರುಷರು,1,19,258 ಮಹಿಳೆಯರು, 54 ಇತರೆ, 25 ಸೇವಾ ಸೇರಿ 2,34,441 ಮತದಾರರಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ 1,19,240 ಪುರುಷರು,1,23,540 ಮಹಿಳೆಯರು, 101 ಇತರೆ, 47 ಸೇವಾ ಸೇರಿ 2,43,178 ಜನರು ಮತದಾರ ಪಟ್ಟಿಯಲ್ಲಿದ್ದಾರೆ. ಮಾನ್ವಿಯಲ್ಲಿ 1,17,383 ಪುರುಷರು,1,23,674 ಮಹಿಳೆಯರು, 64 ಇತರೆ, 44 ಸೇವಾ ಸೇರಿ 2,41,896 ಮತದಾರರು, ದೇವದುರ್ಗದಲ್ಲಿ 1,17,414 ಪುರುಷರು,1,19,627 ಮಹಿಳೆಯರು, 7 ಇತರೆ.20 ಸೇವಾ ಸೇರಿ 2,37,335 ಜನ ಮತದಾರರು ಅದೇ ರೀತಿ ಲಿಂಗಸುಗೂರಿನಲ್ಲಿ 1,29,844 ಪುರುಷರು,1,32,615 ಮಹಿಳೆಯರು, 8 ಇತರೆ, 94 ಸೇವಾ ಸೇರಿದಂತೆ ಒಟ್ಟಾರೆ 2,62,846 ಜನರು ಮತದಾರರ ಯಾದಿಯಲ್ಲಿದ್ದಾರೆ.

--------

ಬಾಕ್ಸ್‌

42,394 ಯುವ ಮತದಾರರು

ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 24,086 ಪುರುಷ, 18,299 ಮಹಿಳೆ, 9 ಇತರೆ ಸೇರಿ ಒಟ್ಟು 42,394 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ. ಶೋರಾಪುರ (ಸುರಪುರ) ವಿಧಾನಸಭೆ ಕ್ಷೇತ್ರದಲ್ಲಿ 3,499 ಪುರುಷ, 2,603 ಮಹಿಳೆ, 02 ಇತರೆ ಸೇರಿ ಒಟ್ಟು 6,107 ಯುವ ಮತದಾರಿದ್ದಾರೆ. ಶಹಾಪುರದಲ್ಲಿ 3,385 ಪುರುಷ, 2,721 ಮಹಿಳೆ, 04 ಇತರೆ ಸೇರಿ ಒಟ್ಟು 6,110 ಯುವಜನ ಅದೇ ರೀತಿ ಯಾದಗಿರಿಯಲ್ಲಿ 3,134 ಪುರುಷ, 2,389 ಮಹಿಳೆ, 01 ಇತರೆ ಸೇರಿ ಒಟ್ಟು 5.524 ಯುವ ಮತದಾರರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 2,932 ಪುರುಷ, 2,158 ಮಹಿಳೆ, 02 ಇತರೆ ಸೇರಿ 5,092 ಮತದಾರರಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ 2,864 ಪುರುಷ, 2,366 ಮಹಿಳೆ ಸೇರಿ 5,230 ಯುವ ಮತದಾರ ಪಟ್ಟಿಯಲ್ಲಿದ್ದಾರೆ. ಮಾನ್ವಿಯಲ್ಲಿ 2,456 ಪುರುಷ, 1,910 ಮಹಿಳೆ ಸೇರಿ 4,366 ಯುವ ಮತದಾರರು, ದೇವದುರ್ಗದಲ್ಲಿ 2,737 ಪುರುಷ, 1,923 ಮಹಿಳೆ ಸೇರಿ 4,660 ಜನ ಹೊಸ ಮತದಾರರು ಇನ್ನು ಲಿಂಗಸುಗೂರಿನಲ್ಲಿ 3,079 ಪುರುಷ,2,229 ಮಹಿಳೆ ಸೇರಿ ಒಟ್ಟು 5,308 ಯುವ ಮತದಾರರ ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ.

--------

22,857 ವಿಕಲಚೇತನ ಮತದಾರರು

ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 12,918 ಪುರುಷ, 9,939 ಮಹಿಳೆ ಸೇರಿ ಒಟ್ಟು 22,857 ವಿಕಲಚೇತನ ಮತದಾರರಿದ್ದಾರೆ. ಶೋರಾಪುರ (ಸುರಪುರ) ವಿಧಾನಸಭೆ ಕ್ಷೇತ್ರದಲ್ಲಿ 2,062 ಪುರುಷ, 1,723 ಮಹಿಳೆ ಸೇರಿ ಒಟ್ಟು 3,785 ದಿವ್ಯಾಂಗ ಮತದಾರಿದ್ದಾರೆ. ಶಹಾಪುರದಲ್ಲಿ 1,131 ಪುರುಷ, 783 ಮಹಿಳೆ ಸೇರಿ ಒಟ್ಟು 1,914 ಹಾಗೂ ಯಾದಗಿರಿಯಲ್ಲಿ 2,063 ಪುರುಷ, 1,704 ಮಹಿಳೆ ಸೇರಿ ಒಟ್ಟು 3.767 ವಿಕಲಚೇತನ ಮತದಾರರು ಪಟ್ಟಿಯಲ್ಲಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 1,895 ಪುರುಷ, 1,345 ಮಹಿಳೆ ಸೇರಿ 3,240 ಮತದಾರರಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ 954 ಪುರುಷ, 832 ಮಹಿಳೆ ಸೇರಿ 1,786 ಅದೇ ರೀತಿ ಮಾನ್ವಿಯಲ್ಲಿ 1,639 ಪುರುಷ, 1,230 ಮಹಿಳೆ ಸೇರಿ 2,869 ಮತದಾರರಿದ್ದಾರೆ. ದೇವದುರ್ಗದಲ್ಲಿ 1,485 ಪುರುಷ, 1,072 ಮಹಿಳೆ ಸೇರಿ 2,557 ಜನ ಇನ್ನು ಲಿಂಗಸುಗೂರಿನಲ್ಲಿ 1,689 ಪುರುಷ, 1,250 ಮಹಿಳೆ ಸೇರಿ ಒಟ್ಟು 2,939 ವಿಶೇಷ ಚೇತನ ಮತದಾರರಿದ್ದಾರೆ.