ಸಾರಾಂಶ
- ದಾನಿಗಳು, ವಾಗ್ಮಿ, ಗಾಯಕಿ ಶ್ಯಾಮಲ ಮಂಜುನಾಥ್ ಅವರಿಗೆ ಸನ್ಮಾನ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಭೌದ್ದಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯೇ ಶ್ರೇಷ್ಠವಾದುದು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಪಿ.ರಾಜಪ್ಪ ಹೇಳಿದ್ದಾರೆ.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ದಾನಿ, ವಾಗ್ಮಿ, ಗಾಯಕಿ ಶ್ಯಾಮಲ ಮಂಜುನಾಥ್ ಅವರಿಗೆ ಸನ್ಮಾನಿಸಿ ಮಾತನಾಡಿ ನಾಡು, ನುಡಿ, ಕಲೆ, ಸಾಹಿತ್ಯ. ಸಂಸ್ಕೃತಿ, ಸಮಾಜ ಸೇವೆಯಲ್ಲಿ ಹಾಗೂ ಅಭಿಮಾನವುಳ್ಳವರಾಗಿ ನಿರಂತರ ಸೇವೆಗೈಯುತ್ತಿರುವುದು ಅಭಿನಂದನೀಯ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ದಾನಿಗಳಾದ ಶ್ಯಾಮಲ ಮಂಜುನಾಥ್ ಅವರು ಉತ್ತಮ ಸಂಘಟಕರಾಗಿ ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿರುವುದು ಸ್ತುತ್ಯಾರ್ಹ. ಅವರಿಂದ ಸ್ಥಾಪನೆಯಾದ ಮಹಿಳಾ ಸಮಾಜ ಹೆಮ್ಮರವಾಗಿ ಬೆಳೆದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಮಾತನಾಡಿ ಕನ್ನಡ ಭಾಷಾ ಪ್ರೇಮಿಯಾಗಿ, ಪರಿಷತ್ತಿನ ಹಿರಿಯ ಸದಸ್ಯರಾಗಿ, ನಾಡಿನ ಹಿತಚಿಂತಕರಾಗಿ ಶರಣ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಅಧ್ಯಯನ ಮಾಡಿ ಜ್ಞಾನನಿಧಿ ಯಾರಿರುವಿರಿ ಎಂದು ಹೇಳಿದರು.ಗೌರವ ಕಾರ್ಯದರ್ಶಿ ನಾಗೇನಹಳ್ಳಿ ತಿಮ್ಮಯ್ಯ ಮಾತನಾಡಿ ಕೊಡುಗೈ ದಾನಿಗಳ ವಂಶಸ್ಥರಾದ ನೀವು ಕನ್ನಡ ಭವನ ನಿರ್ಮಾಣ ಮಾಡಲು ನಿವೇಶನ ದಾನ ಮಾಡಿರುವುದು ಪ್ರಶಂಸನಾರ್ಹ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಬಾದ ಎನ್.ಜಿ.ಚಂದ್ರಶೇಖರಪ್ಪ ಅವರು ಮಾತನಾಡಿ 12ನೇ ಶತಮಾನದಲ್ಲಿ ಉದಯಿಸಿದ ಶಿವಶರಣೆಯರ ಅನುಭವ ಮಂಟಪದ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡು ಲೋಕಾನುಭವದ ವೈಚಾರಿಕ ನೆಲಗಟ್ಟಿನಲ್ಲಿ ಲೋಕಕ್ಕೆ ಸತ್ಯದ ಬೆಳಕನ್ನು ವಚನ ಸಾಹಿತ್ಯದ ಮೂಲಕ ಬೆಳಕನ್ನು ತೋರಿ ಐಕ್ಯಳಾದ ಶಿವಶರಣೆ ಅಕ್ಕನಾಗಲಾಂಬಿಕೆ ಗದ್ದುಗೆ ನಿರ್ಮಾಣ ಪವಿತ್ರ ಕಾರ್ಯದಲ್ಲಿ ತಾವು ಸಕ್ರಿಯವಾಗಿ ತೊಡಗಿರುವುದು ಅಭಿನಂದನೀಯ ಎಂದರು.ಜಾನಪದ ಕಲಾವಿದ ಸಿ.ಎಂ.ಶಂಕರಪ್ಪ, ವೀರಕನ್ನಡಿಗ ಆರ್.ನಾಗೇಶ್, ಉಮಾಪ್ರಕಾಶ್ ಅವರು ವಚನ ಗಾಯನನಡೆಸಿಕೊಟ್ಟರು. ದಾನಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.
25ಕೆಟಿಆರ್.ಕೆ.1ತರೀಕೆರೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ದಾನಿಗಳು, ವಾಗ್ಮಿ, ಗಾಯಕಿ ಶ್ಯಾಮಲ ಮಂಜುನಾಥ್ ಅವರಿಗೆ ಸನ್ಮಾನ ಸಮಾರಂಭ ನಡೆಯಿತು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜಪ್ಪ, ಕನ್ನಡಶ್ರೀ ಬಿ.ಎಸ್.ಭಗವಾನ್ ಮತ್ತಿತರರು ಇದ್ದರು.