ಜಗಜೀವನ್‌ರಿಂದ ಕ್ರಾಂತಿಕಾರಕ ಸುಧಾರಣೆ: ಗೋಪಾಲ್ ಪಿ.ಆರ್.

| Published : Apr 06 2024, 12:45 AM IST

ಜಗಜೀವನ್‌ರಿಂದ ಕ್ರಾಂತಿಕಾರಕ ಸುಧಾರಣೆ: ಗೋಪಾಲ್ ಪಿ.ಆರ್.
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜನೆ ಮಾಡಿದ್ದ ಡಾ.ಬಾಬು ಜಗಜೀವನ್ ರಾಂರ ೧೧೭ನೇ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಗೋಪಾಲ್ ಪಿ.ಆರ್. ಮಾತನಾಡಿದರು.

ಡಾ.ಬಾಬು ಜಗಜೀವನ್ ರಾಂ ೧೧೭ನೇ ಜಯಂತಿ

ಹೊಳೆನರಸೀಪುರ: ಡಾ. ಬಾಬು ಜಗಜೀವನ್ ರಾಂ ಕಾರ್ಮಿಕರು ೧೦ ರಿಂದ ೧೨ ಗಂಟೆ ಕೆಲಸ ಮಾಡುತ್ತ ಅನುಭವಿಸುವ ಹಿಂಸೆ ಮನಗಂಡು ೮ ಗಂಟೆಗೆ ಕೆಲಸದ ಅವಧಿ ನಿಗಧಿಪಡಿಸಿ, ಕಾಂತ್ರಿಕಾರಕ ಸುಧಾರಣೆ ತಂದರು ಎಂದು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಗೋಪಾಲ್ ಪಿ.ಆರ್. ಅಭಿಪ್ರಾಯುಪಟ್ಟರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜನೆ ಮಾಡಿದ್ದ ಡಾ.ಬಾಬು ಜಗಜೀವನ್ ರಾಂರ ೧೧೭ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ದೇಶದಲ್ಲಿ ತುಳಿತಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಜನಾಂಗದವರು ವಾಸಿಸುವ ಕೇರಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಿ, ಬಡ ಜನರಿಗೆ ಶುದ್ಧ ಕುಡಿಯುವ ನೀರು ದೊರಕಿಸಿದರು. ಕೃಷಿ ಸಚಿವರಾಗಿದ್ದಾಗ ರೈತರ ಪರವಾದ ಅನೇಕ ಸುಧಾರಣೆಯ ಕಾನೂನು ರೂಪಿಸಿ ಹಸಿರು ಕ್ರಾಂತಿಯ ಹರಿಹಾರ ಎಂದು ಬಿರುದಿಗೆ ಪಾತ್ರರಾದರು ಎಂದು ತಿಳಿಸಿದರು.

ತಾಲೂಕು ಉಪ ಚುನಾವಣಾಧಿಕಾರಿ ಸತೀಶ್ ಬಾಬು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಹಸೀಲ್ದಾರ್ ಪ್ರವೀಣ್ ಕುಮಾರ್ ಪಿ.ಸಿ., ತಾಪಂ ಇಒ ಕುಸುಮಾಧರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ತಾಲೂಕು ಅಗ್ನಿಶಾಮಕ ಠಾಣಾಧಿಕಾರಿ ಸೋಮಶೇಖರ್, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ಶಿರಸ್ತೇದಾರ ಲೋಕೇಶ್, ಉಪವಲಯ ಅರಣ್ಯಾಧಿಕಾರಿ ಪ್ರದೀಪ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಚಿಕ್ಕಲಿಂಗೇಗೌಡ, ತಾಪಂ ಮಾಜಿ ಅಧ್ಯಕ್ಷ ಹಾಗೂ ಮಾದಿಗ ದಂಡೋರ ಸಮಿತಿಯ ಮುಖಂಡ ಸಿ.ಆರ್.ಮಂಜುನಾಥ್, ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ರವಿಕುಮಾರ್, ಕುಪ್ಪೆ ಉಮೇಶ್ ಇದ್ದರು.

ಹೊಳೆನರಸೀಪುರದಲ್ಲಿ ಶುಕ್ರವಾರ ಆಯೋಜನೆ ಮಾಡಿದ್ದ ಡಾ. ಬಾಬು ಜಗಜೀವನ್ ರಾಂ ೧೧೭ನೇ ಜಯಂತಿ ಕಾರ್ಯಕ್ರಮಕ್ಕೆ ಉಪ ಚುನಾವಣಾಧಿಕಾರಿ ಸತೀಶ್ ಬಾಬು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.