ಸದನದಲ್ಲಿ ಒಳಮೀಸಲಾತಿ ಪ್ರಸ್ತಾಪಕ್ಕೆ ಶಾಸಕರಿಗೆ ಬಲಗೈ ನಾಯಕರ ಮನವಿ
Author : KannadaprabhaNewsNetwork
Published : Mar 08 2026, 01:30 AM IST
ಒಳಮೀಸಲಾತಿಯಿಂದ ಬಲಗೈ ಸಂಬಂಧಿಸಿದ ಜಾತಿಗಳಿಗೆ ಅನ್ಯಾಯ ಆಗುವುದನ್ನು ಕುರಿತು ಶಾಸನ ಸಭೆಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಗಡಿ ಕಟ್ಟೆ ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟ ,ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha
Image Credit: KP
ಒಳಮೀಸಲಾತಿಯಿಂದ ಬಲಗೈ ಸಂಬಂಧಿಸಿದ ಜಾತಿಗಳಿಗೆ ಅನ್ಯಾಯ ಆಗುವುದನ್ನು ಕುರಿತು ಶಾಸನ ಸಭೆಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಗಡಿ ಕಟ್ಟೆ ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟ, ಡಾ.ಬಿ.ಆರ್. ಅಂಬೇಡ್ಕರ್ ಮಹಾಸಭಾ ವತಿಯಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಒಳಮೀಸಲಾತಿಯಿಂದ ಬಲಗೈ ಸಂಬಂಧಿಸಿದ ಜಾತಿಗಳಿಗೆ ಅನ್ಯಾಯ ಆಗುವುದನ್ನು ಕುರಿತು ಶಾಸನ ಸಭೆಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಗಡಿ ಕಟ್ಟೆ ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟ, ಡಾ.ಬಿ.ಆರ್. ಅಂಬೇಡ್ಕರ್ ಮಹಾಸಭಾ ವತಿಯಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.ಸರ್ಕಾರವು ತರಾತುರಿಯಲ್ಲಿ ಒಳಮೀಸಲಾತಿ ಪಾಸ್ ಮಾಡಲು ಹೊರಟಿರುವುದು ಪರಿಶಿಷ್ಟ ಜಾತಿಯ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಕುರಿತು ಶಾಸನ ಸಭೆಯಲ್ಲಿ ಸಮರ್ಥವಾಗಿ ಮಾತನಾಡಿ, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವನ್ನು ಒತ್ತಾಯ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಆದಿಕರ್ನಾಟಕ ಮಹಾಸಭಾದ ಅಧ್ಯಕ್ಷ ಉಮೇಶ್ ಕುದರ್, ಗೌರವಾಧ್ಯಕ್ಷ ಸಿ.ಕೆ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಣೇಶ್‌ಪ್ರಸಾದ್, ನಗರಸಭಾ ಮಾಜಿ ಸದಸ್ಯ ಬಸವರಾಜು, ತಾ.ಪಂ.ಮಾಜಿ ಸದಸ್ಯ ಶಿವಸ್ವಾಮಿ, ಗ್ರಾ.ಪಂ.ಮಾಜಿ ಅಧ್ಯಕ್ಷ ರೇಚಂಬಳ್ಳಿ. ವಾಸು, ಗಾಳೀಪುರ ಪುಟ್ಟಸ್ವಾಮಿ ರಂಗಸ್ವಾಮಿ, ಕುಂಭೇಶ್ವರ ಸ್ವಾಮಿ ರಾಮಸಮುದ್ರ ಸುರೇಶ್, ಶಿವರಾಜ್ ಸಿದ್ದಯ್ಯನಪುರ ಇತರರು ಹಾಜರಿದ್ದರು.
---
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.