ಮರೆತು ಹೋದ ಬ್ಯಾಗನ್ನು ವಾರೀಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

| Published : Aug 25 2025, 01:00 AM IST

ಮರೆತು ಹೋದ ಬ್ಯಾಗನ್ನು ವಾರೀಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಮೂಲದ ದಂಪತಿಗಳು ತನ್ನ ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಡ್ಮಿಶನ್ ಪಡೆಯಲು ಶನಿವಾರ ಸುರತ್ಕಲ್ ಎನ್ಐಟಿಕೆಯ ವಿದ್ಯಾಸಂಸ್ಥೆಗೆ ಬಂದಿದ್ದರು, ತಮ್ಮ ಕೆಲಸ ಮುಗಿಸಿ ಮಂಗಳೂರಿನ ಸಿಟಿ ಸೆಂಟರ್ ಕಡೆಗೆ ಹಳೆಯಂಗಡಿಯ ರಿಕ್ಷಾ ಚಾಲಕ ಚಂದ್ರಶೇಖರ್ ಎಂಬವರ ಆಟೋದಲ್ಲಿ ತೆರಳಿ ಅಮೂಲ್ಯ ವಸ್ತುಗಳಿದ್ದ ಬ್ಯಾಗನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಹಳೆಯಂಗಡಿಯಲ್ಲಿ ರಿಕ್ಷಾದಲ್ಲಿ ಮರೆತು ಹೋದ ಅಮೂಲ್ಯ ವಸ್ತುಗಳಿದ್ದ ಬ್ಯಾಗನ್ನು ರಿಕ್ಷಾ ಚಾಲಕನೋರ್ವ ವಾರಿಸುದಾರರಿಗೆ ಹಿಂದಿರುಗಿಸಿದ ಘಟನೆ ನಡೆದಿದೆ.

ಬೆಂಗಳೂರು ಮೂಲದ ದಂಪತಿಗಳು ತನ್ನ ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಡ್ಮಿಶನ್ ಪಡೆಯಲು ಶನಿವಾರ ಸುರತ್ಕಲ್ ಎನ್ಐಟಿಕೆಯ ವಿದ್ಯಾಸಂಸ್ಥೆಗೆ ಬಂದಿದ್ದರು, ತಮ್ಮ ಕೆಲಸ ಮುಗಿಸಿ ಮಂಗಳೂರಿನ ಸಿಟಿ ಸೆಂಟರ್ ಕಡೆಗೆ ಹಳೆಯಂಗಡಿಯ ರಿಕ್ಷಾ ಚಾಲಕ ಚಂದ್ರಶೇಖರ್ ಎಂಬವರ ಆಟೋದಲ್ಲಿ ತೆರಳಿ ಅಮೂಲ್ಯ ವಸ್ತುಗಳಿದ್ದ ಬ್ಯಾಗನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು. ಅಲ್ಲಿಂದ ವಾಪಸ್ ಹಳೆಯಂಗಡಿಯ ಕಡೆ ಬಂದ ರಿಕ್ಷಾ ಚಾಲಕ ಚಂದ್ರಶೇಖರ್ ಹಿಂದುಗಡೆ ಬ್ಯಾಗ್ ಇದ್ದದ್ದನ್ನು ಗಮನಿಸಿ ಪರಿಶೀಲಿಸಿದಾಗ ಅದರಲ್ಲಿ ನಗದು ಸಹಿತ ಲ್ಯಾಪ್ಟಾಪ್ ಮೊಬೈಲ್, ಚಾರ್ಜರ್ ಹಾಗೂ ಇನ್ನಿತರ ಅಮೂಲ್ಯ ದಾಖಲೆ ಪತ್ರಗಳು ಇದ್ದವು, ಈ ಬಗ್ಗೆ ತಕ್ಷಣ ಹಳೆಯಂಗಡಿ ರಿಕ್ಷಾ ಚಾಲಕ ಮಾಲಕರ ಸಂಘಕ್ಕೆ ಮಾಹಿತಿ ನೀಡಿದ್ದು ದಾಖಲೆ ಪತ್ರದಲ್ಲಿ ಇದ್ದ ಫೋನು ನಂಬರ್ ಮುಖಾಂತರ ವಾರಿಸುದಾರರನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು. ಬಳಿಕ ಹಳೆಯಂಗಡಿಗೆ ಆಗಮಿಸಿದ ವಾರಿಸುದಾರರಿಗೆ ಅಮೂಲ್ಯ ವಸ್ತುಗಳಿದ್ದ ಬ್ಯಾಗನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ರಿಕ್ಷಾ ಚಾಲಕರಾದ ಅಶ್ರಫ್ ಪಡುತೋಟ, ಜೇಮ್ಸ್ ಕರ್ಕಡ, ಮದನಿ ಮೋನು, ಅಶ್ರಫ್ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು.